ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇದಿನದಲ್ಲಿ 36 ಹೊಸ ಸೋಂಕಿತರು ಮತ್ತೆಯಾಗುವ ಮೂಲಕ ರಾಜ್ಯದ ಜನರಲ್ಲಿ ಆತಂಕ ಹೆಚ್ಚಿಸಿದ್ದಾರೆ.
ಇಂದು ಅತಿ ಹೆಚ್ಚು ಎಂದರೆ ಬೆಂಗಳೂರಿನಲ್ಲಿ 12 ಮಂದಿ, ದಾವಣಗೆರೆಯಲ್ಲಿ ಆರು, ಉತ್ತರ ಕನ್ನಡದಲ್ಲಿ ಏಳು, ದಕ್ಷಿಣ ಕನ್ನಡ, ಬೀದರ್ ಮತ್ತು ಚಿತ್ರದರ್ಗದಲ್ಲಿ ತಲಾ ಮೂರು, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ ಒಂದು ಕೇಸು ಪತ್ತೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಇದುವರೆಗೆ ಕರ್ನಾಟಕದಲ್ಲಿ 30 ಮಂದಿ ಮೃತಪಟ್ಟಿದ್ದು ಜತೆಗೆ ಇಂದು ಬೆಳಗ್ಗೆ 36 ಹೊಸ ಕೊರೊನಾ ಪಾಲಿಸಿಟಿವ್ ಸೇರಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಅದರಲ್ಲಿ 379 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದರೆ, ಇನ್ನೂ 380 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಯಾವುದೇ ಪಾಸಿಟಿವ್‌ಪ್ರಕರಣ ವರದಿಯಾಗಿಲ್ಲ.
ದೇಶದಲ್ಲಿ 59,765 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 56,412 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 1.986 ಮಂದಿ ಮೃತಪಟ್ಟಿದ್ದಾರೆ. 17,897 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 40,29,705 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,76,496 ಜನರು ಮೃತಪಟ್ಟಿದ್ದಾರೆ. 13,94.453 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail