ಬನ್ನೂರು: ಹೋಬಳಿಯ ಅತ್ತಹಳ್ಳಿ ಗ್ರಾಮದ ನಿವಾಸಿ ಎಲೆಕ್ಟ್ರಿಷಿಯನ್ ಪುಟ್ಟರಾಜು (46) ಇಂದು ನಿಧನ ಹೊಂದಿದರು.
ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕಿನ ಮೇಗಳಕೊಪ್ಪಲು ಮಾದಯ್ಯ ಅವರ ಪುತ್ರ ಅತ್ತಹಳ್ಳಿಯ ನಿವಾಸಿಯಾಗಿದ್ದ ಪುಟ್ಟರಾಜು ಅವರು ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಕೆಲ ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಬೀಡನಹಳ್ಳಿಯ ನವೀನಾ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶನಿವಾರ ಸಂಜೆ ಅತ್ತಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂತಾಪ: ಪುಟ್ಟರಾಜು ಅವರ ನಿಧನದ ಸುದ್ದಿ ತೀವ್ರ ನೋವು ತಂದಿದ್ದು, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನವೀನಾ ಪುಟ್ಟರಾಜು ಅವರ ಸ್ನೇಹಿತರು ಪ್ರಾರ್ಥಿಸಿದ್ದಾರೆ. ಪುಟ್ಟರಾಜು ಅವರ ಪಾರ್ಥಿವ ಶರೀರದ ದರ್ಶನ ಪಡೆದ ಸ್ನೇಹಿತರು ಕಂಬನಿ ಮಿಡಿಯುವ ಮೂಲಕ ಸಂತಾಪ ಸೂಚಿಸಿದರು.