ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಚಿಕ್ಕಮಗಳೂರು ವಿಭಾಗದ ಕೆಲ ಅಧಿಕಾರಿಗಳು ಮಾನ, ಮರ್ಯಾದೆ, ನಾಚಿಕೆ ಈ ಮೂರನ್ನು ಬಿಟ್ಟಿದ್ದಾರೆ ಎನ್ನುವುದಕ್ಕೆ ಅವರು ನೌಕರರ ಜತೆ ನಡೆಸುಕೊಳ್ಳುವುದೇ ಸಾಕ್ಷಿಯಾಗಿದೆ.
ಒಬ್ಬ ಚಾಲನಾ ಸಿಬ್ಬಂದಿಯನ್ನು ಇಲ್ಲ ಸಲ್ಲದ ಪ್ರಕರಣದಲ್ಲಿ ಸಿಲುಕಿಸಿ ಬಳಿಕ ಆ ಸಿಬ್ಬಂದಿಯಿಂದ ಲಂಚವನ್ನು ಪೀಕುವ ಇಂಥ ನಾಲಾಯಕ್ ಭ್ರಷ್ಟ ಅಧಿಕಾರಿಗಳಿಂದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ಮೇಲು ಅನುಮಾನಪಡುವಂತಾಗಿದೆ.
ನೋಡಿ ಒಬ್ಬ ಚಾಲನಾ ಸಿಬ್ಬಂದಿಗೆ ಫೋನ್ ಮಾಡಿ ಚಿಕ್ಕಮಗಳೂರು ವಿಭಾಗದ ಲೈನ್ ಚೆಕಿಂಗ್ ಸಿಬ್ಬಂದಿ ಸಹಾಯಕ ಸಂಚಾರಿ ನಿರೀಕ್ಷಕ (ಎಟಿಐ) ಗಂಗಾಧರ್ ನಾಯಕ್ ಎಂಬುವರು ಹೋಟೆಲ್‌ಗೆ ಬಂದಿದ್ದೇವೆ ಊಟದ ಹಣವನ್ನು ಗೂಗಲ್ ಪೇ ಮಾಡು ಎಂದು ಹೇಳುತ್ತಿದ್ದಾನೆ.
ಅಲ್ಲದೆ ಲೈನ್ ಚೆಕಿಂಗ್ ವೇಳೆ ಪ್ರಕರಣ ದಾಖಲಿಸಿಕೊಂಡ ಬಳಿಕ ಆ ನಿರ್ವಾಹಕ ಯಾರು ನಮಗೆ ತಿಂಗಳಿಗೆ ಮಾಮೂಲಿ ಕೊಡುವವನೆ ಇಲ್ಲವೇ? ಮಾಮೂಲಿ ಕೊಡುವವನಲ್ಲದಿದ್ದರೆ ಈಗ ಆತ ಎಷ್ಟು ಕೊಡುತ್ತಾನೆ. ಕೊಡದಿದ್ದರೆ ಗನ್ ಪಾಯಿಂಟ್‌ನಲ್ಲಿ ಇದ್ದಾನೆ ಆತನ ವಿರುದ್ಧ ಅಮಾನತು ಮಾಡುವ ಪ್ರಕರಣ ದಾಖಲಿಸುತ್ತೇನೆ ಎಂದು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೋಡಿ ಲೈನ್ ಚೆಕಿಂಗ್ ನೆಪದಲ್ಲಿ ನಿರ್ವಾಹಕರನ್ನು ಎಷ್ಟರ ಮಟ್ಟಿಗೆ ಸುಲಿಗೆ ಮಾಡುತ್ತಾರೆ ಈ ಲಂಚಬಾಕ ಭ್ರಷ್ಟ ಸಿಬ್ಬಂದಿಗಳು. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇನ್ನು ಕೇಳುವವರು ಕೂಡ ಬಹುತೇಕ ಇಂಥ ಅಸಾಮಿಗಳೇ ಆಗಿರುವುದರಿಂದ ನಿಗಮದಲ್ಲಿ ಚಾಲನಾ ಸಿಬ್ಬಂದಿಗಳು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದರೂ ಅವರ ಮೇಲೆ ಇಲ್ಲ ಸಲ್ಲದ ವರದಿ ಹಾಕಿ ಅಮಾನತು ಮಾಡಿ ಮೂಲೆಗುಂಪು ಮಾಡುತ್ತಿದ್ದಾರೆ ಇಂಥ ಅಧಿಕಾರಿಗಳು.
