NEWSನಮ್ಮರಾಜ್ಯರಾಜಕೀಯ

ರಾಜ್ಯದ ಮುಖ್ಯಮಂತ್ರಿಗಳು ಸಾರಿಗೆ ನೌಕರರತ್ತ ಒಮ್ಮೆ ತಿರುಗಿ ನೋಡಿ … ಹತ್ತಾರು ವರ್ಷಗಳ ಸಮಸ್ಯೆಗೆ ಇತಿಶ್ರೀ ನಿಮ್ಮಿಂದ ಸಾಧ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಿಂಗಳು ಪೂರ್ತಿ ದುಡಿದರೂ ಸರಿಯಾದ ಸಮಯಕ್ಕೆ ವೇತನ ಸಿಗದೆ, ಸಿಕ್ಕ ವೇತನ ಅರ್ಧವಾಗಿದ್ದರೂ, ಅದು ಸಂಸಾರ ನಡೆಸುವುದಕ್ಕೆ ಸಾಲದಿದ್ದರೂ ಸಾರಿಗೆ ನೌಕರರು ನಿಷ್ಠೆ, ಪ್ರಾಮಾಣಿಕತೆ ಮಾತ್ರ ಮರೆತಿಲ್ಲ.

ಯಾವುದೇ ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಳೆದುಕೊಂಡರೂ ಅದನ್ನು ಕಳೆದುಕೊಂಡ ಪ್ರಯಾಣಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ನೌಕರರು ಮಾಡುತ್ತಾರೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಸಿಗದೆ ಹೋದರೆ ಅದನ್ನು ಅಷ್ಟೇ ನಿಷ್ಠೆಯಿಂದ ಪೊಲೀಸ್‌ ಠಾಣೆಗೆ ಒಪ್ಪಿಸಿ ಅದರ ಮಾಲೀಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಾರೆ.

ಈ ನಡುವೆ ನಮಗೆ ಕೊಡುತ್ತಿರುವ ವೇತನ ಕುಟುಂಬ ನಿರ್ವಾಹಣೆಗೆ ಸಾಲುತ್ತಿಲ್ಲ ಎಂದು ವೇತನ ಹೆಚ್ಚಳಕ್ಕಾಗಿ ಸರ್ಕಾರ ಮತ್ತು ಸಾರಿಗೆ ಆಡಳಿತ ವರ್ಗಕ್ಕೆ ತಮ್ಮ ನೋವನ್ನು ನಿವೇದಿಸಿಕೊಳ್ಳುವ ಸಲುವಾಗಿ ಕಳೆದ 2021ರ ಏಪ್ರಿಲ್‌ನಲ್ಲಿ ಮುಷ್ಕರ ಮಾಡಿದರು. ಆ ಪರಿಣಾಮ ಹಲವು ಅಮಾಯಕ ನೌಕರರು ವಜಾ, ಅಮಾನತು, ವರ್ಗಾವಣೆಯಂತಹ ಶಿಕ್ಷೆಗೆ ಗುರಿಯಾಗಿದ್ದಾರೆ.

ಇದರಿಂದ ನೊಂದ ನೂರಾರು ನೌಕರರು ತಮ್ಮ ಜೀವವನ್ನೇ ಜವರಾಯನಿಗೆ ಒಪ್ಪಿಸಿದ್ದಾರೆ. ಆದರೂ ಸರ್ಕಾರ ಮತ್ತು ನಿಗಮದ ಆಡಳಿತ ಇಂಥ ನೊಂದ ನೌಕರರ ಬಗ್ಗೆ ಯಾವುದೇ ಮೃದುಧೋರಣೆ ತಾಳದೆ ಈವರೆಗೂ ಅವರನ್ನು ಕೆಟ್ಟದಾಗಿಯೇ ನಡೆಸಿಕೊಳ್ಳುತ್ತಿದೆ. ಇದು ಸರಿಯಲ್ಲ. ನೌಕರರನ್ನು ಈ ರೀತಿ ಕಾಡುವುದು ನಿಮಗೆ ಶ್ರೇಯಸಲ್ಲ.

