ಬೆಂಗಳೂರು: ಕೇಂದ್ರ ಸರ್ಕಾರದ ನೌಕರರು 8ನೇ ವೇತನ ಆಯೋಗದ ಶಿಫಾರಸು ಜಾರಿಯಾಗುವುದನ್ನೇ ಕಾಯುತ್ತಿರುವಂತೆ ರಾಜ್ಯ ಸರ್ಕಾರಿ ನೌಕರರು ತುಟ್ಟಿ ಭತ್ಯೆ (Dearness Allowance) ಜಾಸ್ತಿಯಾಗುವುದು ಯಾವಾಗ ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ದೀಪಾವಳಿ ಹಬ್ಬದ ವೇಳೆ ತನ್ನ ನೌಕರರಿಗೆ ಶೇ.2ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ.
ನೌಕರರು ತಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ ಅನ್ನೋ ಬೇಸರದಲ್ಲಿ ಇದ್ದರು, ಈ ಕಾರಣಕ್ಕೆ ಪದೇಪದೇ ಸರ್ಕಾರಿ ನೌಕರರು ಹೋರಾಟದ ಹಾದಿ ಹಿಡಿಯುವ ಅನಿವಾರ್ಯ ಪರಿಸ್ಥಿತಿಯು ನಿರ್ಮಾಣ ಆಗುತ್ತಿತ್ತು. ಸರ್ಕಾರಿ ಕೆಲಸ ಮಾಡುವವರಿಗೆ ಕೆಲಸಕ್ಕೆ ತಕ್ಕನಾಗಿ ವೇತನ ಅಂದ್ರೆ ಸಂಬಳ ಮತ್ತಿತರ ಸೌಲಭ್ಯ ಸಿಗುತ್ತಿಲ್ಲ ಎಂಬ ಚರ್ಚೆ ಪದೇಪದೇ ನಡೆಯುತ್ತಾ ಬಂದಿತ್ತು. ಅದರಲ್ಲೂ ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ನೌಕರರು ಒತ್ತಡ ಕೂಡ ಹಾಕುತ್ತಿದ್ದರು.
ಇಂತಹ ಸಮಯದಲ್ಲೇ ದಿಢೀರ್ ಡಿಎಯನ್ನು ಜುಲೈ 1-2025ರಿಂದ ಅನವ್ಯವಾಗುವಂತೆ ಶೇ. 2ರಷ್ಟು ಏರಿಸುವ ಮೂಲಕ ಪ್ರಸ್ತುತ ಪಡೆಯುತ್ತಿದ್ದ ಶೇ.12.25ರಿಂದ ಶೇ. 14.25ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2023 ವಿಧಾನಸಭೆ ಚುನಾವಣೆ ಗೆದ್ದು ಸರ್ಕಾರ ರಚಿಸುವಲ್ಲಿ ಸರ್ಕಾರಿ ನೌಕರರ ಬೆಂಬಲ ಕೂಡ ದೊಡ್ಡದಾಗಿತ್ತು.
ಇನ್ನು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಭಾರಿ ದೊಡ್ಡ ಡಿಮ್ಯಾಂಡ್ ಇಟ್ಟು ಸರ್ಕಾರಿ ನೌಕರರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದರು. ಹೀಗಿದ್ದಾಗ 7ನೇ ವೇತನ ಆಯೋಗದ ಬೇಡಿಕೆ ಈಡೇರಿಸಿದ್ದ ರಾಜ್ಯ ಸರ್ಕಾರ, ಇದೀಗ ದೀಪಾವಳಿ ಹಬ್ಬಕ್ಕೆ ಮೊದಲೇ ಭರ್ಜರಿ ಗಿಫ್ಟ್ ಕೊಟ್ಟಿದೆ.
ಇದು ಸರ್ಕಾರಿ ನೌಕರರಿಗೆ ಸಖತ್ ಖುಷಿ ಕೊಟ್ಟಿದೆ. ಸರ್ಕಾರ ತುಟ್ಟಿಭತ್ಯೆ (ಡಿಎ) ಶೇಕಡಾ 12.25 ರಿಂದ ಶೇಕಡಾ 14.25ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಇದೀಗ ಜಾರಿಗೆ ಬಂದಿರುವ ಆದೇಶದಿಂದ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು ಸೇರಿದಂತೆ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಸೌಲಭ್ಯ ಸಿಗಲಿದೆ. ಹಾಗೇ ಇವರ ಜೊತೆ ಕರ್ನಾಟಕ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಈ ಆದೇಶ ಅನ್ವಯವಾಗಲಿದ್ದು ತುಂಬಾ ಖುಷಿ ಕೊಟ್ಟಿದೆ.

Related