ಇನ್ನು ಬಹುತೇಕ ಎಲ್ಲ ನಾಲ್ಕೂ ಸಾರಿಗೆಯ ನಿಗಮಗಳಲ್ಲೂ ಟೀ. ಕಾಫಿ, ಊಟ, ಸಿಗರೇಟ್ ಎಲ್ಲವನ್ನೂ ನೌಕರರೇ ಕೊಡಿಸಬೇಕು ಇವರಿಗೆ. ಪ್ರತಿ ಡಿಪೋಗಳಲ್ಲೂ ಯಾವುದೇ ಒಬ್ಬ ಅಧಿಕಾರಿಯೂ ಮನೆಯಿಂದ ಮಧ್ಯಾಹ್ನದ ಊಟ ತರುವುದಿಲ್ಲ. ಹೋಗಲಿ ನಿಯತ್ತಾಗಿ ತಾವೇ ಹಣ ಕೊಟ್ಟು ಹೋಟಲಿಗೆ ಹೋಗಿ ಊಟ ಮಾಡುತ್ತಾರೆಯೇ ಅದು ಇಲ್ಲ. ನೌಕರರಿಗೆ ದಮ್ಕಿಹಾಕಿ ಹೆದರಿಸಿ ಅವರಿಂದ ಸುಲಿಗೆ ಮಾಡಿದ ಹಣದಿಂದ ತಿಂದು ತೇಗುತ್ತಾರೆ ಈ ಭ್ರಷ್ಟರು.
ಇನ್ನು ನಿಗಮಗಳ ಡಿಪೋ ಮಟ್ಟದಲ್ಲಿ ಒಂದು ರೀತಿ ಆದರೆ ಕೇಂದ್ರ ಕಚೇರಿಯಲ್ಲಿ ಮತ್ತೊಂದು ರೀತಿ. ನಿಷ್ಠಾವಂತ ಅಕಾರಿಗಳನ್ನು ಹೊರತುಪಡಿಸಿ ಬಹುತೇಕ ಎಂಜಲಿಗೆ ಬಾಯಿ ಬಿಟ್ಟುಕೊಂಡಿರುವ ಭ್ರಷ್ಟರು ಇಂದು ಯಾವ ನೌಕರನಿಂದ ಪೀಕಬೇಕು ಎಂಬುದನ್ನೇ ಕಾಯುತ್ತಿರುತ್ತಾರೆ. ಅಲ್ಲದೆ ಈ ಲಂಚಕೋರರಿಗೆ ನೌಕರರಲೇ ಇರುವ ಒಬ್ಬಾತ ಬಕೆಟ್ ಆಗಿರುತ್ತಾನೆ.
ಈತನಿಗೆ ಯಾವುದೇ ಕೆಲಸ ಕೊಡುವುದಿಲ್ಲ ಒಒಡಿ ನೆಪದಲ್ಲಿ ಕಚೇರಿಯಲ್ಲೇ ಇಟ್ಟುಕೊಂಡಿರುತ್ತಾರೆ. ಅಲ್ಲದೆ ಈತನ ಕೆಲಸ ಬರಿ ನೌಕರರಿಂದ ವಸೂಲಿ ಮಾಡುವುದೇ ಆಗಿರುತ್ತದೆ. ಆದರೆ, ಈ ಬಗ್ಗೆ ಸಾರಿಗೆ ಸಚಿವರಾಗಲಿ, ಎಂಡಿಗಳಾಗಲಿ ಗಮನ ಹರಿಸುತ್ತಿಲ್ಲ. ಕಾರಣ ಡಿಸಿಗಳ ಮಟ್ಟದಲ್ಲಿ ಇದೆಲ್ಲವೂ ಸರಿತಪ್ಪು ಎಂದು ವರದಿ ಬರುತ್ತದೆ. ಹೀಗಾಗಿ ಸಾರಿಗೆಯ ಬಹುತೇಕ ಡಿಸಿಗಳು ಕೂಡ ಲಂಚ ಎಂಬ ಎಂಜಲಿಗೆ ನಾಲಿಗೆ ಚಾಚಿಕೊಂಡಿರುವುದರಿಂದ ಅವರು ನೌಕರರ ನಿಷ್ಠೆ ಬಗ್ಗೆ ಮಾತನಾಡುವುದಿಲ್ಲ.
