NEWSನಮ್ಮಜಿಲ್ಲೆನಮ್ಮರಾಜ್ಯ

ಮಾಜಿ ಪ್ರಧಾನಿ ಎಚ್‌ಡಿಡಿ ಸಹೋದರಿ ಜವರಮ್ಮ ನಿಧನ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಮಾಜಿ ಪ್ರಧಾನಮಂತ್ರಿ  ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರರ ಸಹೋದರಿ ಜವರಮ್ಮ (88) ಇಂದು ನಿಧನರಾಗಿದ್ದಾರೆ.

ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಜವರಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜವರಮ್ಮ ಇಹಲೋಕ ತ್ಯಜಿಸಿದ್ದಾರೆ.

ತಂಗಿ ನಿಧನಕ್ಕೆ ಕಂಬನಿ ಮಿಡಿದ ದೊಡ್ಡಗೌಡರು: ತಮ್ಮ ಆಪ್ತ ಸಹೋದರಿಯ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀವ್ರ ಭಾವುಕರಾದರು.

ರಾಜಕೀಯವಾಗಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ದೇವೇಗೌಡರು ತಮ್ಮ ಹಳ್ಳಿಯ ಸೊಗಡು ಮತ್ತು ಕುಟುಂಬದ ಬಾಂಧವ್ಯವನ್ನು ಎಂದಿಗೂ ಮರೆತವರಲ್ಲ. ಅದರಲ್ಲೂ ತಂಗಿ ಜವರಮ್ಮ ಅವರ ಮೇಲೆ ಗೌಡರಿಗೆ ವಿಶೇಷ ಪ್ರೀತಿ ಇತ್ತು. ತಮ್ಮ ತಂಗಿಯ ಅಗಲಿಕೆಗೆ ಅವರು ಕಂಬನಿ ಮಿಡಿದಿದ್ದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಇಂದು ಸಂಜೆ ಬಸವನಾಯಕನಹಳ್ಳಿಯಲ್ಲಿ ಜವರಮ್ಮ ಅವರ ಅಂತ್ಯಕ್ರಿಯೆ ನಡೆಯಿತು.

Megha
the authorMegha

Leave a Reply

error: Content is protected !!
Latest news
ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ ಅಡ್ಡ ಮತದಾನ ಮಾಡಿದ್ದು ಯಾರೆಂದು ಗೊತ್ತು: ಮುಂದಿದೆ ಮಾರಿಹಬ್ಬ- ಎಚ್‌ಡಿಕೆ BMTC ಎಂಡಿ ಈಗ KSRTC ವ್ಯವಸ್ಥಾಪಕ ನಿರ್ದೇಶಕ- ಬಿಎಂಟಿಸಿಗೆ ರಘುನಂದನ್ ಮೂರ್ತಿ ನೂತನ ಎಂಡಿ 7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್‌ ಹಣ ವಿತ್‌ಡ್ರಾಗೆ ಅವಕಾಶ- ಜೂನ್ ಅಂತ್ಯದ...