ಹನೂರು: ಇತಿಹಾಸ ಪ್ರಸಿದ್ಧ ಯಾತ್ರಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ಹುಂಡಿ ತೆರೆದು ಎಣಿಕೆ ಮಾಡಿದಾಗ ಅಮಾನ್ಯಗೊಂಡಿರುವ ಲಕ್ಷಾಂತರ ರೂಪಾಯಿ ನೋಟುಗಳು ಪತ್ತೆಯಾಗಿವೆ.
ಈ ಮೂಲಕ ಮಾದಪ್ಪನಿಗೂ ಮೋಸ ಮಾಡುವ ಮೂಲಕ ದೇವರನ್ನೇ ಯಾಂಾಋಿಸಿದ್ದಾರೆ ಭಕ್ತರು. ಬೌದು! ಅಮಾನ್ಯಗೊಂಡು 7 ವರ್ಷಗಳ ಬಳಿಕ ಗರಿಷ್ಠ ಮೌಲ್ಯದ ಲಕ್ಷಾಂತರ ರೂಪಾಯಿ ಹಣ ಮಾದಪ್ಪನ ಹುಂಡಿ ಸೇರಿದೆ.
ಕಳೆದ ಮಂಗಳವಾರ ದೇವಾಲಯ ಹುಂಡಿ ಎಣಿಕೆ ವೇಳೆ ಚಲಾವಣೆಯಲ್ಲಿ ಇಲ್ಲದ ನೋಟುಗಳು ಪತ್ತೆಯಾಗಿದ್ದವು. ಅದಾದ ಬಳಿಕ, ಇಂದು ಅವುಗಳನ್ನು ಎಣಿಕೆ ಮಾಡಲಾಗಿದೆ.
1ಸಾವಿರ ಮುಖಬೆಲೆಯ ನೋಟುಗಳು 677 ಇದ್ದು, (6,77,000) ಹಾಗೂ 500 ಮುಖಬೆಲೆಯ ನೋಟುಗಳು 4, 353 (21,76,500) ಇದೆ. ಹೀಗೆ ಒಟ್ಟು 28,53,500 ನೋಟುಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.
2000 ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ ನೋಟುಗಳು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ 28 ಲಕ್ಷದಷ್ಟು ಹಣ ಹುಂಡಿ ಸೇರಿದರೂ ಪ್ರಾಧಿಕಾರದ ಪ್ರಯೋಜನಕ್ಕೆ ಬಾರದಂತಾಗಿದೆ.