NEWSನಮ್ಮಜಿಲ್ಲೆನಮ್ಮರಾಜ್ಯ

ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ಹಿನ್ನೆಲೆ ಸಂಜೆ ನಿರ್ದೇಶಕರ ಮಂಡಳಿ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇಂದು ಸಂಜೆ 4 ಗಂಟೆಗೆ ನಿರ್ದೇಶಕರ ಮಂಡಳಿ ಸಭೆ ಕರೆದಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಯಲಿದ್ದು, ಒಟ್ಟು 14 ಸದಸ್ಯರನ್ನೊಳಗೊಂಡ BMRCL ನಿರ್ದೇಶಕರ ಮಂಡಳಿ ಸಭೆಯಲ್ಲಿ ಭಾಗವಹಿಸಲಿದೆ.

ಮೆಟ್ರೋ ಪ್ರಯಾಣಿಕರಿಗೆ ನೇರವಾಗಿ ಪರಿಣಾಮ ಬೀರುವ ದರ ಏರಿಕೆ ವಿಚಾರವೇ ಇಂದು ನಡೆಯಲಿರುವ ಸಭೆಯ ಪ್ರಮುಖ ಅಜೆಂಡಾ ಆಗಿರಲಿದೆ. ಇತ್ತೀಚೆಗೆ ದರ ಏರಿಕೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಈ ಹಿನ್ನೆಲೆ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಇನ್ನು ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆಗೆ ಕೇಂದ್ರ ಸರ್ಕಾರದ ಪರವಾಗಿ ಚೇರ್ಮನ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಪರವಾಗಿ BMRCL ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡಂತೆ ಐವರು ಅಧಿಕಾರಿಗಳು ಹಾಗೂ BMRCLನ ನಾಲ್ವರು ನಿರ್ದೇಶಕರು ಹಾಜರಾಗಲಿದ್ದಾರೆ. ಜತೆಗೆ ಕೇಂದ್ರ ಸರ್ಕಾರದ ಕೆಲ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ನಿರ್ದೇಶಕರ ಮಂಡಳಿಯ ಈ ಸಭೆಯಲ್ಲಿ ದರ ನಿಗದಿ ಸಮಿತಿಯೂ ಭಾಗವಹಿಸುವ ಸಾಧ್ಯತೆ ಇದೆ. ದರ ಏರಿಕೆಯ ಮುಂದುವರಿಸಬೇಕೇ ಇಲ್ಲ ತಿದ್ದುಪಡಿ ಮಾಡಬೇಕೇ ಅಥವಾ ಸಂಪೂರ್ಣವಾಗಿ ಹಿಂಪಡೆಯಬೇಕೇ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಭೆ ಮುಗಿದ ಬಳಿಕ ಮೆಟ್ರೋ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಿದ್ದು, ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಸಭೆಯ ಫಲಿತಾಂಶದತ್ತ ಕಾದು ನೋಡುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ BMTC-KSRTC: ನಾಳೆ EPS ಪಿಂಚಣಿದಾರರ ಕನಿಷ್ಠ ಪಿಂಚಣಿ ₹7,500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ... KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