
ಹುಣಸೂರು: ವಿವಾದಿತ ಜಮೀನಿನಲ್ಲಿ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ರೈತನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಂಕಹಳ್ಳಿ ಗ್ರಾಮದ ನಿವಾಸಿ ಮಲ್ಲೇಶ್ ಹತ್ಯೆಯಾದ ರೈತ. ಅದೇ ಗ್ರಾಮದ ನಿವಾಸಿ ಚೇತನ್ ಹತ್ಯೆ ಮಾಡಿದ ಆರೋಪಿಯಾಗಿದ್ದು ಈಗ ಪೊಲೀಸರ ವಶದಲ್ಲಿದ್ದಾನೆ.
ಶಂಕಹಳ್ಳಿಯಲ್ಲಿರುವ ಜಮೀನಿನಲ್ಲಿ ಮಲ್ಲೇಶ್ ಮತ್ತು ಕುಟುಂಬ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು. ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನು ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಚೇತನ್ ಜತೆ ಸರಿತಾ, ಪ್ರವೀಣ, ಪವನ್, ಮಂಜುಳ, ಕರಿಗೌಡ ಸಹ ಸೇರಿ ಗಲಾಟೆ ಮಾಡಿದ್ದಾರೆ. ಜಗಳದ ವೇಳೆ ಚೇತನ್ ತನ್ನ ಬಳಿ ಇದ್ದ ಚಾಕುವಿನಿಂದ ಮಲ್ಲೇಶ್‌ಗೆ ಇರಿದು ಪರಾರಿಯಾಗಿದ್ದಾನೆ. ಇತ್ತ ರಕ್ತಸ್ರಾವವಾಗಿ ಅಸದವಸ್ಥಗೊಂಡಿದ್ದ ಮಲ್ಲೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಲ್ಲೇಶ್ ಪತ್ನಿ ನಾಗಮ್ಮ ಚೇತನ್ ಸೇರಿದಂತೆ 6 ಮಂದಿ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related









