ಹನೂರು : ವ್ಯಕ್ತಿಯೊಬ್ಬನ ಮೇಲೆ ಕಾಡಾನೆ ದಾಳಿ ನಡೆ ಮಾಡಿದ ಪರಿಣಾಮ ಆತನ ಕೈ- ಕಾಲು ಮುರಿತಗೊಂಡಿರುವ ಘಟನೆ ಕತ್ತೆಕಾಲು ಪೋಡಿ ಗ್ರಾಮದಲ್ಲಿನಡೆದಿದೆ.
ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತೆಕಾಲುಪೊಡು ಗ್ರಾಮದ ನಿವಾಸಿ ಕಣ್ಣುಕಾಣದ ಮಾದೇಶ್ (45) ಗಾಯಗೊಂಡ ವ್ಯಕ್ತಿ.
ಘಟನೆಯ ವಿವರ : ಬೈಲೂರು ಅರಣ್ಯ ಪ್ರದೇಶ ಸಮೀಪದ ಜಮೀನಿನಲ್ಲಿದ್ದ ಕಣ್ಣು ಕಾಣದ ಮಾದೇಶನ ಮೇಲೆ ಭಾನುವಾರ ಮಧ್ಯಾಹ್ನ 3ರ ಸಮಯದಲ್ಲಿ ದಾಳಿ ಮಾಡಿದೆ. ಪರಿಣಾಮ ವ್ಯಕ್ತಿಯ ಕೈ ಹಾಗೂ ಕಾಲು ಮುರಿದಿದೆ.
ಜಮೀನಿನಲ್ಲಿ ಘಟನೆ ನಡೆದಿದ್ದರಿಂದ ವಿಚಾರ ಮನೆಯವರಿಗೆ ತಿಳಿದಿಲ್ಲ ನಂತರ ಮೇವು ಮೆಯಿಸಲು ತೆರಳಿದ ದನಗಾಯಿ ಯುವಕರಿಂದ ಮಾಹಿತಿ ಪಡೆದುಕೊಂಡ ಕುಟುಂಬಸ್ಥರು ಗ್ರಾಮ ಪಂಚಾಯಿತಿ ಸದಸ್ಯ ನಿಂಗಯ್ಯ ಹಾಗೂ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸಹಕಾರದಿಂದ ಅರಣ್ಯ ಇಲಾಖೆಯ ವಾಹನದ ಮೂಲಕ ಪಿಜಿ ಪಾಳ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಂಬುಲೆನ್ ಮೂಲಕ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ.