- 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾನದಂಡ ನ್ಯಾಯವೇ?
ಸಾರಿಗೆ ನೌಕರರಿಗೆ ಸಮಾನ ವೇತನದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ಪ್ರಚಲಿತ ವಿದ್ಯಮಾನ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಸರಿಸಮಾನ ಎಂದರೆ ಏನು ಯಾರಿಗೆ ಸಮಾನ ಯಾವ ರೀತಿಯಲ್ಲಿ ಸಮಾನ, ಯಾರಿಗೆಲ್ಲ ಸಮಾನ ಎಂಬ ಜಿಜ್ಞಾಸೆಗೆ ಬೀಳುವುದು ಖಚಿತ.
ಸಾರಿಗೆ ನಿಗಮದಲ್ಲಿ ವೇತನ ವ್ಯವಸ್ಥೆ ಇತರೆ ಸಂಸ್ಥೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಒಂದು ಕಾಲದಲ್ಲಿ ಸಾರಿಗೆ ನೌಕರರ ವೇತನ ಸರ್ಕಾರಿ ಮತ್ತು ಇತರೆ ಸಂಸ್ಥೆಗಳಿಗಿಂತ ಹೆಚ್ಚಾಗಿಯೇ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ದಿನ ಕಳೆದಂತೆ ವೇತನ ಪರಿಷ್ಕರಣೆಯಲ್ಲಿನ ಅನ್ಯಾಯದಿಂದ ಸಾರಿಗೆ ನೌಕರರಿಗೆ ಕಡಿಮೆ ವೇತನ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.
ಆಗಿದ್ದರೆ ಸಾರಿಗೆ ನೌಕರರು ಎಡವಿದ್ದೆಲ್ಲಿ? ಅದನ್ನು ಪರಿಶೀಲಿಸಿದಾಗ ನಮಗೆ ಪ್ರಮುಖವಾಗಿ ಕಾಣುವುದು 2004 ಮತ್ತು 2008ರ ವೇತನ ಒಪ್ಪಂದ. ಈ ಅವಧಿಯಲ್ಲಿ ಕೆವಲ ಒಟ್ಟು ಶೇಕಡಾ 11ರಷ್ಟು ಮೂಲ ವೇತನ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಸರ್ಕಾರಿ ನೌಕರರ ವೇತನ ಸರಿಸುಮಾರು 27% ಹೆಚ್ಚಳವಾಗಿದೆ.
ವೇತನ ಹೆಚ್ಚಳದ ಜತೆಗೆ ತುಟ್ಟಿಭತ್ಯೆ ಮೂಲ ವೇತನಲ್ಲಿ ವಿಲೀನವಾದ ಕಾರಣಕ್ಕೆ ವೇತನ ಹೆಚ್ಚಳದಲ್ಲಿರುವ ಕಂದಕ ಬೆಳೆಯುತ್ತಾ ಹೋಗುತ್ತದೆ. ಇದರಿಂದ ಸರ್ಕಾರಿ ನೌಕರರಿಗಿಂತ ಹೆಚ್ಚಾಗಿ ಪಡೆಯುತ್ತಿದ್ದ ಸಾರಿಗೆ ನೌಕರರು ಅವರಿಗಿಂತ ಈಗ ಕಡಿಮೆ ಪಡೆಯುವಂತಾಗಿದೆ.
ಇದರ ಜತೆಗೆ ಈಗಿನ ಪ್ರಶ್ನೆ ಸಮಾನ ವೇತನ ಕುರಿತು ಚರ್ಚೆ ನಡೆಯುತ್ತಿದೆ. ಸಾರಿಗೆ ನಿಗಮದಲ್ಲಿ ವೇತನ ವ್ಯವಸ್ಥೆ 4 ಭಾಗಗಳಲ್ಲಿ ವಿಂಗಡಿಸಿರುವುದು ಕಾಣಬಹುದು. ಅವುಗಳ ಪೈಕಿ ಪ್ರಮುಖವಾಗಿ ಕಾಣುವುದು ದರ್ಜೆ 1 ಮತ್ತು ದರ್ಜೆ 2ರ ಅಧಿಕಾರಿಗಳು. ದರ್ಜೆ 3ರ ಮೆಲ್ವಿಚಾರಕ ವರ್ಗ. ದರ್ಜೆ 3ರ ಕಾರ್ಮಿಕ ವರ್ಗ (ಅಂದರೆ ಚಾಲನಾ ಸಿಬ್ಬಂದಿ, ತಾಂತ್ರಿಕ, ಇತರೆ ಸಿಬ್ಬಂದಿ) ಮತ್ತು ದರ್ಜೆ 4ರ ವರ್ಗ.
