CrimeNEWSಬೆಂಗಳೂರುಸಿನಿಪಥ

ಚೆಕ್‌ಬೌನ್ಸ್‌ ಪ್ರಕರಣ: ಸಿನಿಮಾ ಸಹಾಯಕ ನಿರ್ದೇಶಕ ರಾಜೇಶ್‌ಗೆ 2ನೇ ಬಾರಿ ಜಾಮೀನು ರಹಿತ ವಾರಂಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚೆಕ್ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಲನಚಿತ್ರ ಸಹಾಯಕ ನಿರ್ದೇಶಕ ಎಸ್‌.ರಾಜೇಶ್‌ ಜಾಮೀನು ರಹಿತ ವಾರಂಟ್ ನೀಡಿದ್ದರೂ ಕೋರ್ಟ್‌ಗೆ ಹಾಜರಾಗದಿರುವುದರಿಂದ ಮತ್ತೆ 2ನೇ ಬಾರಿಗೆ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಇಂದು ( ನ.10) ಜಾಮೀನು ರಹಿತ ವಾರಂಟ್(NBW) ಹೊರಡಿಸಿದೆ.

ಸಿನಿಮಾ ವಿತರಕ, ಬಿಸಿನಸ್‌ ಮ್ಯಾನ್‌, ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡು ತನ್ನ ಸ್ನೇಹಿತರ ಮೂಲಕ ದೇವರಾಜು ಎಂಬುವರಿಗೆ ಪರಿಚಯವಾದ ಆರೋಪಿ ರಾಜೇಶ್‌ ಗೃಹೋಪಯೋಗಿ ವಸ್ತುಗಳ ಮೇಲೆ ಬಂಡವಾಳ ಹೂಡಿಕೆ ಮಾಡುವುದಕ್ಕೆ ಹಣದ ಅವಶ್ಯವಿದೆ ಎಂದು ಹೇಳಿ ಸುಮಾರು 4 ವರ್ಷದ ಹಿಂದೆ 4.5 ಲಕ್ಷ ರೂಪಾಯಿ ಪಡೆದು ಬಳಿಕ ಕೊಟ್ಟ ಹಣವನ್ನು ವಾಪಸ್‌ ಮಾಡದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ.

ಆ ಬಳಿಕ 2022ರ ಮೇನಲ್ಲಿ 3.75 ಲಕ್ಷ ರೂಪಾಯಿ ಚೆಕ್‌ ನೀಡಿದ್ದ ಆರೋಪಿ. ಆ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದಾಗ ಅಕೌಂಟ್‌ನಲ್ಲಿ ಸಾಕಷ್ಟು ಹಣವಿಲ್ಲ ಎಂದು ಚೆಕ್‌ ಬೌನ್ಸ್‌ ಆಯಿತು. ಹೀಗಾಗಿ ಜೂನ್‌ 2022ರಲ್ಲಿ ದೇವರಾಜು ಕೋರ್ಟ್‌ ಮೊರೆ ಹೋದರು. ಅಂದಿನಿಂದ ಈವರೆಗೂ ತಲೆ ಮರೆಸಿಕೊಂಡು ಕೋರ್ಟ್‌ಗೂ ಹಾಜರಾಗದೆ ಇತ್ತ ಕೊಟ್ಟ ಹಣವನ್ನು ವಾಪಸ್‌ ಕೊಡದೆ ಪೊಲೀಸರ ಕೈಗೂ ಸಿಗದೆ ಕಳ್ಳಾಟವಾಡುತ್ತಿದ್ದಾನೆ.

ಹೀಗಾಗಿ ಇಂದು ಮತ್ತೆ 2ನೇ ಬಾರಿಗೆ ಜಾಮೀನು ರಹಿತ ವಾರಂಟ್‌ (A non-bailable warrant was issued) ಹೊರಡಿಸಿ ಪ್ರಕರಣವನ್ನು ಜನವರಿ 4ಕ್ಕೆ ಮುಂದೂಡಿದೆ.

ಆರೋಪಿ ರಾಜೇಶ್‌ ಭಾರೀ ವಂಚಕನಾಗಿದ್ದು, ಇದೇ ರೀತಿ ಹಲವಾರು ಜನರ ಬಳಿ ಸುಳ್ಳು ಹೇಳಿ ಸಾಲದ ರೂಪದಲ್ಲಿ ಹಣ ಪಡೆದು ಯಾರಿಗೂ ಮರಳಿಸಿಲ್ಲ ಎಂದು ಸಾಲ ಕೊಟ್ಟರು ಹೇಳುತ್ತಿದ್ದಾರೆ. ಈತ ತಮ್ಮ ಸ್ನೇಹಿತರು ಮತ್ತು ಸ್ನೇಹಿತರ ಗೆಳೆಯರ ಬಳಿಯೂ ಸಾಲ ಪಡೆದು ವಂಚಿಸಿದ್ದಾನೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್