CRIMENEWSನಮ್ಮಜಿಲ್ಲೆಮೈಸೂರು

ಮೈಸೂರು ಅರಮನೆ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಡ್ರೋನ್ ಹಾರಾಟ ನಿಷೇಧ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್‌ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆಯಿರುವುದರಿಂದ ಅರಮನೆ ಆರವಣ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ಚಟುವಟಿಕೆ ನಿಷೇಧಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಬಿಗುವಿನ ವಾತಾವರಣ ಈಗ ಶಮನಗೊಂಡಿದೆ. ಅದಾಗ್ಯೂ ತುರ್ತು ಸಂದರ್ಭಗಳಲ್ಲಿ ಜಿಲ್ಲೆಯಲ್ಲಿರುವಂತಹ ಸೂಕ್ಷ್ಮವಲಯಗಳನ್ನು ಗುರುತಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭದ್ರತಾ ಕಾಳಜಿಗಳ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವ ಎಲ್ಲಾ ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದ್ದು ಕಣ್ಗಾವಲು ಅಥವಾ ಇತರ ಉದ್ದೇಶಗಳಿಗಾಗಿ ಡ್ರೋನ್ ಗಳನ್ನು ನಿಯೋಜಿಸುವುದನ್ನು ತಪ್ಪಿಸಲು ಸಲಹೆಗಳನ್ನು ಸೂಚಿಸಲಾಗಿದೆ.

ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ನಗರ ಹಾಗೂ ಜಿಲ್ಲೆಯ ಪೊಲೀಸ್ ಇಲಾಖೆಗೆ ಭದ್ರತೆಯನ್ನು ಒದಗಿಸಲು ತಿಳಿಸಲಾಗಿದೆ. ಜತೆಗೆ ಅಂತಹ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧಗಳನ್ನು ಹಾಕುವುದು ಅಗತ್ಯವಾಗಿದೆ.

ಜಿಲ್ಲಾ ಅಗ್ನಿಶಾಮಕದಳ ತುರ್ತು ಸಂದರ್ಭಗಳಲ್ಲಿ ಸಿದ್ಧರಿರಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಿಶೇಷವಾಗಿ ನಾಗರಿಕರಿಗೆ ಯಾವುದೇ ತೊಂದರೆ ಮತ್ತು ಅಪಘಾತಗಳನ್ನು ನಿರ್ವಹಿಸಲು ಸನ್ನದ್ಧವಾಗಿರಲು ಜಾಗೃತಿ ಮೂಡಿಸಲಾಗುವುದು.

Deva
the authorDeva

Leave a Reply

error: Content is protected !!
Latest news
ಪವಿತ್ರ ರಂಜಾನ್ ಹಬ್ಬದ ಸಂದೇಶ ಮನುಕುಲಕ್ಕೆ‌ ಮಾರ್ಗದರ್ಶನ: ಸಿಎಂ ರಾಜ್ಯ ಉಗ್ರಾಣ ನಿಗಮದ ಎಂಡಿ ಆತ್ಮಹತ್ಯೆ ಪ್ರಕರಣ: ಸಾರಿಗೆ ಸಚಿವ ರಾಜೀನಾಮೆ! KKRTC: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್‌ ಪಲ್ಟಿ- 8ಮಂದಿಗೆ ಗಾಯ BMTC: ಘಟಕ 22ರಲ್ಲಿ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಬಸ್‌ ಚಲಿಸಿ ಸಂಚಾರ ನಿಯಂತ್ರಕರ ಕಚೇರಿ, ಬೈಕ್‌ಗಳಿಗೆ ಡಿಕ್... KSRTCಶಿರಾ: ಬರಗೂರು ಸಮೀಪ ಬಸ್‌ಗೆ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು ಬೆಂಗಳೂರಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರಿ ಬಸ್‌ ಬ್ರೇಕ್ ಫೇಲಾಗಿ ಬೈಕ್, ಪಿಕಪ್ ವ್ಯಾನ್‌ಗೆ ಡಿಕ್ಕಿ: ಗರ್ಭಿಣಿ, ಮಗು ಸೇರಿ ಎಂಟು ಮಂದಿ ಸಾವು BMTC: ಕುಡಿದು ಬಸ್‌ ಚಾಲನೆ – ಪ್ರಶ್ನಿಸಿದ ಮಹಿಳೆ ಜತೆ ಚಾಲಕನ ರಂಪಾಟ ಆರೋಪ ನೌಕರರ ವರ್ಗಾವಣೆ ವಿಚಾರದಲ್ಲಿ ಸಿಎಂಒ ನೇರ ಹಸ್ತಕ್ಷೇಪಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ಮಾಜಿ ಪ್ರಧಾನಿ ಎಚ್‌ಡಿಡಿ ಸಹೋದರಿ ಜವರಮ್ಮ ನಿಧನ