ಸರ್ಕಾರಿ ನೌಕರರ 6ನೇ ವೇತನ ವ್ಯವಸ್ಥೆಗೆ ಹೋಲಿಸಿದಾಗ ದರ್ಜೆ 1 ಮತ್ತು 2ರ ಅಧಿಕಾರಿ ವರ್ಗ ಸರ್ಕಾರಿ ನೌಕರರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚು ವೇತನ ಪಡೆಯುತ್ತಿದ್ದರು. ನಂತರದ ದರ್ಜೆ 3ರ ಮೇಲ್ವಿಚಾರಕ ವರ್ಗ ಸರ್ಕಾರಿ ನೌಕರರೊಡನೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದರು.
ಅದೇ ರೀತಿ ದರ್ಜೆ 3ರ ಕಾರ್ಮಿಕ ವರ್ಗ ಸರ್ಕಾರಿ ನೌಕರರಿಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಇನ್ನು 4ನೇ ದರ್ಜೆ ನೌಕರರ ಸ್ಥಿತಿ ಅಯೋಮಯ. ಸಮಾನ ವೇತನದ ಪ್ರಶ್ನೆ ಬಂದಾಗ ಅದಕ್ಕೆ ಏಕೈಕ ಮಾನದಂಡ ನೌಕರಿಗೆ ನಿಗದಿತ ವಿದ್ಯಾರ್ಹತೆ.
ತಾಂತ್ರಿಕ ಸಿಬ್ಬಂದಿಗಳಾದ ತಾಂತ್ರಿಕ ಸಹಾಯಕ ‘ಎ’ ಮತ್ತು ತಾಂತ್ರಿಕ ಸಹಾಯಕ ‘ಬಿ’ ಇವರಿಗೆ 10+2 ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಆದರೆ, ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಇನ್ನು ಸಹಾಯಕ ಕುಶಲಕರ್ಮಿಗಳ ವಿದ್ಯಾರ್ಹತೆ 10+3ಕ್ಕೆ ನಿಗದಿ ಮಾಡಲಾಗಿದೆ. ಇವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕೆ ಸರಿಸಮಾನ.
ಆದರೆ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವಿದ್ಯಾರ್ಹತೆ 10ನೇ ತರಗತಿ. ಆಗೆಯೇ ಅಟೆಂಡರ್ ಮತ್ತು ಭದ್ರತಾ ಸಿಬ್ಬಂದಿಗಳ ವಿದ್ಯಾರ್ಹತೆ 10ನೇ ತರಗತಿ. ಆದರೆ ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಆಗಿದ್ದರೆ ನಿಜವಾಗಿಯೂ ಅನ್ಯಾಯ ವಾಗಿರುವುದು ಯಾರಿಗೆ ಎಂಬುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಸಾರಿಗೆ ನಿಗಮದಲ್ಲಿ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರನ್ನು 3ನೇ ದರ್ಜೆ ಅಂದರೆ ‘ಸಿ’ ಗುಂಪಿನಲ್ಲಿ ಗುರುತಿಸಿದ್ದಾರೆ. ಅದೇ ಚಾಲಕ ವರ್ಗ ಸರ್ಕಾರದ ಇಲಾಖೆಗಳಲ್ಲಿ 4ನೇ ದರ್ಜೆ ಅಂದರೆ ‘ಡಿ’ಗ್ರೂಪ್ ನೌಕರ. ಸಮಾನ ವೇತನ ವ್ಯವಸ್ಥೆ ಬಂದರೆ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರನ್ನು ಯಾವ ಇಲ್ಲಿ 3ನೇ ದರ್ಜೆಯಲ್ಲೇ ಮುಂದುವರಿಸುತ್ತಾರೆಯೆ?
ಸಮಾನ ವೇತನ ಮೂಲಕ ತಮ್ಮ ಸಹೋದ್ಯೋಗಿಗಳಿಗೆ ಇದೇ ರೀತಿ 3ನೇ ದರ್ಜೆರಲ್ಲೇ ಮುಂದುವರಿಸುತ್ತ ನ್ಯಾಯ ಒದಗಿಸಲು ಸಾಧ್ಯವೆ? ಈ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರನ್ನು ಬಿಟ್ಟರೆ ಉಳಿದ ಎಲ್ಲರೂ ಅದೇ ವರ್ಗದಲ್ಲಿ ಮುಂದುವರಿಯುವರು. ಹೀಗಾಗಿ ಈ ಗೊಂದಲಗಳನ್ನು ನಿವಾಸಿಕೊಂಡರೆ, ಸರ್ಕಾರಿ ನೌಕರರಿ ಸರಿ ಸಮಾನ ವೇತನ ಪಡೆದರೆ ಇಲ್ಲಿ ಅಧಿಕಾರಿಗಳಿಗೂ ಅನ್ಯಾಯವಾಗುವುದಿಲ್ಲ, ನೌಕರರಿಗೂ ಅನ್ಯಾಯವಾಗಿವುದಿಲ್ಲ.
