ಜೇವರ್ಗಿ: ಪಟ್ಟಣದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಕೋರಿ ಇಂದು ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ನಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ವೀರಶೈವ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಸೊನ್ನ, ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಬಹುದಿನದ ಬೇಡಿಕೆಯಾದ ವಿಶ್ವಗುರು ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಹಳೇ ಎ.ಪಿ.ಎಂ.ಸಿ ಆವರಣದಲ್ಲಿ 100 x100 ಸ್ಥಳವನ್ನು ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ತಿಳಿಸಿದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹಾಗೂ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಮತ್ತು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಸಾಹು ಅಂಗಡಿವರಿಗೂ ಕೃತಜ್ಞರಾಗಿರುವುದಾಗಿ ತಿಳಿಸಿದರು.
ವೀರಶೈವ ಸಮಾಜದ ಬಾಪುಗೌಡ ಪಾಟೀಲ ಕಲ್ಲಹಂಗರಗಾ, ವಿಜಯಕುಮಾರ ಬಿರಾದಾರ, ಬಸವರಾಜ ಕೊಬ್ರಿಶೆಟ್ಟಿ, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ, ಸಿದ್ದು ಕಲ್ಲೂರ, ರಾಜು ಚಿಂಚೋಳಿ, ಶಿವುಕುಮಾರ ಪಾಟೀಲ, ಬಸವರಾಜ ಹೊಸಮನಿ, ಲಕ್ಶ್ಮಣ ಗುಬ್ಯಾಡ, ಆಕಾಶ ಕಲಬುರಗಿ.ಶಿವಾನಂದ ಕ್ಷತ್ರಿ, ಸಿದ್ದು ಹೊಸಮನಿ, ಶಿವಲಿಂಗ ಮುದ್ದೇಬಿಹಾಳ, ಯಮನಪ್ಪ ನಿರ್ಮಲಕರ, ಹುಣಚಪ್ಪ ಬುರುಡ ನಾಗುಗೌಡ ಸೊನ್ನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.