NEWSಕೃಷಿನಮ್ಮಜಿಲ್ಲೆ

ಟನ್‌ ಕಬ್ಬಿಗೆ ಹೆಚ್ಚುವರಿ ₹100 ಪಾವತಿಸದ ಬಣ್ಣಾರಿ ಕಾರ್ಖಾನೆ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ: ಡಿಸಿಗೆ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಟನ್‌ ಕಬ್ಬಿಗೆ ಹೆಚ್ಚುವರಿ ನೂರು ರೂಪಾಯಿ ಪಾವತಿ ಮಾಡದ ಬಣ್ಣಾರಿ ಕಾರ್ಖಾನೆ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘ ಒತ್ತಾಯಿಸಿದೆ.

ಇಂದು ಆಯೋಜಿಸಿದ್ದ ಮೈಸೂರು ತಾಲೂಕು ರೈತರ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, .ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ 100 ರೂಪಾಯಿ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಒಂದು ತಿಂಗಳ ಹಿಂದೆ ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥರು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿ ರೈತರ ಖಾತೆಗೆ ಹಣ ಜಮಾ ಮಾಡುವಂತೆ ಕಾರ್ಖಾನೆ ಮುಖ್ಯಸ್ಥರಿಗೆ ಸೂಚನೆ ನೀಡಿದರು ಸಹ ಕಾರ್ಖಾನೆ ಅವರು ನಿರ್ಲಕ್ಷತನ ತೋರಿದ್ದಾರೆ ಆದಕಾರಣ ಕೂಡಲೇ ಸಕ್ಕರೆ ಕಾರ್ಖಾನೆಯ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

ದೇಶದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾದ ದಿನಗಳಿಂದ ಎಲ್ಲ ವಸ್ತುಗಳು ನಮ್ಮ ದೇಶಕ್ಕೆ ಆಮದು ಹಾಗೂ ರಫ್ತು ಆಗುತ್ತಿವೆ. ಆದರೆ ತಂಬಾಕು ಖರೀದಿಗೆ ಐಟಿಸಿ ಕಂಪನಿ ಮಾತ್ರ ಏಕ ಸ್ವಾಮ್ಯ ಯಾಕೆ? ಇದನ್ನು ಮುಕ್ತ ವ್ಯಾಪಾರಕ್ಕೆ ಬಿಡಬೇಕು ಇದರಿಂದ ಹೊಗೆ ಸೊಪ್ಪು ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ.

ಒಂದು ಕೆಜಿ ತಂಬಾಕಿನಲ್ಲಿ 1400 ಸಿಗರೇಟ್ ತಯಾರಿಸುವ ಐಟಿಸಿ ಕಂಪನಿಗೆ ಸಿಗರೇಟ್ ಮಾರಾಟದಿಂದ 21,000 ಬರುತ್ತದೆ ಎಲ್ಲ ಖರ್ಚು ಕಳೆದು ಕನಿಷ್ಠ 10 ಸಾವಿರ ಉಳಿಯುತ್ತದೆ. ರೈತರಿಗೆ ಮಾತ್ರ 250 ರೂ. ಕೊಡಲು ಕಷ್ಟ ಎನ್ನುತ್ತಾರೆ ಇದು ರೈತರಿಗೆ ಬಹು ವಂಚನೆ ಅಲ್ಲವೇ. ಕೇಂದ್ರ ಸರ್ಕಾರ ಹೊಗೆಸೊಪ್ಪು ಖರೀದಿಸುವ ಅವಕಾಶ ಬೇರೆ ಕಂಪನಿಗಳಿಗೂ ಕಲ್ಪಿಸಲಿ ಈ ಭಾಗದ ಸಂಸದರು ಕೇಂದ್ರವನ್ನ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಕುವೆಂಪು ಪಾರ್ಕ್ ನಲ್ಲಿ ಸಭೆ ಸೇರಿದ ರೈತರು ಸಭೆ ನಂತರ ಅಮೆರಿಕ – ಇರಾನ್ ಯುದ್ಧ ನಿಲ್ಲಿಸ ಬೇಕು ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಎಂದು ಘೋಷಣೆ ಮೂಲಕ ಯುದ್ಧ ನಿಲ್ಲಲಿ, ಶಾಂತಿ ನೆಲೆಸಲಿ ಎಂದು ಪಾರ್ಕಲ್ಲಿ ಪ್ರತಿಭಟನೆ ನಡೆಸಿದರು.

