ಚಾಮರಾಜನಗರ: ಅನ್ನದಾತರ ರಾಜ್ಯ ಮಟ್ಟದ ರೈತ ಸಮಾವೇಶವನ್ನು ಕಲಬುರಗಿಯಲ್ಲಿ ಡಿಸೆಂಬರ್ 23ರ ವಿಶ್ವ ರೈತ ದಿನಾಚರಣೆಯಂದು ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪದಾಧಿಕಾರಿಗಳು ತಿಳಿಸಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪದಾಧಿಕಾರಿಗಳು, ವಿಶ್ವ ರೈತ ದಿನದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಅನ್ನದಾತನನ್ನು ನೆನೆಯುವ ದಿನ ವಿಶ್ವ ರೈತ ದಿನ. ಹೀಗಾಗಿ ಅಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನ ಪ್ರಗತಿಪರ ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ರಾಜ್ಯದ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಸೆಳೆಯಲು ಈ ಸಮಾವೇಶಕ್ಕೆ ಕೇಂದ್ರದ ಹಾಗೂ ರಾಜ್ಯದ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಮೂಲಕ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ
ಭಾಗವಹಿಸಲ್ಲಿದ್ದಾರೆ ಎಂದು ವಿವರಿಸಿದರು.
ಇನ್ನು ರೈತರ ಸಮಸ್ಯೆಗಳಾದ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದ ಅತಿವೃಷ್ಟಿ ಮಳೆ ಆನಿ ಬೆಳೆ ನಷ್ಟ ಪರಿಹಾರ ಎಕ್ಕರೆಗೆ 25000 ರೂ. ನೀರಾವರಿ ಬೆಳೆ ನಾಶ ಎಕರೆಗೆ 40,000 ರೂ. ತೋಟಗಾರಿಕೆ 60,000 ರೂ. ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಲಿ ಭೂಮಿ ಮೌಲಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಲಿ. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೃಷಿ ಭೂಮಿ ಮುಟ್ಟುಗೊಲು ಕಾಯ್ದೆ ರದ್ದಾಗ ಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಲಿ. ನಗಲಿ ಬಿತ್ತನೆ ಬೀಜ ನಕಲಿ ರಸಗೊಬ್ಬರ ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಇನ್ನು ಕೃಷಿ ಭೂಮಿ ನೀರು ಅರಣ್ಯ ಪರಿಸರ ರಕ್ಷಿಸಲು ಜಲಾಶಯಗಳ ಕೆರೆಕಟ್ಟೆಗಳ ಉಳು ತೆಗೆಸಲು ಕಾರ್ಯ ಯೋಜನೆ ಜಾರಿಯಾಗಲಿ. ಕಬ್ಬಿನ ಎಫ್ ಆರ್ ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಠಿಣ ಕಾನೂನು ಜಾರಿಯಾಗಬೇಕು.
ಫಸಲ್ ಭೀಮ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಲಿ ಪ್ರತಿ ರೈತರ ಹೊಲದಲ್ಲಿ ಬೆಳೆವಿಮೆ ನಷ್ಟ ಪರಿಹಾರ ವಿಮೆ ಸಿಗುವಂತಾಗಲಿ. ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಂದ 10% ಕಮಿಷನ್ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ. ಎನ್ ಡಿ ಆರ್ ಎಫ್ ಮಾನದಂಡ ಬದಲಾಗಲಿ ಅತಿವೃಷ್ಟಿ ಮಳೆ ಆನಿ ಬರ ಪರಿಹಾರ ಪ್ರಕೃತಿ ವಿಕೋಪ ಪರಿಹಾರ ಮಾನದಂಡ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು.
ರೈತರ ಗಂಡು ಮಕ್ಕಳ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ 20ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ಬರಲಿ. ತೆಲಂಗಾಣ ಮಾದರಿಯಲ್ಲಿ 60ವರ್ಷ ತುಂಬಿದ ರೈತರಿಗೆ 10,000 ಸಾವಿರ ಪಿಂಚಣಿ ನೀಡುವ ಯೋಜನೆ ಜಾರಿಗೆ ಬರಬೇಕು. ರಾಜ್ಯದಲ್ಲಿ 10 ಲಕ್ಷ ರೈತರು ಬಗರ್ ಉಘಂ ಸಾಗುವಳಿ ಮಾಡುತ್ತಿದ್ದಾರೆ ಕೂಡಲೇ ಬೇಸರತ್ತಾಗಿ ಸಾಗುವಳಿ ಪತ್ರ ನೀಡಬೇಕು.
ಕೃಷಿ ಪುಂಸೆಟ್ ಗಳಿಗೆ ಹಗಲು ವೇಳೆ ಹತ್ತು ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು. ಕೃಷಿ ಸಾಲ ವಸು ಲಾತಿಗಾಗಿ ರೈತರ ಜಮೀನು ಹೊಸಪಡಿಸಿಕೊಳ್ಳುವ ಸರ್ಫೈಸಿ ಕಾಯ್ದೆ ರದ್ದುಗೊಳಿಸಬೇಕು. ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಸಕ್ಕರೆ ಇಳುವರಿ 11. 30 ಬರುತ್ತದೆ ಸಕ್ಕರೆ ಕಾರ್ಖಾನೆಗಳು ಮೋಸ ಮಾಡಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಆದ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ನಿಗದಿಪಡಿಸಿದ ದರ ಕಲಬುರ್ಗಿ ಜಿಲ್ಲೆಯ ರೈತರಿಗೆ ಕೂಡ ಕೊಡಿಸಲೇಬೇಕು. ಕಬ್ಬಿಗೆ ಬೆಂಕಿ ಬಿದ್ದಾಗ ಪ್ರವಾಹ ಆನೆಯಾದಾಗ ಪ್ರಕೃತಿ ವಿಕೋಪ ನಷ್ಟವಾದಾಗ ಬೆಳೆ ವಿಮೆ ಪರಿಹಾರ ಜಾರಿಗೆ ತರಬೇಕು.
ಈ ಎಲ್ಲ ಒತ್ತಾಯಗಳ ಬಗ್ಗೆ ರೈತರ ಹಬ್ಬದ ದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ರೈತರು ರೈತ ಸಂಘಟನೆಯ ಮುಖಂಡರುಗಳು ಸ್ವಾಭಿಮಾನಿಗಳಾಗಿ ಸ್ವಯಂ ಪ್ರೇರಿತರಾಗಿ ರೈತರ ಹಬ್ಬ ಆಚರಿಸಲು ಕಲಬುರಗಿಗೆ ಬನ್ನಿ ರೈತರ ಕೂಗು ಸರ್ಕಾರಕ್ಕೆ ಮುಟ್ಟಿಸೋಣ ಎಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮೂಡಲಪುರ ಪಟೇಲ್ ಶಿವಮೂರ್ತಿ, ಜಿಲ್ಲಾ ಕಾರ್ಯಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಮೂಕಳ್ಳಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷರಾದ ನಂಜೆ ದೇವನಪುರ ಸತೀಶ್, ಉಪಾಧ್ಯಕ್ಷ ಹೇಗ್ಗಟ್ಟಾರ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ಉಡಿಗಾಲ ಸುಂದ್ರಪ್ಪ ರೈತ ಮುಖಂಡರಾದ ಎಚ್.ಮೂಕಳ್ಳಿ ಗೌಡ್ರ ಶಿವಕುಮಾರ ಇದ್ದರು.
Related