ಇದರ ಜತೆಗೆ 4ನೇ ದರ್ಜೆ ಅಂದರೆ ‘ಡಿ’ಗ್ರೂಪ್ ನೌಕರಿಗೆ ಇಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಸರ್ಕಾರಿ ನೌಕರರ 6ನೇ ವೇತನ ವ್ಯವಸ್ಥೆಗೆ ಹೋಲಿಸಿದಾಗ ದರ್ಜೆ 1 ಮತ್ತು 2ರ ಅಧಿಕಾರಿ ವರ್ಗ ಸರ್ಕಾರಿ ನೌಕರರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚು ವೇತನ ಪಡೆಯುತ್ತಿದ್ದರು. ಈಗ 7ನೇ ವೇತನ ಆಯೋಗ ಬಂದ ಮೇಲೆ ಸ್ವಲ್ಪ ಕಡಿಮೆ ಆಗಿದೆ. ಆದರೆ ಈ 2024ರ ಮತ್ತು 2028 ವೇತನ ಪರಿಷ್ಕರಣೆ ಆದರೆ ಮತ್ತೆ ದರ್ಜೆ 3ರ ಮೇಲ್ವಿಚಾರಕ ವರ್ಗ ಸರ್ಕಾರಿ ನೌಕರರೊಡನೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲೇ ವೇತನ ಪಡೆಯಲಿದ್ದಾರೆ.
ಅಂದರೆ ಈ 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ಯಾವ ನ್ಯಾಯ ಈ ಬಗ್ಗೆ ಎಲ್ಲ ಸಂಘಟನೆಗಳ ಮುಖಂಡರು ಅದರಲ್ಲೂ ಕಾರ್ಮಿಕ ಸಂಘಟನೆಗಳು ಎಂದು ಹೇಳಿಕೊಂಡು 600-800 ಮಂದಿ ಅಧಿಕಾರಿಗಳಿಗೆ ಲಾಭ ಮಾಡಿಕೊಳ್ಳಲು ನಿಂತಿರುವವರು ಯೋಚನೆ ಮಾಡಬೇಕು.
ಕಾರಣ ಇಲ್ಲಿ ಅಧಿಕಾರಿಗಳಿಗೆ ಲಾಭ ಕಾರ್ಮಿಕರಿಗೆ ನಷ್ಟ. ಈ ಅನ್ಯಾಯವನ್ನು ಸರಿದೂಗಿಸಿ ವೇತನ ಪರಿಷ್ಕರಣೆ ಮಾಡಿದರೆ ಅದು ಸರ್ಕಾರಿ ನೌಕರರಿಗಿಂತ ಹೆಚ್ಚಾಗುತ್ತದೆ ಎಂಬ ನಿಮ್ಮ ಹೇಳಿಕೆಯಂತೆಯೇ ಆದರೆ ಇನ್ನು ಒಳ್ಳೆಯದು ಅದನ್ನು ಬಿಟ್ಟು ಗೊಂದಲ ಸೃಷ್ಟಿಸಿ ಅಧಿಕಾರಿಗಳ ಪರ ಪರೋಕ್ಷವಾಗಿ ಬ್ಯಾಟ್ ಬೀಸುವುದು ತರವೇ?
ಒಟ್ಟಾರೆ ಈ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳಕ್ಕಾಗಿ ಬರಿ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ಹೋರಾಟಕ್ಕೆ ಇಳಿದು ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಿ ಸೇವೆಯಿಂದ ವಜಾ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ಎದುರಿಸುವ ಈ ವೇತನ ಪರಿಷ್ಕರಣೆಗಿಂತ ಎಲ್ಲರಿಗೂ ಆದಂತೆ ನಮಗೂ ಆಗಲಿ ಎಂಬ ನಿಟ್ಟಿನಲ್ಲಿ ಸಮಾನ ವೇತನಕ್ಕೆ ಬೇಡಿಕೆ ಇಟ್ಟಿರುವುದು ಸರಿಯಾಗಿದೆ ಎಂಬುವುದು ಬಹುತೇಕ ನೌಕರರ ದೃಢ ಹೇಳಿಕೆಯಾಗಿದೆ.