ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದೇ ಡಿಸೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರ ಬನ್ನಿ ಮಾತಾಡೋಣ ಅರಳಿಕಟ್ಟೆ ಸಂವಾದ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಮಾಧ್ಯಮ ಸಂವಾದ ಹಾಗೂ ಕಾರ್ಯಕರ್ತರ ಸಭೆಯನ್ನು ಸಹ ನಡೆಸಲಾಗುತ್ತಿದ್ದು ನಾಡಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಅರಳಿಕಟ್ಟೆ ಸಂವಾದವನ್ನು ಇದೇ ಡಿ.7ರಂದು ಧಾರವಾಡ ಜಿಲ್ಲೆ, ಹುಬ್ಬಳ್ಳಿ- ಕಟ್ನೂರು ಗ್ರಾಮದಲ್ಲೂ, ಡಿ.8 ರಂದು ಬೆಳಗಾವಿ ಜಿಲ್ಲೆ, ಅಥಣಿ – ಕೊಟ್ಟಲಗಿ ಗ್ರಾಮದಲ್ಲಿ ಹಾಗೂ ಡಿ.9ರಂದು ವಿಜಯನಗರ ಜಿಲ್ಲೆ, ಉತ್ತಂಗಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದಿಷ್ಟೆ ಅಲ್ಲದೆ ಡಿ.11ರಂದು ತುಮಕೂರು ಜಿಲ್ಲೆ, ಪಾವಗಡದಲ್ಲೂ, ಡಿ.13ರಂದು ಚಿಕ್ಕಮಗಳೂರು ಜಿಲ್ಲೆ, ಹುಲಿಕೆರೆ ಗ್ರಾಮದಲ್ಲಿ, ಡಿ.14ರಂದು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇನ್ನು ಡಿ.16ರಂದು ಮೈಸೂರು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜತೆಗೆ ಅರಳಿಕಟ್ಟೆ ಸಂವಾದವಿದೆ. ಡಿ.17ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲೂ ಹಾಗೂ ಡಿ.24ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಅರಳಿಕಟ್ಟೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.