CrimeNEWSನಮ್ಮರಾಜ್ಯ

KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗೇಶ್

ಬೈಕ್‌ ಸವಾರನಿಂದ ಹಲ್ಲೆಗೊಳಗಾದ ಚಾಲಕ ಹನುಮಂತ.
ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಅಲ್ಲದೆ ಬಳಿಕ ಚಲಿಸುತ್ತಿದ್ದ ಬಸ್‌ ಮುಂದೆ ಹೋಗಿ ತಾನೆ ಬಸ್‌ಗೆ ಬೈಕ್‌ ಡಿಕ್ಕಿಹೊಡೆಸಿ ಚಾಲಕನೆ ನನ್ನನ್ನು ಕೊಲ್ಲುವ ಉದ್ದೇಶದಿಂದ ಅಪಘಾತ ಮಾಡಿದ್ದಾನೆ ಎಂದು ಬಿಂಬಿಸಿರುವ ಘಟನೆ ಸೋಮವಾರ‌ (ಸೆ.9)  ಮಧ್ಯಾಹ್ನ ನಡೆದಿದೆ.

ಘಟನೆ ವಿವರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ನಿವಾಸಿ ಕೆಎಸ್‌ಆರ್‌ಟಿಸಿ ಮಳವಳ್ಳಿ ಘಟಕದ ಚಾಲಕ ಹನುಮಂತ ಎಂಬುವರ ಮೇಲೆ ಅದೇ ಗ್ರಾಮದ ಯೋಗೇಶ್‌ ಎಂಬಾತ ಕಳೆದ ಸೆ.30ರಂದು ಕೆ.ಪಿ.ದೊಡ್ಡಿ ಬಳಿ ಬೈಕ್‌ನಲ್ಲಿ ಹನುಮಂತ ಹೋಗುತ್ತಿದ್ದ ವೇಳೆ ಯೋಗೇಶ್‌ ಸೇರಿದಂತೆ ಮೂವರು ಅಡ್ಡಗಟ್ಟಿ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ಹಲ್ಲೆ ನಡೆಸಿ ಕ್ಷಣರ್ಧದಲ್ಲಿ ಪರಾರಿಯಾಗಿದ್ದರು.

ಈ ಸಂಬಂಧ ಕೆಎಸ್‌ಆರ್‌ಟಿಸಿ ಚಾಲಕ ಹನುಮಂತ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಅದೇ ಠಾಣೆಯಲ್ಲಿ ಯೋಗೇಶ್‌ ಕೂಡ ಪ್ರತಿ ದೂರು ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಯೋಗೇಶ್‌ ಆಬಳಿಕ ಅಂದು ಸಂಜೆ ಹನುಮಂತನ ಮನೆಗೆ ತನಗೆ ಹೆಣ್ಣುಕೊಟ್ಟ ಅತ್ತೆ ಮಾನವನನ್ನು ಕಳುಹಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ನಂತರ ಈತ ಅತ್ತೆ ನಾಗಮ್ಮ ಮತ್ತು ಮಾವ ಮಹೇಶ್‌ ಇಬ್ಬರು ಹೋಗಿ ಮಳವಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಹನುಮಂತನ ಪಾಲಕರೂ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ಇನ್ನು ಇತ್ತ ಹಲ್ಲೆಗೊಳಗಾಗಿ 6-7ದಿನಗಳಿಂದ ಚಿಕಿತ್ಸೆ ಪಡೆದ ಬಳಿಕ ಅಂದರೆ ಸೋಮವಾರ ಸೆ.9ರಂದು ಡ್ಯೂಟಿಗೆ ಹನುಮಂತ ಹೋಗಿದ್ದಾರೆ. ಇದೇ ಸಮಯ ಕಾಯುತ್ತಿದ್ದ ಯೋಗೇಶ್‌ ಮಂಡ್ಯ ಬಸ್‌ನಿಲ್ದಾಣದಿಂದ ಕೆ.ಎಂ.ದೊಡ್ಡಿ ಮಾರ್ಗವಾಗಿ ಮಳವಳ್ಳಿಗೆ ಬಸ್‌ ಹೋಗುತ್ತಿದ್ದಾಗ ಕಾಗೇಪುರ ಟಿ. ಬಳಿ ಬಂದು ಅಂದು ಮಧ್ಯಾಹ್ನ ಹನುಮಂತನ ಜತೆ ಕ್ಯಾತೆತೆಗೆದಿದ್ದಾನೆ.