ಇಂದಿನ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಕೂಡನಹಳ್ಳಿ ಸೋಮಣ್ಣ, ಕೆಂಡಗಣಪ್ಪ, ಸಾತಗಳ್ಳಿ ಬಸವರಾಜ್, ಕಾಟೂರು ನಾಗೇಶ್, ವಾಜಮಂಗಲ ನಾಗೇಂದ್ರ, ವಾಜಮಂಗಲ ಮಹಾದೇವು, ಸತೀಶ್, ಬಾಲು, ನಂಜುಂಡಸ್ವಾಮಿ, ಶಿವಣ್ಣ, ರಂಗರಾಜು, ಸೋಮಣ್ಣ, ಶ್ರೀಕಂಠ, ಪ್ರಭಾಕರ, ಭಾಗ್ಯಮ್ಮ, ಸೇರಿದಂತೆ ನೂರಾರು ರೈತರು ಇದ್ದರು.

Megha
the authorMegha

Leave a Reply

error: Content is protected !!
Latest news
KSRTC ನೌಕರರ ವಿರುದ್ಧ ನಿಯಮ 23 ರಡಿಯಲ್ಲಿ ದಾಖಲಾದ ಪ್ರಕರಣಗಳ ನಿಯಮ-22ಕ್ಕೆ ಮಾರ್ಪಡಿಸಿ: ಎಂಡಿ ಆದೇಶ ಟನ್‌ ಕಬ್ಬಿಗೆ ಹೆಚ್ಚುವರಿ ₹100 ಪಾವತಿಸದ ಬಣ್ಣಾರಿ ಕಾರ್ಖಾನೆ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ: ಡಿಸಿಗೆ ಒ... KSRTC ನೌಕರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿ: ಕಾರ್ಮಿಕ ಆಯುಕ್ತರಿಗೆ ಒಕ್ಕೂಟ ಮನವಿ ಇಂದು ಹೊರಬೀಳಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮುಂದೂಡಿಕೆ KKRTC ಇಂಡಿ: ನಿವೃತ್ತಿ ಅಂಚಿನಲ್ಲಿರುವ ನೌಕರನಿಗೆ ಮೇಲಧಿಕಾರಿ ರಜೆ ಮಂಜೂರು ಮಾಡುತ್ತಾರೆ ಡಿಎಂ ರದ್ದು ಮಾಡುತ್ತಾರೆ!!?? ಸಾರಿಗೆ ನೌಕರರಿಗೆ ಶೇ.3ರಿಂದ5ರಷ್ಟು ವೇತನ ಹೆಚ್ಚಳ ಮಾಡುತ್ತೇವೆ: ಕೆಎಸ್‌ಆರ್‌ಟಿಸಿ ಎಂಡಿ ಹೇಳಿಕೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತ್ನಿ ನೋಡಲು ಬೈಕ್‌ನಲ್ಲಿ ಹೋಗುತ್ತಿದ್ದ ಪತಿ ಸರ್ಕಾರಿ ಬಸ್‌ಗೆ ಬಲಿ, ಪತ್ನಿಯ... ಸರಿಸಮಾನ ವೇತನ ಸೇರಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳಿದಿಂದ ಚಿತ್ರದುರ್ಗದಿಂದ ಪಾದಯಾತ್ರೆ: ಒಕ್ಕೂಟ KSRTC ಎಂಡಿ ಅಧ್ಯಕ್ಷತೇಲಿ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ಸಭೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ- ಕೇಂದ್ರದ ಬಗ್ಗೆ ಅಸಮಾಧಾನ