
ರಾಜಸ್ಥಾನ: ನಟ ದರ್ಶನ್ ಈಗ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಈ ನಡುವೆ ಈ ಚಿತ್ರದ ಬಗ್ಗೆ ನವೀಕರಣವೊಂದು ಹೊರಬಿದ್ದಿದೆ. ರಾಜಸ್ಥಾನದಲ್ಲಿ ದರ್ಶನ್ ‘ಡೆವಿಲ್’ ಶೂಟಿಂಗ್ ಮಾಡಿ ಯಶಸ್ವಿಯಾಗಿ ಮುಗಿಸಿಕೊಂಡು ವಾಪಸ್‌ಆಗುತ್ತಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಈ ಬೆನ್ನಲ್ಲೇ ರಾಜಸ್ಥಾನಕ್ಕೆ ‘ಡೆವಿಲ್’ ಟೀಮ್ ತೆರಳಿತ್ತು. ಒಂದು ವಾರ ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿ ಮುಗಿಸಿರುವ ದರ್ಶನ್ & ಟೀಮ್ ಏ.2ರಂದು ಬೆಂಗಳೂರಿಗೆ ವಾಪಸ್ಸಾಗುತ್ತಿದೆ.
ಇನ್ನು ಮುಂದಿನ ಹಂತದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯಲಿದ್ದು ಬೆಂಗಳೂರಿಗೆ ಬಂದ ಬಳಿಕ ಮತ್ತೆ ‘ಡೆವಿಲ್’ ಟೀಮ್ ಹೈದರಾಬಾದ್‌ಗೆ ತೆರಳಲಿದೆ. ಅಂದಹಾಗೆ, ಈ ವರ್ಷದ ಅಂತ್ಯದಲ್ಲಿ ಡೆವಿಲ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಈ ಚಿತ್ರದಲ್ಲಿ ದರ್ಶನ್ ಜತೆ ಕರಾವಳಿ ನಟಿ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ವಿನಯ್ ಗೌಡ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಹಿಂದೆ ತಾರಕ್ ನಿರ್ದೇಶನ ಮಾಡಿದ್ದ ಮಿಲನಾ ಪ್ರಕಾಶ್ ಅವರೇ ‘ಡೆವಿಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.