ನಮ್ಮ ಸಾರಿಗೆ ಇಲಾಖೆಯಲ್ಲಿ ಇಷ್ಟು ವರ್ಷವೂ ಒಟ್ಟಾರೆ ಅಗ್ರಿಮೆಂಟ್ ವಿಷಯವಾಗಿ ನಡೆದ ಯಾವೊಂದು ಮುಷ್ಕರದಲ್ಲೂ ಪಾಲ್ಗೊಳ್ಳದ, ಭಾಗಿಯಾಗದ (DC, DTO, AO, AWS, ATS, TI, Managers, TC, Junior assistant, Chargemans, ವಿಶೇಷವಾಗಿ ಅನುಕಂಪಾಧಾರಿತರು ಸೇರಿದಂತೆ ಇತರರು ) ತಾವು ತಿಳಿದುಕೊಳ್ಳಬೇಕಾದ ಮಹತ್ವದ ವಿಷಯಗಳು ನಿಮಗೆ ಗೊತ್ತಿದೆಯೇ?
1)ಮುಖ್ಯವಾಗಿ ತಮಗೆ ಎಷ್ಟು ಸಂಬಳ ಬರುತ್ತದೆ? 2) ತಾವು ತಮ್ಮ ಹುದ್ದೆಯನ್ನು ಯಾವ ವಿದ್ಯಾರ್ಹತೆಯ ಮೇಲೆ ಪಡೆದಿದ್ದೀರಿ? 3) ತಮ್ಮ ಕೆಲಸ, ಹುದ್ದೆಗನುಗುಣವಾಗಿ ವೇತನ ಇದೆಯಾ? 4) ತಮ್ಮ ಕೈಕೆಳಗಿನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಯಾಕಾಗಿ ಇಷ್ಟು ಶಿಕ್ಷಾದೇಶಗಳಿಗೆ ಗುರಿಪಡಿಸುವುದು? 5) ಖಾಸಗೀಕರಣ ಆದರೆ ಯಾರಿಗೆಲ್ಲ ತೊಂದರೆ ಇದೆ? ಅದರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾದವರು ಯಾರು? 6) ಹೆಚ್ಚಿನ ವೇತನ ಯಾರಿಗೆಲ್ಲಾ ಬೇಕು? ಯಾರಿಗೆ ಬೇಡಾ?
ಮೊನ್ನೆ ಸರ್ಕಾರಿ ನೌಕರರ ಮುಷ್ಕರಕ್ಕೆ ಇಡೀ ಸಮಸ್ತ 42 ಸರ್ಕಾರಿ ಇಲಾಖೆಗಳು ಮತ್ತದರ ದೊಡ್ಡ ದೊಡ್ಡ ಅಧಿಕಾರಿಗಳು (KAS, KES, SI, ತಹಸೀಲ್ದಾರ್, ಜಿಲ್ಲಾ ಸರ್ಜನ್, ಫಾರೆಸ್ಟ್ ಆಪೀಸರ್, BEO, DDPI) ಮುಷ್ಕರವನ್ನು ಬೆಂಬಲಿಸಿದ್ದಾರೆ. ತಾವುಗಳು ತಮ್ಮ Qualification ಅನುಸಾರವಾಗಿ ಇವರಿಗಿಂತ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದೀರಾ?
ಇಲ್ಲ ಇದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ಈ ಒಂದು ಬಾರಿ ಗಟ್ಟಿ ಮನಸ್ಸು ಮಾಡಿ ಇದೇ ಮಾ.24ರಿಂದ ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ಕೊಡಿ. ಭಯ ಪಡುವುದರಿಂದ ಏನು ಆಗದು. ಆದರೆ ಅಬ್ಬಬ್ಬಾ ಅಂದರೆ ಡಿಪಾರ್ಟ್ಮೆಂಟ್ ಏನು ಶಿಕ್ಷೆ ಕೊಡುತ್ತದೆ ನಮಗೆ? ಕರ್ನಾಟಕದ ಯಾವುದೋ ಒಂದು ವಿಭಾಗಕ್ಕೆ ವರ್ಗಾವಣೆ ಮಾಡುತ್ತದೆ. ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯವನ್ನು ಇಲ್ಲಿಯ ಹಾಗೇಯೇ ಮಾಡಬಹುದು. ಮುಖ್ಯವಾಗಿ ಅಲ್ಲಿಯೂ ಕೂಡ ಮೂಲ ಹುದ್ದೆಗೆ ತಮ್ಮನ್ನು ನಿಯೋಜಿಸುತ್ತಾರೆ.
