Please assign a menu to the primary menu location under menu

NEWS

ಸಮಾಜದ ಅಭಿವೃದ್ಧಿಗೆ ಸಹಕಾರ ಸಂಘಗಳು ಅತ್ಯಗತ್ಯ: ಲೋಕೇಶ್

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಸಮಾಜದ ಅಭಿವೃದ್ಧಿ ಹಾಗೂ ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬನೆ ಬದುಕು ಕಾಣಲು ಸಹಕಾರ ಸಂಘಗಳು ಊರುಗೋಲು ಇದ್ದಂತೆ ಎಂದು ಭಗೀರಥ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಲೋಕೇಶ್ ತಿಳಿಸಿದರು.

ಪಟ್ಟಣದ ಶ್ರೀ ಬಸವೇಶ್ವರ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಸಂಘದ ಆವರಣದಲ್ಲಿ ಭಗೀರಥ ಅಭಿವೃದ್ಧಿ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಮಾಜದ ಅಭಿವೃದ್ಧಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಸ್ಥಾಪಿಸಲಾಗಿರುವ ಈ ಸಹಕಾರ ಸಂಘ ಇಂದು ಅಂಬೆಗಾಲಿಡುತ್ತಿದೆ. ಈ ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಿ ಸಹಕಾರ ನೀಡಿದ್ದೇಯಾದರೆ ಈ ಸಂಘ ಮುಂದೊಂದು ದಿನ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಆದ್ದರಿಂದ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಎನ್.ರವಿ ಮಾತನಾಡಿ ಸಂಘ ಅತೀ ಕಡಿಮೆ ಅವಧಿಯಲ್ಲಿ ಸ್ಥಾಪಿತವಾಗಿದ್ದರೂ ಹೆಚ್ಚಿನ ಸದಸ್ಯರಿಗೆ ಸಾಲಸೌಲಭ್ಯ ನೀಡುತ್ತಿದೆ. ಸಂಘಕ್ಕೆ ಹೆಚ್ಚಿನ ಷೇರುದಾರರು ನೋಂದಣಿಯಾದಷ್ಟು ಹೆಚ್ಚು ಹೆಚ್ಚು ಸಹಕಾರ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದರು.

ಇನ್ನು ಹೆಚ್ಚಿನ ಸದಸ್ಯರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಆದ್ದರಿಂದ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘವನ್ನು ಬೆಳೆಸಬೇಕು. ಸಂಘಕ್ಕೆ ಶೀಘ್ರದಲ್ಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುತುವರ್ಜಿ ವಹಿಸಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ರವಿ, ಪಿ.ಕೆ.ರಾಘವೇಂದ್ರ, ರಾಜೇಗೌಡ, ಪಿ.ಆರ್.ಯತೀಶ್, ಪಿ.ಎನ್.ಮಣಿಕುಮಾರ್, ಕೆ.ಎಸ್.ಹೇಮಂತ್ ಕುಮಾರ್, ಎಂ.ಆರ್.ಗಣೇಶ್, ಸಿ.ಆರ್.ಮಂಜುರಾಜ್, ಕಾವೇರಿ, ಪಾರ್ವತಿ, ರೇವಣ್ಣ ಸ್ವಾಮಿ, ಸಲಹಾ ಸಮಿತಿ ಸದಸ್ಯರಾದ ಪಿ.ಎನ್.ಸೋಮಶೇಖರ್, ಎಚ್.ಕೆ.ನಟರಾಜ್, ಪೃಥ್ವಿರಾಜ್, ಎನ್.ಹರೀಶ್, ಕೀರ್ತಿ ಕುಮಾರ್ ಮುಖಂಡರಾದ ಪಿ.ಟಿ.ಲಕ್ಷ್ಮಿ ನಾರಾಯಣ್, ಬಸವನಹಳ್ಳಿ ನಾರಾಯಣ್ ಮತ್ತಿತರರು ಇದ್ದರು.

Leave a Reply

error: Content is protected !!
LATEST
KSRTC ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರ ತಡೆಯಲು ಮುಂದಾದ ಸರ್ಕಾರ? NWKRTC: ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ- ಹುಬ್ಬಳ್ಳಿ ಸಾರಿಗೆ ನೌಕರರ ಒಕ್ಕೂಟ NWKRTC: ಬಸ್‌-ಕಾರು ನಡುವೆ ಅಪಘಾತ - ಮಹಿಳೆ ಮೃತ, ಇಂಜಿನಿಯರ್‌ಗೆ ಗಾಯ ದೆಹಲಿ ರೈತರ ಹೋರಾಟ ಬೆಂಬಲಿಸಿ ಬನ್ನೂರಿನಲ್ಲಿ ರೈತರು- ರೈತ ಮುಖಂಡರ ಪ್ರತಿಭಟನೆ KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು KSRTC: ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡೇಮಾಡುತ್ತೇವೆ- ಕ್ರಿಯಾ ಸಮಿತ... ಪಂಚಭೂತಗಳಲ್ಲಿ ಲೀನವಾದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್‌ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಪಾಪಿಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: 5 ಸಾವಿರ ಪ್ರವಾಸಿಗರ ರಕ್ಷಿಸಿದ ಪೊಲೀಸರು