ಗುಬ್ಬಿ: ಲಂಚ ಪಡೆದಿದ್ದ ತಾಲೂಕು, ಉಪನೋಂದಣಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿ ಯಶೋಧ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿ ಮುದ್ರಾಂಕ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ತುಮಕೂರು jಜಿಲ್ಲೆಯ ಗುಬ್ಬಿ ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಶೋಧ ಅವರು ಲಂಚ ಪಡೆದುಕೊಂಡಿದ್ದರು. ಆ ಲಂಚ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಹಿನ್ನೆಲೆ. ವಿಡಿಯೋ ಆಧರಿಸಿ ತನಿಖೆ ನಡೆಸಲಾಗಿತ್ತು.
ತನಿಖೆ ವೇಳೆ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆ ಮುದ್ರಾಂಕ ಇಲಾಖೆ ಆಯುಕ್ತರು ಕಡ್ಡಾಯ ನಿವೃತ್ತಿಗೆ ಆದೇಶ ನೀಡಿದ್ದಾರೆ.
ಒಂದು ಸರ್ಕಾರದ ಹುದ್ದೆಯಲ್ಲಿದ್ದುಕೊಂಡು ಕೈ ತುಂಬ ವೇತನ ಬರುತ್ತಿದ್ದರೂ ಮೂರು ಕಾಸಿನ ಆಸೆಗೆ ಬಿದ್ದು ಈ ಕೆಲ ಅಧಿಕಾರಿಗಳು ಈ ರೀತಿ ಕೆಲಸ ಕಳೆದು ಕೊಳ್ಳುವುದು ಅವಮಾನಕರ ಸಂಗತಿಯಾಗಿದೆ.