ಮಧುರೈ: ಮನುಷ್ಯ ಮತ್ತು ವ್ಯಕ್ತಿಗಳ ನಡುವೆ ಸಂಬಂಧ ಗಟ್ಟಿಯಾದರೆ ಆಸಂಬಂಧವನ್ನು ಕಳೆದುಕೊಳ್ಳುವಾಗ ಅಂಥ ವ್ಯಕ್ತಿಗಳಿಗೆ ಆಗುವ ತಳಮಳ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಿಕೊಳ್ಳುವುದು ಅಸಾಧ್ಯ.
ಅದಕ್ಕೆ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ಸೇವೆಯಿಂದ ನಿವೃತ್ತಿಯಾದ ದಿನ ಅಂದರೆ ತನ್ನ ಕೆಲಸದ ಕೊನೆಯ ದಿನದಂದು ಬಸ್‌ನೊಂದಿಗೆ ಇಟ್ಟುಕೊಂಡಿದ್ದ ಅವಿನಾಭಾವ ಸಂಬಂಧ ಕಳೆದುಹೋಗುತ್ತಿರುವುದಕ್ಕೆ ಭಾವುಕರಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಬಸ್ ಘಟಕದ ಮುತ್ತುಪಾಂಡಿ (60) ಎಂಬ ಚಾಲಕ ಭಾವುಕರಾದ ಕ್ಷಣದ ವಿಡಿಯೋ ನೋಡಿದ ಪ್ರತಿಯೊಬ್ಬ ಚಾಲಕನನ್ನು ಮೂಕವಿಸ್ಮಿತರನ್ನಾಗಿ ಮಾಡದೆ ಇರದು. ಮುತ್ತುಪಾಂಡಿ ಬಸ್ ಚಾಲಕರಾಗಿದ್ದರು. ನಿವೃತ್ತಿಯಾದ ಹಿನ್ನೆಲೆಯಲ್ಲಿ ಬಸ್‌ನ ಸ್ಟೇರಿಂಗ್ ಚಕ್ರಕ್ಕೆ ಮುತ್ತಿಟ್ಟು ತನ್ನ ಮತ್ತು ತಾನು ಓಡಿಸುವ ಬಸ್ ನಡುವೆ ಇದ್ದ ಅವಿನಾಭಾವ ಸಂಬಂಧ, ಮೂರು ದಶಕಗಳಿಂದ ತಾನು ಮಾಡುತ್ತಿರುವ ಉದ್ಯೋಗ ಕುರಿತಾದ ಪ್ರೀತಿ ಎಷ್ಟು ಅಗಾಧವಾಗಿದೆ ಎಂಬುದನ್ನು ತೋರಿಸುತ್ತದೆ.
ಮುತ್ತುಪಾಂಡಿ ಅವರು, ಮಧುರೈ ಜಿಲ್ಲೆಯ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮೀ ಕಾಲೋನಿ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದರು. ಮುತ್ತುಪಾಂಡಿ ಕೆಲಸದ ಕೊನೆಯ ದಿನದಂದು ಮಹಾಲಕ್ಷ್ಮೀ ಕಾಲೋನಿಗೆ ಬಸ್ ಚಲಾಯಿಸಿಕೊಂಡು ಹೋಗುವಾಗ ಕಣ್ಣೀರು ಸುರಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಕೊನೆಯ ಬಾರಿಗೆ ಬಸ್ಸನ್ನು ನೋಡುತ್ತಾ ಅಳುತ್ತಾರೆ. ಸ್ಟೇರಿಂಗ್, ಚಕ್ರ, ಕ್ಲಚ್, ಗೇರ್, ಬ್ರೇಕ್.. ಹೀಗೆಲ್ಲ ಮುತ್ತಿಕ್ಕಿ ನಮಸ್ಕರಿಸಿ ಬಸ್‌ನಿಂದ ಕೆಳಗಿಳಿದು ಬಳಿಕ ಬಸ್ ಬೋರ್ಡಿಗೆ ನಮಸ್ಕರಿಸಿ ಬಸ್‌ನ ಮುಂದೆ ಬಂದು ಎರಡು ಕೈಗಳಿಂದ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.
ಸಮಾಜದಲ್ಲಿ ನನಗೆ ಈ ವೃತ್ತಿ ಗೌರವ ತಂದುಕೊಟ್ಟಿದೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಇದರಿಂದ ಸಾಧ್ಯವಾಯಿತು ಎಂದು ಮುತ್ತುಪಾಂಡಿ ಆನಂದಬಾಸ್ಪದ ಜತೆಗೆ ವಿದಾಯವನ್ನು ದುಃಖದಿಂದ ಹೇಳಿದರು.
ಇನ್ನು ಮುತ್ತುಪಾಂಡಿ ಅವರು ತಮ್ಮ ಸೇವಾವಧಿಯಲ್ಲಿ ಯಾರೊಂದಿಗೂ ಜೋರಾಗಿ ಕೂಗಾಡಿದ್ದೇ ಇಲ್ಲ. ಪ್ರಯಾಣಿಕರು ಹಾಗೂ ಸಹೋದ್ಯೋಗಿಗಳೊಂದಿಗೆ ಪ್ರಿತಿಯಿಂದಲೇ ಬೆರೆಯುತ್ತಿದ್ದರು ಎಂದು ಸಹೋದ್ಯೋಗಿಗಳು ಕೂಡ ಹೊಗಳಿದ್ದಾರೆ.
#கடைசியாஒருமுறை… ஓய்வு பெறும் நாளில் நெகிழ்ச்சி… #பேருந்தை கட்டிப்பிடித்து அழுத ஓட்டுநர் #முத்துப்பாண்டி..@CMOTamilnadu @sivasankar1ss @kalilulla_it @abm_tn @rajakumaari @DonUpdates_in @PTRajkumar97899 @Vel_Vedha pic.twitter.com/pFjkbOcnnG
— Nowshath A (@Nousa_journo) June 1, 2023