NEWSನಮ್ಮರಾಜ್ಯವಿಡಿಯೋ

NWKRTC: ಸೋರುತಿಹುದು ಬಸ್‌ ಮಾಳಿಗೆ ಅಧಿಕಾರಿಗಳ ಅಜ್ಞಾನದಿಂದ ಮಳೆಗೆ ಸೋರುತಿಹುದು..!!

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್‌ ಮಾಳಿಗೆ ಮಳೆಗೆ ಸೋರುತಿದ್ದು  ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.

ಸಂಸ್ಥೆಯ ಧಾರವಾಡ  ಘಟಕದ ಬಸ್‌ ಛಾವಣಿ ತೂತು ಬಿದ್ದಿದ್ದು ಮಳೆಗೆ ಅದು ಸೋರುತ್ತಿದೆ. ಆ ಬಸ್ಸನ್ನೇ ಚಾಲಕ ಕೊಡೆ ಹಿಡಿದುಕೊಂಡು ಮಳೆಯೊಳಗೆ ಓಡಿಸುತ್ತಿರುವುದನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

ಇದು ಘಟಕದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳ ನಡೆಯನ್ನು ತೋರಿಸುವಂತಿದೆ. ಬಸ್‌ಗಳನ್ನು ರಿಪೇರಿ ಮಾಡದೆ ಬಸ್‌ಗಳ ಫಿಟ್‌ನೆಸ್‌ ನೋಡದೆ ಚಾಲಕರ ಕೈಗೆ ಬಸ್‌ಕೊಟ್ಟು ಕಳುಹಿಸುವ ಚಾಳಿಯಿಂದ ಈ ರೀತಿಯ ಅವಾಂತರಗಳು ನಡೆಯುತ್ತಿವೆ.

ಇನ್ನು ಚಾಲಕರು ಇಂಥ ಬಸ್‌ ಬೇಡ ಎಂದು ಹೇಳಿದರೆ ಅವರಿಗೆ ಮೆಮೋ ಕೊಡುವುದು ಇಲ್ಲ ಬೇರೆ ಬಸ್‌ ಕೊಡದೆ ಡಿಪೋನಲ್ಲೇ ಕೂರಿಸಿ ಬಳಿಕ ಗೈರು ಹಾಜರಿ ಮಾಡಿ ವೇತನ ಬರದಂತೆ ಮಾಡುವುದು.

ಇದನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ಎದುರು ಮಾತನಾಡಿದ ಎಂದು ಹೇಳಿ ಮೆಮೋ ಕೊಟ್ಟು ಬಳಿಕ ಅಮಾನತು ಮಾಡುವುದು. ಇಲ್ಲಿ ಚಾಲಕರು ಬಸ್‌ ಸರಿಯಿಲ್ಲ ಎಂದು ಹೇಳುವುದಕ್ಕೂ ಬಿಡದೆ ಈ ರೀತಿ ಅಧಿಕಾರಿಗಳು ದಬ್ಬಾಳಿಕ ಮಾಡುತ್ತಿರುವುದರಿಂದ ಇಂದು ಕೊಡೆ ಹಿಡಿದುಕೊಂಡು ಬಸ್‌ ಓಡಿಸುವ ಸ್ಥಿತಿ ಚಾಲಕರಿಗೆ ಬಂದಿದೆ.

ಇನ್ನಾದರೂ ಈ ಬಗ್ಗೆ ಸಾರಿಗೆ ಸಚಿವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರು  ಗಮನ ಹರಿಸಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಯಾಣಿಕರೆ ಒತ್ತಾಯಿಸಿದ್ದಾರೆ.

  • ಸ್ಪಷ್ಟನೆ: ಈ ಮೊದಲು ಅಂದರೆ ಗುರುವಾರ ನ್ಯೂಸ್‌ ಬಂದ ಸಮಯದಲ್ಲಿ ಧಾರವಾಡ ಗ್ರಾಮಾಂತರ ಘಟಕ ಎಂಬುದರ ಬದಲಿಗೆ  ಹಾವೇರಿ ವಿಭಾಗದ ಹಾವೇರಿ ಘಟಕದ ಬಸ್‌ ಮಳೆಗೆ ಸೋರುತ್ತಿದೆ ಎಂದು ವರದಿ ಪ್ರಸಾರವಾಗಿದ್ದಕ್ಕೆ ವಿಷಾದಿಸುತ್ತೇವೆ. -ಸಂ

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