NEWSನಮ್ಮಜಿಲ್ಲೆನಮ್ಮರಾಜ್ಯ

ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿದೆ. ಗ್ಯಾಸ್ ಬುಕ್ ಮಾಡಿದರೂ ಹಲವು ದಿನಗಳವರೆಗೆ ಜನರಿಗೆ ಸಿಲಿಂಡರ್ ಸಿಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳ ಸಂತೆಯಲ್ಲಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿರುವುದೆ. ಈ ಮಧ್ಯೆ ನಿಮ್ಮ ಮನೆಬಾಗಿಲಿಗೆ ಗ್ಯಾಸ್ ಹೊತ್ತು ತರುವ ಡೆಲಿವರಿ ಬಾಯ್‌ಗೆ ಒಂದು ಸಿಲಿಂಡ‌ರ್ ಮೇಲೆ ಎಷ್ಟು ರೂಪಾಯಿ ಸಿಗುತ್ತದೆ ಎಂಬ ಈ ಪ್ರಶ್ನೆಯೂ ನಿಮ್ಮ ತಲೆಹೊಕ್ಕಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿಗೆ ಸಿಗುವ ಕಮಿಷನ್ ಎಷ್ಟು?: ಮೊದಲಿಗೆ ಗ್ಯಾಸ್ ವಿತರಿಸುವ ಡಿಸ್ಟ್ರಿಬ್ಯೂಟರ್ ಕಂಪನಿಗೆ/ ವಿತರಕರಿಗೆ ಒಂದು ಸಿಲಿಂಡರ್ ಮೇಲೆ ಎಷ್ಟು ಲಾಭ ಸಿಗುತ್ತದೆ ಎಂದು ನೋಡುವುದಾದರೆ, ಮನೆಬಳಕೆಯ 14.2 ಕೆಜಿ ಸಿಲಿಂಡರ್ ಅನ್ನು ಹೋಮ್ ಡೆಲಿವರಿ ನೀಡಿದಾಗ ಡಿಸ್ಟ್ರಿಬ್ಯೂಟರ್ ಕಂಪನಿಗೆ 80 ರಿಂದ 88 ರೂಪಾಯಿ ಸಿಗುತ್ತದೆ. ಗೋದಾಮಿನ ನಿರ್ವಹಣೆ ಮತ್ತು ವಿತರಣಾ ವೆಚ್ಚವಾಗಿ ಈ ಮೊತ್ತವನ್ನು ಕಂಪನಿಗೆ ನೀಡಲಾಗುತ್ತದೆ. ಇನ್ನು ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ (Commercial) ಸಿಲಿಂಡರ್ ವಿತರಣೆ ಮಾಡಿದರೆ ಡಿಸ್ಟ್ರಿಬ್ಯೂಟರ್‌ಗೆ 100 ರೂಪಾಯಿ ಕಮಿಷನ್ ಸಿಗುತ್ತದೆ.

ಗ್ಯಾಸ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು?: ಗ್ಯಾಸ್ ಸಿಲಿಂಡ‌ರ್ ತಲುಪಿಸುವ ವ್ಯಕ್ತಿಗೆ ಪ್ರತಿ ಸಿಲಿಂಡರ್ ಮೇಲೆ 20 ರಿಂದ 25 ರೂಪಾಯಿ ಕಮಿಷನ್ ಸಿಗುತ್ತದೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ ಸರಾಸರಿ 30 ಸಿಲಿಂಡ‌ರ್ ವಿತರಿಸಿದರೆ, ಆತನಿಗೆ ದಿನಕ್ಕೆ ಸುಮಾರು 600 ರಿಂದ 750 ರೂಪಾಯಿ ಆದಾಯ ಬರುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಆಗ ದಿನವೊಂದಕ್ಕೆ 50 ಸಿಲಿಂಡರ್ ತಲುಪಿಸಿದರೆ, ದಿನದ ಸಂಪಾದನೆ 1,000 ದಿಂದ 1,250 ರೂಪಾಯಿ ತಲುವುತ್ತದೆ. ಅಂದರೆ ಒಬ್ಬ ಡೆಲಿವರಿ ಬಾಯ್ ತಿಂಗಳಿಗೆ ಸರಾಸರಿ 15,600 ರಿಂದ 19,500 ರೂಪಾಯಿ ಹಣವನ್ನು ಮನೆಮನೆಗೆ ಸಿಲಿಂಡರ್ ನೀಡಿಯೇ ಗಳಿಸಬಹುದು.

