ಚಿಕ್ಕಬಳ್ಳಾಪುರ: ನಗರದ ನೂತನ ಕನ್ನಡ ಭವನದಲ್ಲಿ ಮೇ 28ರ ಬುಧವಾರ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈವರೆಗೂ ಬಹುತೇಕ ಕಸಾಪ ಸದಸ್ಯರಿಗೆ ಹಾಗೂ ಈ ಹಿಂದಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದವರಿಗೆ ಆಹ್ವಾನ ಪತ್ರಿಕೆ ತಲುಪಿಸುವಲ್ಲಿ ಪರಿಷತ್‌ನ ಪದಾಧಿಕಾರಿಗಳು ನಿರುತ್ಸಾಹ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕನ್ನಡ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಮ್ಮೇಳನ ನಡೆಯಲು ಎಲ್ಲ ತಯಾರಿ ನಡೆದಿದ್ದು ಎರಡು ದಿನಗಳ ಕಾರ್ಯಕ್ರಮ ಎಂದು ತೋರಿಸಿಕೊಳ್ಳುವ ಹುನ್ನಾರ ನಡೆದಿದೆ. ಅಲ್ಲದೆ ಮೊದಲನೇ ಅಂದರೆ ಇಂದು ಮಂಗಳವಾರ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳು ಅಷ್ಟಕಷ್ಟೆ.
ಕಾರಣ ಕನ್ನಡ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜಿದ್ದು, ದಿನವಿಡಿ ಇದರ ಕಾರ್ಯಕ್ರಮವೇ ಮೇಲ್ಪಂಕ್ತಿಗೆ ಬರಲಿದೆ ನಾಮ್ ಕೇ ವಾಸ್ತೆಗಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲ ತಯಾರಿ ನಡೆದಿದೆ ಇದು ಪದಾಧಿಕಾರಿಗಳ ಪೂರ್ವಗ್ರಹ ಪೀಡಿತ ಕಾರ್ಯಕ್ರಮ ಎಂದು ಹಲವು ಸಾಹಿತಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸೇವೆ ಸಲ್ಲಿಸಿದವರನ್ನು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆ ಕರೆದು ವ್ಯವಸ್ಥಿತವಾಗಿ ಮಾಡಿಲ್ಲ. ಒಂದು ತಿಂಗಳ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾಗಿ ತೀರ್ಮಾನ ಆಗಿತ್ತಾದ್ರೂ ಪೋಪ್ ನಿಧನದಿಂದಾಗಿ ಅಂದು ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು,
ಇದಲ್ಲದೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಾಹಿತ್ಯಸಕ್ತರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡದೆ ಇರುವುದು ಒಂದು ಕಡೆಯಾದರೆ, ಸಾಹಿತ್ಯ ಪರಿಷತ್‌ನಿಂದ ಮಾಡಿದ ಬಹುತೇಕ ಎಲ್ಲ ಕಾರ್ಯಕ್ರಮಗಳು ಕೇವಲ ಒಂದು ರಂಗಮಂದಿರಕ್ಕೆ ಸೀಮಿತವಾಗಿವೆ. ಇದೊಂದು ಶಾಲೆ ಕಾಲೇಜುಗಳಿಗೆ ಮಾತ್ರ ಸೀಮಿತ ಎನ್ನುಮತ್ತಿತ್ತು ಹೀಗಾಗಿ ಸಾಹಿತ್ಯಸಕ್ತರ ಹಿತವನ್ನೇ ಬಯಸದೆ ಪರಿಷತ್ತಿನ ಕಾರ್ಯಕ್ರಮಗಳು ಗಡಿ ಹಂಚಿನಲ್ಲಿರುವ ಈ ಭಾಗದಲ್ಲಿ ಹೆಚ್ಚು ನಡೆಬೇಕಿತ್ತು. ಆದರೆ ಆಗಲಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಗಗ ಮಾಜಿ ಅಧ್ಯಕ್ಷರೊಬ್ಬರು ತಮ್ಮ ಅಸಮಾಧಾನ ಹೊರಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರಿಗೆ, ಸಾಹಿತ್ಯ ಪ್ರೇಮಿಗಳಿಗೆ ಕನ್ನಡ ಹಬ್ಬವಾಗಬೇಕಿತ್ತು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಮೀಸಲಾದ ಅತಿದೊಡ್ಡ ಕಾರ್ಯಕ್ರಮವೇ ಕನ್ನಡ ಸಾಹಿತ್ಯ ಸಮ್ಮೇಳನ.

ಕನ್ನಡಿಗರ ಅದರಲ್ಲೂ ಗಡಿ ಅಂಚಿನಲ್ಲಿರುವ ಈ ಭಾಗದಲ್ಲಿ ಕನ್ನಡ ಭಾಷೆಯ ಐಕ್ಯತೆಯ ಪ್ರತೀಕವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು, ಸಾಹಿತ್ಯಾಸಕ್ತರ, ಕವಿಗಳ, ಲೇಖಕರ, ಕಲಾವಿದರ ಮತ್ತು ಸಾಂಸ್ಕೃತಿಕ ಉತ್ಸಾಹಿಗಳ ಸಮಾಗಮವಾಗಿಸದೇ ಕೇವಲ ನಾಮ್ ಕೇ ವಾಸ್ತೆ ಎಂಬಂತೆ ಸಮ್ಮೇಳನ ಮಾಡಲು ಮುಂದಾಗಿರುವ ಬಗ್ಗೆ ಹಿರಿಯ ಸಾಹಿತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳಲ್ಲಿ ಒಂದು ದಿನವೆಲ್ಲ ಜಿಲ್ಲಾಡಳಿತ ಆಯೋಜಿಸಿರುವ ಕನ್ನಡ ಭವನ ಉದ್ಘಾಟನೆ ಕಾರ್ಯಕ್ರಮ, ಇನ್ನು ಸಾಹಿತ್ಯ ಪರಿಷತ್‌ನ ಘೋಷ್ಠಿ, ಪರಿಷತ್ತಿನ ಧ್ವಜಾರೋಹಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ನಡೆದಾವು?
ಸರಿಯಾಗಿ ಸಾಹಿತಿಗಳಿಗೆ, ಪರಿಷತ್‌ನ ಸದಸ್ಯರಿಗೆ ಕನ್ನಡ ಪರ ಸಂಘಟನೆ ಯವರಿಗೆ ಹಾಗೂ ಬಹುತೇಕ ಮಾಧ್ಯಮದವರಿಗೆ, ಈ ಹಿಂದಿನ ಪರಿಷತ್‌ನ ಪದಾಧಿಕಾರಿಗಳಿಗೆ, ಮಹಿಳಾ ಘಟಕದ ಈ ಹಿಂದಿನ ಪದಾಧಿಕಾರಿಗಳಿಗೆ ಸದಸ್ಯರಿಗೆ ಆಹ್ವಾನ ತಲುಪಿಸುವಲ್ಲಿ ಧೋರಣೆಯಿಂದ ಎಡತಾಕಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನ “ಲೆಕ್ಕಕುಂಟು ಆಟಕ್ಕಿಲ್ಲ” ಎನ್ನುವ ಮನೋಭಾವನೆ ಹೊಂದಿ ಸಾಹಿತ್ಯಸಕ್ತರ ಅಸಮಾಧಾನದೊಂದಿಗೆ ಸಮ್ಮೇಳನ ಮಾಡಿ ಮುಗಿಸಲು ಎಲ್ಲ ಸಿದ್ಧತೆ ನಡೆದಿದೆ.
Related









