NEWSVideosನಮ್ಮರಾಜ್ಯ

NWKRTC: ಸಾರಿಗೆ ನೌಕರರ ವೇತನ ಹೆಚ್ಚಳ ಯಾವಾಗ? ನಾಟಕದ ಮೂಲಕ ಸರ್ಕಾರದ ಗಮನ ಸೆಳೆದ ನಗರ ಸಾರಿಗೆ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ರಾಜ್ಯದಲ್ಲಿರುವ ನಮ್ಮ ಸಾರಿಗೆ ನಿಗಮಗಳ ಅಧಿಕಾರಿಗಳು – ನೌಕರರಲ್ಲಿ ಹಾಗೂ ನೌಕರರು – ನೌಕರರಲ್ಲೇ ಒಗ್ಗಟ್ಟಿಲ್ಲ. ಪರಿಣಾಮ ನಾಲ್ಕೂ ನಿಗಮಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹೀಗಾಗಿ ಮೊದಲು ನೀವು ಒಗ್ಗೂಡಿ ಎಲ್ಲವೂ ಸಾಧ್ಯವಾಗಲಿದೆ ಎಂದು NWKRTC ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಮತ್ತೊಮ್ಮೆ ಕಿವಿ ಮಾತು ಹೇಳಿದ್ದಾರೆ.

ಬಸವ ಜಯಂತಿ ಅಂಗವಾಗಿ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಆಯೋಜಿಸಿದ್ದ ಬಸವ ಜಯಂತಿ ಉತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಲಾದರೂ ಎಲ್ಲರೂ ಒಗ್ಗಟ್ಟಾಗಿಗಿ ಇಲ್ಲದ್ದಿದ್ದರೆ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇನ್ನು ನೀವು ಒಬ್ಬರ ಕಾಲು ಒಬ್ಬರು ಎಳೆದುಕೊಳ್ಳುವ ಜತೆಗೆ ಪೊಲೀಸ್‌ ಪ್ರಕರಣಗಳನ್ನು ಹಾಕುವುದು. ಇದೆಲ್ಲವನ್ನು ನಾನು ಅಧ್ಯಕ್ಷನಾಗಿ ಬಂದಾಗಿನಿಂದಲೂ ಕಂಡಿದ್ದೀನಿ ಇದನ್ನು ಭಾರಿ ನೋವಿನಿಂದ ಹೇಳುತ್ತಿದ್ದೇನೆ ಎಂದರು.

ಇನ್ನು ಚಾಲನಾ ಸಿಬ್ಬಂದಿಗಳು ಮಾಡದ ತಪ್ಪಿಗೆ ಅಧಿಕಾರಿಗಳು ವಜಾ, ಅಮಾನತು ಮತ್ತು ವರ್ಗಾವಣೆಯಂತ ಶಿಕ್ಷೆ ಕೊಡುತ್ತಿದ್ದಾರೆ. ಬಸ್‌ ಇಳಿಯುವುದಕ್ಕೆ ಮುಂದಾಗಿ ಯಾರೋ ಬಿದ್ದು ಮೃತಪಟ್ಟರೆ ಇಲ್ಲಿ ಚಾಲನಾ ಸಿಬ್ಬಂದಿಗಳನ್ನು ಹೊಣೆ ಮಾಡಿ ಅಮಾನತು ಮಾಡುತ್ತಾರೆ.

ಅಧಿಕಾರಿಗಳು ಏನೆ ಆದರೂ ನೌಕರರ ಪರ ನಿಲ್ಲಬೇಕು. ಅದನ್ನು ಬಿಟ್ಟು ಅವರ ವಿರುದ್ಧ ನಿಂತರೆ ಅವರ ಪಾಡೇನು. 8ತಾಸು ಹಳ್ಳಿ ಹಳ್ಳಿಗಳಿಗೆ ಸರಿ ಇಲ್ಲದ ಹಳ್ಳ ಕೊಳ್ಳಗಳ ರಸ್ತೆಗಳಲ್ಲಿ ಬಸ್‌ ಓಡಿಸುತ್ತಾರೆ. ಈ ವೇಳೆ ಜನರು ಅವರನ್ನು ಎಷ್ಟು ರೀತಿ ಬೈದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೂ ಅವರು ಅದ್ಯಾವುದನ್ನು ಮನಸ್ಸಿನಲ್ಲಿ ಇಟ್ಟಿಕೊಳ್ಳದೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಾರೆ.

