KSRTC ಸುಖಾಸುಮ್ಮನೇ ಕಂಡಕ್ಟರ್ ಟಾರ್ಗೆಟ್ ಮಾಡಿದ ತನಿಖಾ ಸಿಬ್ಬಂದಿಯ ಬೆವರಿಳಿಸಿ ಎಚ್ಚರಿಕೆ ನೀಡಿದ ಪ್ರಯಾಣಿಕರು

ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ಫ್ರೀಯಾಗಿ ಸರ್ಕಾರಿ ಬಸ್‌ಗಳಲ್ಲಿ ಓಡಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಇದರಿಂದ ನಿರ್ವಾಹಕರು ಹಾಗೂ ಚಾಲಕರು ನಿತ್ಯ ಒಂದಲ್ಲೊಂದು ರೀತಿ ಹಿಂಸೆ ಅನುಭವಿಸುವಂತಾಗಿದೆ.
ಇಲ್ಲಿ ಕೆಲ ಪ್ರಯಾಣಿಕರು ಹಿಂಸೆ ಕೊಡುತ್ತಾರೆ ಎಂದು ಹೇಳುವುದಕ್ಕಿಂತ ಮೊದಲು ಈ ಘಟನೆಯಲ್ಲಿ ಪ್ರಯಾಣಿಕರೆ ನಿರ್ವಾಹಕರ ಪರ ನಿಂತು ಲೈನ್ ಚೆಕಿಂಗ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡು ನಿರ್ವಾಹಕರ ವಿರುದ್ಧ ಸುಳ್ಳು ಕೇಸ್ ದಾಖಲಿಸುತ್ತಿದ್ದವರಿಗೆ ಬೆವರಿಳಿಸಿದ್ದಾರೆ.
ಮಿಸ್ ಆಗಿ ಟಿಕೆಟ್ ಇಂದೇ ಮುಂದೆ ಬಂದೆ ಬರುತ್ತದೆ, ಅದನ್ನೇ ಅಡ್ವಾಂಟೇಜ್ ಮಾಡ್ಕೊಂಡು ವಿನಃ ಕಾರಣ ಕೇಸು ಬರೆದು ಹಿಂಸೆ ಕೊಡ್ತಿದಾರೆ ಇದ್ರ ಬಗ್ಗೆ ಅಧಿಕಾರಿಗಳು ಸ್ವಲ್ಪ ಜವಾಬ್ದಾರಿ ವಹಿಸಬೇಕು ಎಂದು ಚಾಲನಾ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
ಇನ್ನು ಸುಖಾಸುಮ್ಮನೇ ಕೇಸ್ ಬರೆಯುತ್ತಿದ್ದ ಲೈನ್ ಚೆಕಿಂಗ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಜಾಡಿಸುವ ಮೂಲಕ ಸಾರ್ವಜನಿಕ ಪ್ರಯಾಣಿಕರು ನಿರ್ವಾಹಕರಿಗೆ ತೊಂದರೆ ಆದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.
Related
