‘ಭಜರಂಗಿ’ ನಟಿ ರುಕ್ಮಿಣಿಯ ₹10ಲಕ್ಷದ ಡೈಮಂಡ್ ರಿಂಗ್, ₹9ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ಕದ್ದ ಕ್ಯಾಬ್ ಚಾಲಕ ಸೆರೆ


ಬೆಂಗಳೂರು: ‘ಭಜರಂಗಿ’ ಖ್ಯಾತಿಯ ನಟಿ ರುಕ್ಮಿಣಿ ವಿಜಯಕುಮಾರ್ ಅವರ 10 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಮತ್ತು 9 ಲಕ್ಷ ಮೌಲ್ಯದ ರಿಂಗ್ ಕದ್ದ ಆರೋಪಿ ಕ್ಯಾಬ್ ಚಾಲಕ ಮೊಹಮ್ಮದ್ ಮಸ್ತಾನ್‌ನನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದು, ಕದ್ದ ವಸ್ತುಗಳನ್ನು ವಶಕೆ ಪಡೆದುಕೊಂಡಿದ್ದಾರೆ.
ಮೇ 11 ರಂದು ಬೆಳಗ್ಗೆ ನಟಿ ವಾಕಿಂಗೆಂದು ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಸಂಖ್ಯೆ 18 ರ ಬಳಿ ರುಕ್ಮಿಣಿ ತನ್ನ ಕಾರನ್ನು ನಿಲ್ಲಿಸಿದ್ದರು. ಅವರು ತಮ್ಮ ಕಾರಿನೊಳಗೆ ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್, ಪರ್ಸ್, ಎರಡು ವಜ್ರದ ಉಂಗುರಗಳು ಮತ್ತು ರೋಲೆಕ್ಸ್ ವಾಚ್‌ಅನ್ನು ಬಿಟ್ಟು ಹೋಗಿದ್ದರು.

ಈ ವೇಳೆ ಅವರು ವಾಕಿಂಗೆ ಹೋಗುವ ಭರದಲ್ಲಿ ತಮ್ಮ ಕಾರನ್ನು ಲಾಕ್ ಮಾಡಲು ಮರೆತಿದ್ದರು. ಇದನ್ನು ಗಮನಿಸಿದ ಕ್ಯಾಬ್ ಚಾಲಕ ಮೊಹಮ್ಮದ್ ಕಾರಿನೊಳಗಿನ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ, ಸದ್ಯ ಈಗ ಬ್ಯಾಗ್ ಸೇರಿದಂತೆ ದುಬಾರಿ ವಸ್ತುಗಳನ್ನು ಕದ್ದ ಮೊಹಮ್ಮದ್ ಪೊಲೀಸರ ಅತಿಥಿಯಾಗಿದ್ದಾನೆ.
ಇನ್ನು ಅಂದು ಅಂದರೆ ಮೇ 11ರಂದು ಘಟನೆ ನಡೆದ ತಕ್ಷಣ ನಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಪೊಲೀಸರು ಕಳ್ಳನ ಪತ್ತೆ ಕಾರ್ಯ ಆರಂಭಿಸಿದರು. ಮೂರೇ ದಿನದಲ್ಲೇ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಕದ್ದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿ 1,50,000 ರೂ. ಮೌಲ್ಯದ ಬ್ಯಾಗ್, 75,000 ರೂ. ಮೌಲ್ಯದ ಪರ್ಸ್, 10 ಲಕ್ಷ ರೂ. ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಮತ್ತು 3 ಲಕ್ಷ ರೂ. ಮೌಲ್ಯದ ಡೈಮಂಡ್ ರಿಂಗ್ ಸೇರಿದಂತೆ ಒಟ್ಟು 23 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದಿದ್ದ.
ಇನ್ನು ನಟಿ ರುಕ್ಮಿಣಿ ವಿಜಯಕುಮಾರ್ ಅವರು ಶಿವಣ್ಣನ ಭಜರಂಗಿ ಚಿತ್ರದಲ್ಲಿ ರುಕ್ಮಿಣಿ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತಮಿಳು ಚಿತ್ರಗಳಾದ ಕೊಚ್ಚಡಿಯಾನ್ ಮತ್ತು ಹಿಂದಿ ಚಿತ್ರಗಳಾದ ಶಮಿತಾಭ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
Related