32 ಸಾವಿರದಿಂದ 65 ಸಾವಿರ ರೂ. ಕೂಡ ಗಳಿಸುವ ಸಾಧ್ಯತೆ ಇದೆ: ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ವಿತರಣೆ ಹೆಚ್ಚಾದಂತೆ ಅವರ ಆದಾಯ 32,000 ರೂಪಾಯಿ ವರೆಗೂ ಏರುತ್ತದೆ. ಇನ್ನು ಬೇಡಿಕೆ ವಿಪರೀತವಾಗಿದ್ದಾಗ ಕೆಲವು ಡೆಲಿವರಿ ಬಾಯ್‌ಗಳು ದಿನಕ್ಕೆ 100 ಸಿಲಿಂಡರ್‌ಗಳನ್ನು ಕೂಡ ತಲುಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ದೈನಂದಿನ ಆದಾಯ 2500 ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಅವರು ತಿಂಗಳಿಗೆ ಗರಿಷ್ಠ 65,000 ರೂಪಾಯಿ ವರೆಗೂ ಸಂಪಾದನೆ ಮಾಡುವ ಸಾಧ್ಯತೆ ಇದೆ.

Megha
the authorMegha

Leave a Reply

error: Content is protected !!
Latest news
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿ- 6 ತಿಂಗಳ ಡೆಡ್‌ಲೈನ್ ಇಟ್ಟ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ವಿವಾದ: ಡಿಕೆಶಿ-ಎಚ್‌ಡಿಕೆ ನಡುವೆ ಮುಂದುವರಿದ ಸಮರ ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 588ಕ್ಕೆ ಏರಿಕೆ, 126 ವರ್ಷಗಳಲ್ಲೇ ಅತ್ಯಂತ ಭೀಕರ ಸಾವು ನೋವು ​ಮೆಟ್ರೋ ಪಿಲ್ಲರ್‌ಗೆ ಬೆಳಕಿನ ವ್ಯವಸ್ಥೆ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಗುತ್ತಿಗೆ ಕಾರ್ಮಿಕ ಮೃತ ಬೀಜಿಂಗ್ ಗಗನಚುಂಬಿ ಕಟ್ಟಡಕ್ಕೆ ಅಪ್ಪಳಿಸಿದ ಲಘು ವಿಮಾನ: ತುಂಡುಗಳಾಗಿ ಬಿದ್ದ ವಿಮಾನ- ಭೀಕರ ದುರಂತದ ವಿಡಿಯೋ ವೈರಲ್ ಪ್ರಾಮಾಣಿಕತೆಗೆ ಅಂಬಾಸೆಡರ್‌ ಈ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ: ರಾಜಾಜಿನಗರ ಶಾಸಕ ಸುರೇಶ್‌ ಕುಮಾರ್‌ ಶ್ಲಾಘನೆ KSRTC ಬಸ್‌ ಲಾರಿಗೆ ಡಿಕ್ಕಿ: ಸಂಸ್ಥೆಯ ಚಾಲಕ ಸಾವು, ಕಂಡಕ್ಟರ್‌ ಕಾಲು ಮುರಿತ, 10 ಮಂದಿ ಪ್ರಯಾಣಿಕರಿಗೆ ಗಾಯ: 18 ಗಂಟೆ... ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: 'ಪರಮ್ ವಿಹಾರ' ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ ಗೃಹಲಕ್ಷ್ಮಿ ಯೋಜನೆಯಲ್ಲಿ  ಯಾವುದೇ ಗೋಲ್‌ಮಾಲ್ ಆಗಿಲ್ಲ:  ಡೇಟಾ ಸಹಿತ ಮಹಿಳಾ ಇಲಾಖೆ  ಸ್ಪಷ್ಟನೆ  ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಅನುಚೇತ್ ಅಧಿಕಾರ ಸ್ವೀಕಾರ