ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್ ಸೈಕಲ್ ಜಾಥಾವು ಇಂದಿಗೆ 43ನೇ ದಿನಗಳನ್ನು ಪೂರ್ಣಗೊಳಿಸಿದೆ. ಈ ದಿನ ತುಮಕೂರಿನಲ್ಲಿ ಸಂಚರಿಸುತ್ತಿದ್ದು, ರಜೆ, ವಾರದ ರಜೆ ಸೇರಿ ಇತರೆ ರಜೆ ಮೇಲೆ ಇರುವ ನೂರಾರು ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಅತ್ಯಂತ ಉತ್ಸಾಹದಿಂದಲೇ ಭಾಗವಸಿದ್ದರು.
ಇನ್ನು ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲು ನೂರಾರು ನೌಕರರು ಸಂಗಮಗೊಂಡು, ಕೊಟ್ಟ ಮಾತು ಈಡೇರಿಸದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನು ಇಂದಿಗೆ ಸೈಕಲ್ ಜಾಥಾ ಆರಂಭವಾಗಿ 43 ದಿನಗಳು ಕಳೆದಿದ್ದು, ಸರ್ಕಾರದ ಕಣ್ಣು ತೆರೆಸಲು ಅವಿರತವಾಗಿ ನೌಕರರ ಕೂಟ ಶ್ರಮಿಸುತ್ತಿದೆ. ಆದರೂ ಸರ್ಕಾರ ಇವರ ಹೋರಾಟವನ್ನು ಸೂಕ್ಷ್ಮವಾಗಿ ಇನ್ನು ಗಮನಿಸಿದ ಹಿನ್ನೆಲೆಯಲ್ಲಿ ಅವರ ಬೇಡಿಕೆಗಳು ಇನ್ನು ಹಾಗೆಯೇ ಉಳಿದಿವೆ.
ನೌಕರರ ಹೋರಾಟವನ್ನು ಕೆಲ ಸಂಘಟನೆಗಳು ತುಚ್ಯವಾಗಿ ಕಾಣುತ್ತಿದ್ದು, ಇವರ ಜಾಥಾದಿಂದ ಏನು ಪ್ರಯೋಜನಾ ಆಗುವುದಿಲ್ಲ ಎಂದು ಉಡಾಫೆ ಮಾತುಗಳನ್ನಾಡುತ್ತಿವೆ. ಆದರೆ, ಅವರ ಮಾತಿಗೆ ಹೋರಾಟದ ಮೂಲಕವೇ ಉತ್ತರ ಕೊಡಬೇಕು ಎಂದು ಸಮಸ್ತ ನೌಕರರು ( ಕೆಲ ನೌಕರರನ್ನು ಹೊರತು ಪಡಿಸಿ) ಸೈಕಲ್ ಜಾಥಾಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ ನೌಕರರ ಕುಟುಂಬದವರು ಜಾಥಾದಲ್ಲಿ ಭಾಗವಹಿಸುವ ಮೂಲಕ ನಾವು ಹೇಡಿಗಳಲ್ಲ ಎಂಬುದನ್ನು ತೋರಿಸುತ್ತಿದ್ದಾರೆ. ಜತೆಗೆ ನಾವು ಇಲ್ಲಿಯವರೆಗೆ ಮೂರ್ಖರಂತೆ ಕೆಲ ಸಂಘಟನೆಗಳು ಹೇಳಿದ್ದನ್ನೇ ನಂಬಿಕೊಂಡು ಬಂದಿದ್ದೇವೆ. ಅದರ ಪರಿಣಾವನ್ನು ಇಂದು ಅನುಭವಿಸುತ್ತಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲೂ ಈ ನೋವು ಅನುಭವಿಸುವ ತಪ್ಪನ್ನು ಮತ್ತೆ ಮಾಡುವುದು ಬೇಡ ಎಂಬ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇನ್ನು ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಲ್ಲಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಅದು ಬರಿ ಭರವಸೆಯಾಗಿಯೇ ಇರಬಾರದು ಎಲ್ಲವೂ ಕಾರ್ಯ ರೂಪಕ್ಕೆ ಬರಬೇಕು ಎಂದು ಒತ್ತಾಯಿಸಿ ಅಧಿವೇಶನದ ವೇಳೆಯೂ ಹೋರಾಟ ಮಾಡಲು ಸಿದ್ಧರಾಗುತ್ತಿರುವುದಾಗಿ ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇಂದು ತುಮಕೂರಿನಲ್ಲಿ ನಡೆದ ಸೈಕಲ್ ಜಾಥಾದದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ನೀತಿಯನ್ನು ಕೈ ಬಿಡಬೇಕು. ಕೂಟದ ನಡೆ ಕಾರ್ಮಿಕರ ಏಳಿಗೆಯ ಕಡೆ. ನಡೆಸಿ ನಡೆಸಿ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಿ ಎಂಬುವುದು ಸೇರಿದ ವಿವಿಧ ಸ್ಲೋಗನ್‌ಗಳಿರುವ ಬ್ಯಾನರ್‌ಗಳನ್ನು ಹಿಡಿದು ನೌಕರರು ಘೋಷಣೆಗಳನ್ನು ಕೂಗಿದರು.
ಮುಷ್ಕರದ ಸಮಯದಲ್ಲಿ ಆಗಿರುವಂತಹ ಸುಳ್ಳು ಪೊಲೀಸ್ ಕೇಸ್ ಹಿಂಪಡೆಯಬೇಕು. ಚೌಕಾಸಿ ವೇತನ ಪರಿಷ್ಕರಣೆ ತೊಲಗಿಸಿ ಸಾರಿಗೆ ಕಾರ್ಮಿಕರನ್ನು ಉಳಿಸಿ, ಬೇಕೇಬೇಕು ವೇತನ ಆಯೋಗವೇ ಬೇಕು.
ಅಗ್ರಿಮೆಂಟ್ ಬಾಳು ಕಾರ್ಮಿಕರ ಕುಟುಂಬ ಬೀದಿಪಾಲು. ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ಕಾರ್ಮಿಕರ ಬಲಿ ನಿಲ್ಲಲ್ಲಿ ಎಂದು ಒತ್ತಾಯಿಸಿ ಇಂದು ನಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಸಾರಿಗೆ ನೌಕರರು ಸೈಕಲ್ ಜಾಥಾಕ್ಕೆ ಸಾಥ್ ನೀಡಿದರು.
ಇನ್ನು ಈಗಾಗಲೇ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿರುವ ಸಾರಿಗೆ ನೌಕರರ ಸೈಕಲ್ ಜಾಥಾ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತಿದೆ. 1800ಕ್ಕೂ ಹೆಚ್ಚು ಕಿಮೀ ಕ್ರಮಿಸಿರುವ ಸೈಕಲ್ ಜಾಥಾ ನಿರಂತರವಾಗಿ ತನ್ನ ಸಂಚಾರವನ್ನು ಮುಂದುವರಿಸಿದ್ದು, ಇದೇ ನ.25ರಂದು ಕೋಲಾರದಲ್ಲಿ ಬೃಹತ್ ಸಾರಿಗೆ ನೌಕರರ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸಮಸ್ತ ನೌಕರರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.