ನೀವು ಏನೇ ಶಿಕ್ಷೆ ಕೊಟ್ಟರೂ ಅದನ್ನು ತಲೆಬಾಗಿ ಮಾಡಿಕೊಂಡು ಬರುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದಾರೆ. ಆ ಮೂಲಕ ನಿಮಗೆ ಸರ್ಕಾರಕ್ಕೆ ಒಳ್ಳೆ ಹೆಸರು ತರುತ್ತಿದ್ದಾರೆ. ಜತೆಗೆ ಸಂಸಾರದ ನೊಗವನ್ನು ಬಹಳ ಕಷ್ಟದಿಂದಲೇ ಎಳೆಯುತ್ತ ಮುಂದೆ ಸಾಗುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಕೋವಿಡ್‌ ಸೋಂಕಿನ ನಡುವೆಯೇ ನೌಕರರು ಪ್ರಮಾಣಿಕವಾಗಿ ನಡೆದುಕೊಂಡಿರುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ವೇತನ ಕಡಿಮೆ ಇದ್ದರೂ ಅದು ಹೊತ್ತಿನ ಕೂಳಿಗೆ ಸಾಲದಿದ್ದರೂ ಸಾರಿಗೆ ನೌಕರರು ಇಂಥ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಅವರಿಗೆ ಈಗಲಾದರೂ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದಕ್ಕೆ ಮುಂದಾಗಬೇಕು. ಆ ಮೂಲಕ ಸಾರಿಗೆ ಸಂಸ್ಥೆಯ ಪ್ರಾಮಾಣಿಕ ನೌಕರರಲ್ಲಿ ಇನ್ನಷ್ಟು ಉತ್ಸಾಹ ತುಂಬುವ ಕೆಲಸ ಮಾಡಬೇಕು.

ಜತೆಗೆ ಮುಷ್ಕರ ವೇಳೆ ವಜಾಗೊಳಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಬೇಕು. ಇವರಿಗೆ ಒಂದು ಗುಲಗಂಜಿಯಷ್ಟು ಅಂದರೆ 1200 ಕೋಟಿ ರೂ.ಗಳ ಒಂದು ಪ್ಯಾಕೇಜ್‌ ಘೋಷಣೆ ಮಾಡಿದರೆ ಸರ್ಕಾರಕ್ಕೇನು ತುಂಬಲಾದ ನಷ್ಟವಾಗುವುದಿಲ್ಲ.

ಆದರೆ ನೌಕರರಿಗೆ ತುಂಬ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಈ ನೌಕರರತ್ತ ಒಂದೇಒಂದು ಬಾರಿ ತಿರುಗಿ ನೋಡಿ. ಅವರ ಹತ್ತಾರು ವರ್ಷಗಳ ಸಮಸ್ಯೆಗೆ ಇತಿಶ್ರೀ ಹಾಡಬಹುದು. ಅದು ಸಿಎಂ ಕೈಯಲ್ಲೇ ಇದೆ ಆದರೆ ಮನಸ್ಸು ಮಾಡಬೇಕು ಅಷ್ಟೆ.

ಒಮ್ಮೆ ನೌಕರರ ಸಮಸ್ಯೆ ನೀಗಿಸಿದರೆ ಅವರು ಮತ್ತೆ ಮತ್ತೆ ಸರ್ಕಾರಕ್ಕೆ ಮುಜುಗರವಾಗುವಂತ ಕೆಲಸ ಮಾಡಲು ಮುಂದೆ ಬರುವುದಿಲ್ಲ. ಜತೆಗೆ ಈ ನೌಕರರ ಹಲವು ಮುಖಂಡರಿಗೆ ಹಣದ ಆಮೀಷ ತೋರಿಸಿ ಪ್ರತಿಭಟನೆಗೆ ಪ್ರಚೋದನೆ ನೀಡುವ ಕೆಲ ಕಾಣದ ಕೈಗಳನ್ನು ಕಟ್ಟಿಹಾಲು ಸಾಧ್ಯವಿದೆ.

ಈಗಲಾದರೂ ಅಂದರೆ ಮುಂದಿನ ಅಧಿವೇಶನದಲ್ಲಾದರೂ ಮುಖ್ಯಮಂತ್ರಿಗಳು ಈ ನೌಕರರ ನಿತ್ಯದ ಸಮಸ್ಯೆಯನ್ನು ಒಮ್ಮೆ ನಿವಾರಿಸುವತ್ತ ದಿಟ್ಟ ಹೆಜ್ಜೆ ಇಡಬೇಕಿದೆ. ಇದರಿಂದ ನಿಮಗೂ ಶಾಶ್ವತವಾದ ಹೆಸರು ಬರುತ್ತದೆ. ಮತ್ತೆ ಮುಂದಿನ ಚುನವಾಣೆಯನ್ನು ದೃಷಿಯಲ್ಲಿಕೊಂಡು ನೌಕರರ ಪರ ಒಳ್ಳೆ ನಿರ್ಧಾರ ತೆಗೆದಕೊಳ್ಳಬೇಕಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