ಇನ್ನು ನೂರೆಂಟು ಕೇಸ್ ಹಾಕಿಸಿಕೊಂಡಿರುವ ನಾವೇ ಹೆದರುತ್ತಿಲ್ಲ. ಓಡಾಡಲು ಜೀಪ್ ಕಾರು ಹೊಂದಿದ್ದೀರಿ, ಮತ್ತೆ ಮುಖ್ಯವಾಗಿ ತಮಗೆ ಸಿಗುವುದು ಪರಿಚಯದ ಅಧಿಕಾರಿಗಳೇ ಮತ್ತೆ ಬೇರೊಂದು ವಿಭಾಗದ ನೌಕರ ಸಿಬ್ಬಂದಿಗಳೆ. ಇನ್ನು ಇದು ಕ್ಷಣಿಕ, ಮತ್ತೆ ತಮ್ಮನ್ನು ಮೂಲ ಸ್ಥಳಕ್ಕೆ ವರ್ಗಾಯಿಸುತ್ತಾರೆ.
ಚಾಲನಾ ಸಿಬ್ಬಂದಿಗಳು ಅದೆಷ್ಟು ವರ್ಗಾವಣೆ, ಸಸ್ಪೆಂಡ್, ಡಿಸ್ಮಿಸ್‌ಗೆ ಒಳಗಾಗುತ್ತಿದ್ದರೂ ಕೂಡ ಗಡಿ ಕಾಯುವ “ಕೆಚ್ಚೆದೆಯ ವೀರರಂತೆ” ನಿಮ್ಮ ಸಂಬಳವನ್ನು ಸಹ ಹೆಚ್ಚಿಸಲು ತಮ್ಮ ನೌಕರಿಯ ಆಸೆ ಬಿಟ್ಟು ಮುಷ್ಕರಕ್ಕೆ ಸನ್ನದ್ಧರಾಗಿದ್ದಾರೆ. ಕೆಳಹಂತದ ಸಿಬ್ಬಂದಿಗಳೇ ಹೆದರುತ್ತಿಲ್ಲ ಇನ್ನು ಅವರಿಗಿಂತ ದೊಡ್ಡ ದೊಡ್ಡ ಹುದ್ದೆಯವರಾದ ತಾವುಗಳು ಶಿಕ್ಷಾದೇಶಗಳಿಗೆ ಯಾಕಾಗಿ ಹೆದರುವುದು?
ತಾವುಗಳು ಆಸ್ತಿ ಮಾಡಬೇಕು ಬಂಗಾರ ತಗೋಬೇಕು. ಬಿಲ್ಡಿಂಗ್ ಕಟ್ಟಿಸಬೇಕು ಅಂತಾ ಯೋಚಿಸುತ್ತಿರಬಹುದು? ಆದರೆ ಮುಷ್ಕರ ಮಾಡುವವರು ಒಂದು ಹೊತ್ತಿನ ಊಟ, ಹೆಂಡತಿ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕೆ ಪಣತೊಟ್ಟಿದ್ದಾರೆ. ದಯವಿಟ್ಟು ಕಾಲ ಮಿಂಚುವ ಮುನ್ನ ಅವರ ಕಣ್ಣೀರನ್ನು ಒರೆಸುವ ಕೈಗಳಾಗಿ.
ವಿಶೇಷವಾಗಿ ಅನುಕಂಪಾಧಾರಿತ ಸಿಬ್ಬಂದಿಗಳು ತಮಗೆ ಯಾರಿಂದ ಕೆಲಸ ದೊರೆಯಿತೋ ಅವರು ಕೂಡಾ ಮುಷ್ಕರ ಕೈಗೊಂಡವರಷ್ಟೇ ಬಳಲಿ ಬೆಂಡಾಗಿ ಕಾರಣಾಂತರಗಳಿಂದ ತೀರಿಹೋಗಿದ್ದಾರೆ. ಅವರ ಜತೆಯಲ್ಲಿ ಪ್ರಸ್ತುತ ಇರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದನ್ನು ಮರೆಯಬೇಡಿ.
