ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಮಹಿಳಾ ಮಣಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತಪವಾಗುತ್ತಿದೆ.
ಹೊರಗಡೆ ಹೋಗುವುದಕ್ಕೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದ ನಾರಿಯರು ಈಗ ತಮ್ಮ ಕೆಲಸ ಕಾರ್ಯಗಳನ್ನು ಬೇಗ ಬೇಗ ಮುಗಿಸಿಕೊಂಡು ಸಿಟಿ ರೌಂಡ್ಸ್ ಅಥವಾ ಪ್ರಕ್ಷಣೀಯ, ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ.
ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಚೈತನ್ಯದತ್ತ ದಾಪುಗಾಲಾಕುತ್ತಿವೆ ಎಂದರೆ ತಪ್ಪಾಗಲಾರದು, ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ಕೊಡುವುದಕ್ಕೆ ಮತ್ತು ವಾಹನಗಳಿಗೆ ಡಿಸೇಲ್ ತುಂಬಿಸುವುದಕ್ಕೆ ಪರದಾಡುವ ಸ್ಥಿತಿಯಲ್ಲಿರುವ ನಿಗಮಗಳು ಮಹಿಳಾ ಪ್ರಯಾಣಿಕರಿಂದ ಆರ್ಥಿಕ ಸದೃಢತೆಯತ್ತ ಮುಖಮಾಡುತ್ತಿವೆ.
ಹೌದು! ಶಕ್ತಿ ಯೋಜನೆ ಜಾರಿಯಾಗಿ ಒಂದುವಾರ ಪೂರ್ಣಗೊಳಿಸಿದ್ದು, ಈ ಒಂದು ವಾರದಲ್ಲಿ ಬರೊಬ್ಬರಿ 3,12,09,696 ಮಹಿಳೆಯರು ಕಳೆದ ಶನಿವಾರದ ವರೆಗೂ ಪ್ರಯಾಣ ಮಾಡಿದ್ದಾರೆ. ಇನ್ನು ಸಾರಿಗೆಯ ನಾಲ್ಕೂ ನಿಗಮಗಳಲ್ಲಿಯೂ ಈ ಮಹಿಳಾ ಪ್ರಯಾಣಿಕರದ್ದೇ ದರ್ಬಾರ್ ಎಂಬುದು ಗಮನಾರ್ಹ.
ನಿತ್ಯ ಎಷ್ಟು ಪ್ರಯಾಣಿಕರು ಸಂಚರಿಸಿದರು: * ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಂದಿ ಮಹಿಯರು ಪ್ರಯಾಣಿಸಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ 1,40,22,878 ರೂಪಾಯಿ. * ಸೋಮವಾರ (ಜೂ.12): 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 8,83,53,434 ರೂಪಾಯಿ.
- ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 10,82,02,191 ರೂಪಾಯಿ. * ಬುಧವಾರ (ಜೂನ್ 14): 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.
-
ಗುರುವಾರ (ಜೂ.15): 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ. * ಶುಕ್ರವಾರ (ಜೂ. 16): 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ. * ಶನಿವಾರ (ಜೂ. 17): 54,30,150 ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.
ಯೋಜನೆ ಜಾರಿಯಾದ ದಿನದಿಂದ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. ಒಟ್ಟಾರೆ ಹೀಗೆಯ ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದ ಸಾರಿಗೆ ನಿಗಮಗಳು ಈ ಹಿಂದಿನಂತೆ ಸ್ವಾವಲಂಬಿಯಾಗಿ ಆರ್ಥಿಕ ಸದೃಢತೆಯನ್ನು ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಸರ್ಕಾರ ಮಾತ್ರ ಮಹಿಳಾ ಪ್ರಯಾಣಿಕರ ಹಣವನ್ನು ನಿಗಮಗಳಿಗೆ ಜಮೆ ಮಾಡುವುದನ್ನು ಮಾತ್ರ ಮರೆಯಬಾರದು ಅಷ್ಟೆ..