ಬೆಂಗಳೂರು: ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಆರ್‌ಸಿಬಿ ಸೋಲಿಗೆ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ನಂಬುಗೆಯ ಬೌಲರ್ಸ್ ತುಂಬಾನೇ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡದ ಮುಂದೆ ಆರ್‌ಸಿಬಿ ತಲೆ ಬಾಗಬೇಕಾಯಿತು.
ಮೊಹ್ಮದ್ ಸಿರಾಜ್, ಜೋಸೆಫ್, ಯಶ್ ದಯಾಳ್ ತುಂಬಾನೇ ದುಬಾರಿಯಾದರು. ಸಿರಾಜ್ ಮೂರು ಓವರ್ ಮಾಡಿ ಯಾವುದೇ ವಿಕೆಟ್ ಪಡೆಯದೇ 46 ರನ್ಗಳನ್ನು ನೀಡಿದರು. ಅದೇ ರೀತಿ ಯಶ್ ದಯಾಳ್ ಕೂಡ 4 ಓವರ್ ಮಾಡಿ 46 ರನ್ ನೀಡಿದರು. ಇನ್ನು, ಜೋಸೆಫ್ ಕೇವಲ 2 ಓವರ್ ಮಾಡಿ 34 ರನ್ ನೀಡಿದರು.
ವಿಶೇಷ ಅಂದರೆ ಕನ್ನಡಿಗ ವಿಜಯಕುಮಾರ್ ವೈಶಾಕ್ 4 ಓವರ್ ಮಾಡಿ 23 ರನ್ಗಳನ್ನು ಮಾತ್ರ ನೀಡಿ ಒಂದು ವಿಕೆಟ್ ಪಡೆದರು. ಹಾಗೆಯೇ ಮಯಾಂಕ್ ಡಗರ್ ಅವರು 2.5 ಓವರ್ ಮಾಡಿ ಒಂದು ವಿಕೆಟ್ ಪಡೆದು 23 ರನ್ ಕೊಟ್ಟರು. ವಿಶೇಷ ಅಂದರೆ ಕಮರೂನ್ ಗ್ರೀನ್ ಕೇವಲ ಒಂದು ಓವರ್ ಮಾಡಿ 7 ರನ್ ಮಾತ್ರ ನೀಡಿದ್ದರು.
ಎಲ್ಲ ಬೌಲರ್ಗಳಿಂತ ಗ್ರೀನ್ ಬೆಟರ್ ಬೌಲಿಂಗ್ ಮಾಡಿ ಗಮನ ಸೆಳೆದರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ಕೊಹ್ಲಿ ಅವರ 86 ರನ್ಗಳ ಅಜೆಯ ಆಟದಿಂದ 6 ವಿಕೆಟ್ ಕಳೆದುಕೊಂಡು 182 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಕೆಕೆಆರ್, ಮೂರು ವಿಕೆಟ್ ಕಳೆದುಕೊಂಡು 186 ರನ್ಗಳಿಸಿ ಸಂಭ್ರಮಿಸಿತು.