ಇಷ್ಟೆಲ್ಲ ಕಷ್ಟಪಡುವ ನೌಕರರ ಪರವಾಗಿ ನಿಲ್ಲಬೇಕು. ಒಂದು ವೇಳೆ ಸಾವು ನೋವುಗಳಾದಗ ಬಸ್‌ ಮತ್ತು ಚಾಲನಾ ಸಿಬ್ಬಂದಿಗಳನ್ನು ಕಾನೂನಾತ್ಮಕವಾಗಿ ಬಿಡಿಸಿಕೊಂಡು ಬರಬೇಕು ಎಂಬ ದೃಷ್ಟಿಯಿಂದ ಕಾನೂನು ವಿಭಾಗ ಇದೆ. ಆದರೆ, ಆ ಕಾನೂನು ವಿಭಾಗದ ಅಧಿಕಾರಿಗಳು ಮಾಡುತ್ತಿರುವುದು ಏನು? ನೌಕರರ ವಿರುದ್ಧವೇ ಪ್ರಕರಣ ದಾಖಲಿಸುವುದು. ಬಳಿಕ ಅವರಿಗೆ ಬೇಲ್‌ ವ್ಯವಸ್ಥೆ ಮಾಡದೆ ನ್ಯಾಯಾಂಗ ಬಂಧನಕ್ಕೆ ಬಿಡುವುದಾ? ಇದು ಮೊದಲು ನಿಲ್ಲಬೇಕು ಎಂದು ಹೇಳಿದರು.

ಇನ್ನು ನಾನು ಅಧ್ಯಕ್ಷನಾಗಿ ಬಂದಾಗಿನಿಂದ ಗಮನಿಸಿದಾಗ ನಮಗೆ ತಿಳಿದು ಬಂದಿದ್ದು ನೌಕರರು ಅಧಿಕಾರಿಗಳಲ್ಲಿ ಒಗ್ಗಟ್ಟಿಲ್ಲದಿರುವುದು ಜತೆಗೆ ನೌಕರರು ನೌಕರರಲ್ಲೇ ಹೊಂದಾಣಿಕೆ ಇಲ್ಲದಿರುವುದರಿಂದ ಪೊಲೀಸ್‌ ಪ್ರಕರಣಗಳು ದಾಖಲಾಗುತ್ತಿವೆ ಇವೆಲ್ಲವನ್ನು ಬಿಡಬೇಕು. ಇನ್ನು ವೇತನಕ್ಕಾಗಿ ಹೋರಾಟ ಮಾಡಿದ 2500 ನೌಕರರನ್ನು ಅಮಾನತು, ವಜಾ, ವರ್ಗಾವಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಖುಷಿಯಿಂದ ಹೇಳುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.

ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸ್ಥೆಯ ನೌಕರರು ವೇತನ ಹೆಚ್ಚಳ ಆಗದಿರುವ ಬಗ್ಗೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ನಾಟಕ ಪ್ರದರ್ಶನದ ಮೂಲಕ ಭಾರಿ ಅಚ್ಚುಕಟ್ಟಾಗಿ ಸರ್ಕಾರದ ಮನ ಮುಟ್ಟುವಂತೆ ಅಭಿನಯಿಸಿದರು.

ಈ ನಾಟಕವನ್ನು NWKRTC ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಕೂಡ ನೋಡಿದರು. ನೌಕರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದು ಶೀಘ್ರದಲ್ಲೇ ಪರಿಹಾರ ಕೊಡಿಸುವ ಭರವಸೆ ನೀಡಿದರು.

Megha
the authorMegha

Leave a Reply

error: Content is protected !!