ಹಾಗೇಯೆ “ಅಗ್ರಿಮೆಂಟ್ ಬೇಕು” ಎಂದು ಬಯಸುವ ಸಂಘಟನೆಗಳ ಸದಸ್ಯರಲ್ಲೂ ಕೂಡ ಕೊನೆಯದಾಗಿ ಸವಿನಯ ವಿನಂತಿ ಏನೆಂದರೆ ಒಂದೊಮ್ಮೆ “ಅಗ್ರಿಮೆಂಟ್ ಗಿಂತಲೂ ವೇತನ ಆಯೋಗದನ್ವಯದ ಸಂಬಳ ಕಡಿಮೆ” ಆಗಿದ್ದರೆ ಯಾಕಾಗಿ ಅಗ್ರಿಮೆಂಟ್‌ಗೆ ಸರ್ಕಾರ ಮನಸ್ಸು ಮಾಡಿದೆ? ಎಂಬುದರ ಬಗ್ಗೆ ಯೋಚಿಸಿ. ಯಾವುದೋ ಕಾಲದಲ್ಲಿ ಅಲ್ಪ ಸ್ವಲ್ಪ ಸಹಾಯ ಮಾಡಿದ್ದಕ್ಕೋಸ್ಕರ ಕಂಡು ಕಂಡು ಜೀವನ ಹಾಳುಮಾಡಿಕೊಳ್ಳುವುದು ಬೇಡ. ದಯವಿಟ್ಟು ಬದಲಾಗಿ ನನ್ನ ಸಹೋದ್ಯೋಗಿಗಳೆ.
ಸಾರಿಗೆ ನೌಕರರ ಮುಷ್ಕರ ಸಕ್ಸಸ್ ಆದರೆ ಏನಾಗಬಹುದು?
- ತಮಗೆ ಪ್ರಸ್ತುತ 6ನೇ ವೇತನ ಆಯೋಗದ ಅನ್ವಯ ಎಷ್ಟೋ ಸಾವಿರ ಲೆಕ್ಕದಲ್ಲಿ ಸಂಬಳ ಹೆಚ್ಚು ಬರುತ್ತದೆ.
- ಇಲಾಖೆಯ ಪ್ರತೀ ಹಂತದ ನೌಕರರಲ್ಲೂ ಪ್ರಾಮಾಣಿಕತೆ ಬಂದು ತಮಗೆ ತಮ್ಮ ಕಾರ್ಯಕ್ಕೆ ಹೆಚ್ಚಿನ ಒತ್ತಡ ಇರುವುದಿಲ್ಲ.
- ಮುಖ್ಯವಾಗಿ ನಿಮ್ಮ ನಮ್ಮ ನೌಕರರ ಮಧ್ಯೆ ಕಂದಕ ಕಡಿಮೆ ಆಗಿ ಸೌಹಾರ್ದತೆ ಮೂಡುತ್ತದೆ.
- ನೀವು ನಾವು ಯಾವ ಭಯ, ಅಂಜಿಕೆ ಇಲ್ಲದೇ ಸರ್ವಿಸ್ ಪೂರ್ತಿ ನಿಶ್ಚಿಂತೆಯಾಗಿ ಕರ್ತವ್ಯ ಮಾಡಬಹುದು.
- ಇನ್ನ್ಯಾವತ್ತೂ ಮುಷ್ಕರ, ನೌಕರರಿಗೆ ಶಿಸ್ತು ಪ್ರಕರಣಗಳು ನಡೆಯುವುದಿಲ್ಲ. ನಿಮಗೆ ಕೆಲಸದ ಒತ್ತಡ ಇರುವುದಿಲ್ಲ.
ತಾವು ಕೂಡ ಒಮ್ಮೆ ಗಟ್ಟಿ ಮನಸ್ಸು ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿದ್ದೆ ಆದರೆ ಕೆಳ ಹಂತದ ನೌಕರರಾದ ನಾವು (ಹೆಚ್ಚಿನ ವೇತನ ಬೇಕು ಎಂದು ಮುಷ್ಕರಕ್ಕೆ ಕರೆ ಕೊಟ್ಟ ಪ್ರತಿ ಕ್ಷಣ ನಮ್ಮವರಿಂದಲೇ ಮೋಸ ಹೋದ ನೊಂದ ಹೃದಯಗಳು) ನಿಮ್ಮನ್ನು ಎಷ್ಟು ಗೌರವಿಸುತ್ತಿದ್ದೀವೋ ಎಂಬುವುದು ಆ ದೇವರಿಗೆ ಗೊತ್ತು. ದಯಮಾಡಿ ತಾವು ಇದು ಒಂದು ಸಾರಿ ಆಲೋಚಿಸಿ ನಿಮ್ಮ ಕೈ ಕೆಳಗಿನ ನಮ್ಮ ಜೀವನಕ್ಕೆ ದಾರಿದೀಪವಾಗಿ.
– ನಾಲ್ಕು ನಿಗಮಗಳ ಸಾರಿಗೆ ನೌಕರರು