NEWSನಮ್ಮಜಿಲ್ಲೆ

ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಕೆ.ಆರ್‌.ಪೇಟೆ: ಪ್ರತಿದಿನವೂ ಯೋಗಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಂಡು ಸಮೃದ್ಧ ಆರೋಗ್ಯವಂತ ಜೀವನ ನಡೆಸಿ. ಇದಕ್ಕೆ ಯೋಗವೊಂದೆ ಸಂಜೀವಿನಿ ಎಂದು ಯೋಗ ತರಬೇತಿ ಮಾರ್ಗದರ್ಶಕಿ ಡಾ. ದಿವ್ಯಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ಕೃಷ್ಣರಾಜಪೇಟೆ ತಾಲೂಕಿನ ಶೆಟ್ಟನಾಯಕನ ಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಮಾರ್ಗದರ್ಶನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ತಿಂಗಳು ಜೂನ್ 21ರ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳು ಯುವಜನರು ಸೇರಿದಂತೆ ಕೋಟ್ಯಂತರ ಜನರು ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಅಂದು ಬೆಳಗ್ಗೆ 6 ಗಂಟೆಯಿಂದ 7ಗಂಟೆವರೆಗೆ ನಡೆಯುವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ತಪ್ಪದೇ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಯೋಗ ತರಬೇತಿ ಮಾರ್ಗದರ್ಶಕಿ ಡಾ.ದಿವ್ಯಾ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿ, ಇದು ಆರೋಗ್ಯವಂತ ಜೀವನಕ್ಕೆ ಸಂಜೀವಿನಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಪ್ರತಿದಿನವೂ ಯೋಗ ಮಾಡಿ ತಮ್ಮ ಆರೋಗ್ಯ ಸಂವರ್ಧನೆ ಮಾಡಿಕೊಂಡು ನೂರ್ಕಾಲ ಸಂತೋಷದಿಂದ ಶಿಸ್ತು ಬದ್ಧ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲೆ ಪವಿತ್ರ, ನಿಲಯಪಾಲಕಿ ನಗಿನಾಬಾನು ಸೇರಿದಂತೆ ಶಿಕ್ಷಕರು ಹಾಗೂ ಯೋಗ ಮಾರ್ಗದರ್ಶಕರು ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ

Leave a Reply

error: Content is protected !!
LATEST
KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ... ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ: ಪುರಸಭೆ ಮಾಜಿ ಸದಸ್ಯ ನೀಲಕಂಠ ಕೆ.ಆರ್.ಪೇಟೆ: ಲೋಕಾ ಅದಾಲತ್‌ನಲ್ಲಿ ನೂರಾರು ಪ್ರಕರಣಗಳು ಇತ್ಯರ್ಥ