NEWSಕೃಷಿದೇಶ-ವಿದೇಶ

ರೈತರ ಕಣ್ಣಿಗೆ ಸುಣ್ಣ ಬಣ್ಣ ಹಚ್ಚಿದ ನಿರಾಶಾದಾಯಕ ಬಜೆಟ್: ಅತ್ತಹಳ್ಳಿ ದೇವರಾಜ್

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೇಂದ್ರ ಸರ್ಕಾರ ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ರೈತರ ರಕ್ಷಣೆಗೆ ಎನನ್ನು ಮಾಡದೆ ಸುಣ್ಣ ಬಣ್ಣ ಹಚ್ಚಿ, ನಾಲಿಗೆಗೆ ಜೇನು ತುಪ್ಪ ಸವರಿ ಜೊಲ್ಲು ಸುರಿಸುವ ನಿರಾಶಾದಾಯಕ ಬಜೆಟ್ ಮಂಡನೆ ಮಾಡಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕಿತ್ತು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕಿತ್ತು. ಕೆರೆ ಕಟ್ಟೆಗಳ ಒತ್ತುವರಿ ತೆರವು ಗೊಳಿಸಿ, ಹೂಳು ತೆಗೆದು ಆ ಮಣ್ಣನ್ನು ರೈತರ ಜಮೀನುಗಳಿಗೆ ಬಿಡಿಸಿ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಜಾರಿಗೆ ತರಬೇಕಿತ್ತು.

ಕಬ್ಬಿನ FRP ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಿಸುವ ಮಾನದಂಡ ಜಾರಿಗೆ ತರಬೇಕು. ಹಾಗೂ ಸಕ್ಕರೆ ಇಳುವರಿ 9.5 ಕ್ಕೆ ಎಫ್ಆರ್ಪಿ ದರ 6,000 ರೂ ನಿಗದಿ ಪಡಿಸಬೇಕು.

ಫಸಲ್ ಬಿಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು, ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಬೇಕು. 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ 10,000 ರೂ. ಪಿಂಚಣಿ ಯೋಜನೆ ಜಾರಿಗೆ ತರಬೇಕು. ತೆಲಂಗಾಣ ಮಾದರಿಯಲ್ಲಿ.

ರೈತನ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 25 % ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು. ಕೃಷಿ ಸಾಲ ವಸೂಲಾತಿಗಾಗಿ ರೈತರ ಜಮೀನು ವಶಡಿಸಿಕೊಳ್ಳುವ ಕಾಯ್ದೆ ರದ್ದುಪಡಿಸಬೇಕು.

ಆದರೆ ಇದಾವುದನ್ನು ಮಾಡದೆ ರೈತರಿಗೆ ಕಿಸಾನ್ ಸಮ್ಮಾ ನ್ ಯೋಜನೆ ಯಲ್ಲಿ ವರ್ಷಕ್ಕೆ 6,000 ರೂ.ನಿಂದ 9,000 ರೂ.ಗೆ ಏರಿಕೆ ಮಾಡಿ ಅಳುವ ಮಗುವಿಗೆ ಚಾಕಲೇಟ್ ಕೊಡುವ ರೀತಿ ನೀರಿಗೆ ಬೆರಳು ಅದ್ದಿ ಚೀಪಿದ ಹಾಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ, ಇದು ರೈತರಿಗೆ ಉಪಯೋಗವಿಲ್ಲದ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Megha
the authorMegha

Leave a Reply

error: Content is protected !!