ಈ ವೇಳೆ ಹನುಮಂತನಿಗೆ ಅವಾಚ್ಯವಾಗಿ ಬೈದಿದ್ದು ಅಲ್ಲದೆ ಮಾರ್ಗಾಚರಣೆಯಲ್ಲಿದ್ದ ಬಸ್ಸನ್ನು ಹಿಂದಿನಿಂದ ಬೈಕ್‌ನಲ್ಲಿ ಪಾಲೋಮಾಡಿಕೊಂಡು ಹೋಗಿದ್ದಾನೆ. ಈ ಬೈಕ್‌ನಲ್ಲಿ ಚೌಡಯ್ಯ ಎಂಬುವರನ್ನು ಹಿಂದೆ ಕೂರಿಸಿಕೊಂಡು ಹೋಗಿದ್ದು, ಬಸವನಪುರ ಬಳಿ ಬಸ್‌ ಓವರ್‌ಟೇಕ್‌ ಮಾಡುವ ನಾಟಕವಾಡಿ ಬಸ್‌ನ ಮುಂದಿನ ಎಡಭಾಗದಕ್ಕೆ ಹೋಗಿ ಬೈಕ್‌ ಬೇಕ್‌ಹೊಡೆಸಿ ಬಸ್‌ ಬೈಕ್‌ಗೆ ಡಿಕ್ಕಿ ಹೋಡೆದಿದೆ ಎಂದು ನಾಡಕವಾಡಿದ್ದಾನೆ.

ಅಲ್ಲದೆ ಈ ವೇಳೆ ಕೆಳಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಹಿಂಬದಿ ಸವಾರ ಚೌಡಯ್ಯನಿಗೂ ಗಾಯವಾಗುವಂತೆ ನೋಡಿಕೊಂಡಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಾಗಿ ಟಿ.ಸಿ. ಹನುಮಂತ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಸರ್ಕಾರಿ ಬಸ್‌ ದುರುಪಯೋಗ ಪಡಿಸಿಕೊಂಡು ನನ್ನ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಎಲ್ಲವನ್ನು ಇವನೇ ಮಾಡಿ ಕೊಲೆ ಯತ್ನ ಪ್ರಕರಣವನ್ನು ಪೊಲೀಸ್‌ ಠಾಣೆಯಲ್ಲಿ ಸೆ.9ರಂದು ದಾಖಲಿಸಿದ್ದಾನೆ.

ಬಸ್‌ ಹಿಂದೆ ಪಾಲೋ ಮಾಡಿದ್ದು ಮತ್ತು ಓವರ್‌ಟೇಕ್‌ ಮಾಡುವ ನೆಪದಲ್ಲಿ ಬಂದು ಬಸ್‌ಗೇ ಬೈಕ್‌ ಡಿಕ್ಕಿಹೊಡೆಸಿದ್ದನ್ನು ವಿಡಿಯೋ ಮಾಡಬೇಕು ಎಂದುಕೊಂಡ ಚಾಲಕ ಹನುಮಂತ ಬಸ್‌ ಓಡಿಸುತ್ತಿದ್ದರಿಂದ ನಿಗಮದಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ವಿಡಿಯೋ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಬಸ್‌ನಲ್ಲಿ ಸಿಸಿಟಿವಿ ಇದ್ದಿದ್ದರೆ ಯೋಗೇಶ್‌ ಮಾಡಿದ ಕುತಂತ್ರವೆಲ್ಲ ಬಯಲಾಗುತ್ತಿತ್ತು.

ಜತೆಗೆ ಸರ್ಕಾರಿ ಬಸ್‌ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಯೋಗೇಶ್‌ ವಿರುದ್ಧ ದೂರು ದಾಖಲಿಸಬಹುದಿತ್ತು. ಈಗಲೂ ಈ ಸಂಬಂಧ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಯೋಗೇಶ್‌ ಸೃಷ್ಟಿಸಿರುವ ಡ್ರಾಮಾ ವಿರುದ್ಧ ದೂರು ದಾಖಲಿಸಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಕ್ಕೆ ಅವಕಾಶವಿದೆ.