ಹೀಗಾಗಿ ಲೈನ್ ಚೆಕಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಎಟಿಐ ಒಬ್ಬರು ಫೋನ್‌ನಲ್ಲೇ ರಾಜರೋಷವಾಗಿ ಊಟಕ್ಕೆ ಹೋಟೆಲ್ ಹೋಗಿ ಫೋನ್ ಪೇ ಮಾಡುವುದಕ್ಕೆ ಹೇಳುತ್ತಾರೆ. ಅಲ್ಲದೆ ಗನ್‌ಪಾಯಿಂಟ್‌ನಲ್ಲಿದೆ ಆತನ ಸ್ಥಿತಿ ಏನು ಮಾಡುವುದು ಎಂದು ಹೆದರಿಸುವ ಕೆಲಸವನ್ನು ಮಾಡುತ್ತಾನೆ ಎಂದರೆ ಈತ ಸಂಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟನಾಗಿ ಬೆಳೆದಿರಬೇಕು?
ಮೇಲಧಿಕಾರಿಗಳ ಭಯವಿಲ್ಲದೆ ಈ ರೀತಿ ವರ್ತಿಸುತ್ತಾನೆ ಎಂದರೆ ಈತನಿಗೆ ಅದ್ಯಾವ ಅಧಿಕಾರಿಯ ಕೃಪಾಕಟಾಕ್ಷವಿರಬಹುದು? ಒಟ್ಟಾರೆ ಚಾಲನಾ ಸಿಬ್ಬಂದಿಗಳನ್ನು ರಣ ಹದ್ದುಗಳಂತೆ ಕಿತ್ತು ತಿನ್ನುವುದು ಬಿಟ್ಟರೆ ಬೇರೆ ಕೆಲಸವಿಲ್ಲ ಬಹುತೇಕ ಭ್ರಷ್ಟ ಅಧಿಕಾರಿಗಳಿಗೆ.
ಇನ್ನು ಒಬ್ಬ ನಿವೃತ್ತ ಅಧಿಕಾರಿ ಹೇಳುತ್ತಿದ್ದರು, ನಮ್ಮ ಸರ್ವಿಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಮೀಟಿಂಗ್‌ಗಳಿಗೆ ಹೋಗಿದ್ದೇವೆ ಆ ಮೀಟಿಂಗ್‌ಗಳಲ್ಲಿ ಅಲ್ಲಿ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಆದರೆ ಅದು ಆಗುತ್ತಿರಲಿಲ್ಲ ಬದಲಿಗೆ ನೌಕರರಿಂದ ಹೇಗೆ ವಸೂಲಿ ಮಾಡಬೇಕು. ಯಾವ ನೌಕರನನ್ನು ಇಂದು ಪ್ರಕರಣದಲ್ಲಿ ಸಿಲುಕಿಸಬೇಕು ಎಂಬುದರ ಬಗ್ಗೆ ಮಾತ್ರ ಚರ್ಚೆಯಾಗುತ್ತಿತ್ತು ಎಂದು ಬೇಸರದಿಂದ ಮಾಹಿತಿ ಹಂಚಿಕೊಂಡರು.
ಈ ರೀತಿ ಅಧಿಕಾರಿಗಳು ಸಂಸ್ಥೆಯಲ್ಲಿ ಇರುವುದರಿಂದ ಕಾಲ ಕಾಲಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಜತೆಗೆ ಈ ಅಧಿಕಾರಿಗಳಿಗೆ ಬರಿ ಲಂಚ ಲಂಚ ಎಂಬುವುದು ಬಿಟ್ಟರೆ ಬೇರೆ ಯಾವುದು ಕಾಣುವುದಿಲ್ಲ. ಅದಕ್ಕೆ ಸ್ಪಷ್ಟ ನಿದರ್ಶನ ಈ ಗಂಗಾಧರ್ ನಾಯಕ್ ಆಡಿಯೋ. ಇದರಿಂದಲೇ ಗೊತ್ತಾಗುತ್ತದೆ ಎಂಥ ಸ್ಥಿತಿಯಲ್ಲಿ ನೌಕರರು ಡ್ಯೂಟಿ ಮಾಡುತ್ತಿದ್ದಾರೆ ಎಂದು.
ಇನ್ನಾದರೂ ಈ ಭ್ರಷ ಎಟಿಐ ಗಂಗಾಧರ್ ನಾಯಕ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ನಿಷ್ಠಾವಂತ ನೌಕರರು ನಿಯತ್ತಾಗಿ ಡ್ಯೂಟಿ ಮಾಡುವುದಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಕಾಶ ಮಾಡಿಕೊಡಲು ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.