ಇನ್ನು ಸಾರಿಗೆ ನೌಕರ ಹನುಮಂತ ಮತ್ತು ಯೋಗೇಶ್‌ ನಡುವೆ ಈ ದ್ವೇಷಕ್ಕೆ ಕಾರಣವೇನು ಎಂದರೆ ಈ ಇಬ್ಬರ ಕುಟುಂಬದವರು ತಳಗವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕೂ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ ಹನುಮಂತ ಕುಟುಂಬದವರು 200 -300 ರೂಪಾಯಿ ತೆಗೆದುಕೊಂಡರೆ ಯೋಗೇಶ್‌ ಕುಟುಂಬದವರು 600-700 ರೂ. ಚಾರ್ಜ್‌ ಮಾಡುತ್ತಾರಂತೆ. ಅದಕ್ಕೆ ಬಹುತೇಕ ತಳಗವಾದಿ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಹೆಚ್ಚಾಗಿ ಹನುಮಂತನ ಕುಟುಂಬವರು ಸರಬರಾಜು ಮಾಡುವ ಟ್ಯಾಂಕರ್‌ ನೀರನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಹನುಮಂತನ ಕುಟುಂಬದವರು ಗ್ರಾಮದಲ್ಲಿ ಯಾರಾದರು ನಿಧನರಾದರೆ ಅವರ ಕುಟುಂಬದವರಿಗೆ ಉಚಿತವಾಗಿ ನೀರು ಸರಬರಾಜು ಮಾಡುತ್ತಾರೆ. ಇದರಿಂದಲೂ ನಮಗೆ ಲಾಸ್‌ ಆಗುತ್ತಿದೆ ಎಂದು ಯೋಗೇಶ್‌ ದ್ವೇಷ ಸಾಧಿಸುತ್ತಿದ್ದು ಈ ದ್ವೇಷದಿಂದಲೇ ಹನುಮಂತನನ್ನು ಕೆಲಸದಿಂದ ವಜಾಗೊಳಿಸಿದರೆ ಆರ್ಥಿಕವಾಗಿ ದಿವಾಳಿ ಆಗುತ್ತಾರೆ. ಆಗ ನಾವು ಹೇಳಿದಂತೆ ಈ ಕುಟುಂಬದಬರು ಕೇಳುತ್ತಾರೆ ಎಂಬ ಕಿಡಿಗೇಡಿ ಮನೋಭಾವದಿಂದ ಈ ಕೃತ್ಯ ಎಸಗಿದ್ದಾನೆ ಯೋಗೇಶ್‌ ಎಂಬ ಆರೋಪ ಕೇಳಿ ಬಂದಿದೆ.

ಒಟ್ಟಾರೆ ಯೋಗೇಶ್‌ನ ಉದ್ದೇಶ ಹನುಮಂತನನ್ನು ಕೆಲಸದಿಂದ ವಜಾ ಮಾಡಿಸಬೇಕು ಎಂಬುದಾಗಿದೆ. ಹೀಗಾಗಿ ಆತ ಹೇಗಿದ್ದರೂ ಚಾಲಕನಾಗಿದ್ದಾನೆ ಅಪಘಾತ ನಾಟಕವಾಡಿದರೆ ಆತನನ್ನು ಕೆಲಸದಿಂದ ತೆಗೆಯುತ್ತಾರೆ ಎಂದು ತಾನೂ ಸೇರಿದಂತೆ ಹಿಂಬದಿ ಸವಾರನ ಪ್ರಾಣವನ್ನು ಲೆಕ್ಕಿಸದೆ ಬೈಕ್‌ಅನ್ನು ಬಸ್‌ಗೆ ಡಿಕ್ಕಿಹೊಡೆಸಿ ಅಪಘಾತ ಮಾಡಿದ್ದು ಈ ಅಪಘಾತವನ್ನು ಚಾಲಕ ಹನುಮಂತನ ಮೇಲೆ ಬರುವಂತೆ ನೋಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿದ ಬಳಿಕ ಯಾರದು ತಪ್ಪು ಎಂಬ ಸತ್ಯ ಹೊರಬರಬೇಕಿದೆ. ಆದರೆ, ಯೋಗೇಶ್‌ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಆತನ ಕಿಡಿಗೇಡಿ ಕೃತ್ಯಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ತಪ್ಪು ಮಾಡಿದವರಿಗೆ ಕಾನೂನಿನಡಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಹನುಮಂತನ ಕುಟುಂಬದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...