NEWSನಮ್ಮಜಿಲ್ಲೆಲೇಖನಗಳು

ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ!

ವಿಜಯಪಥ ಸಮಗ್ರ ಸುದ್ದಿ

ಬೀದಿಯಲ್ಲಿ ನಿಂತು ನಮ್ಮೆಲ್ಲರ ಹಕ್ಕಿಗಾಗಿ, ಸಾರಿಗೆ ಸಂಸ್ಥೆಯ ಉಳಿವಿಗಾಗಿ ಒಬ್ಬ ನಾಯಕ ಗುಡುಗುತ್ತಿರುವಾಗ, ಹಗಲು-ರಾತ್ರಿ ಎನ್ನದೆ ಸಂಕೋಲೆಗಳನ್ನು ಕಡಿದು ಹಾಕಲು ಹೋರಾಡುತ್ತಿರುವಾಗ… ಬದಿಯಲ್ಲಿ ನಿಂತು ತಮಾಷೆ ನೋಡುತ್ತಾ, ಕರ್ತವ್ಯದ ನೆಪದಲ್ಲಿ ಪಲಾಯನ ಮಾಡುತ್ತಿರುವ ನೀವು ನಿಜಕ್ಕೂ ಬದುಕಿದ್ದೀರಾ?

ಅನ್ಯಾಯದ ವಿರುದ್ಧ ಹೋರಾಡುವ ಸಹೋದ್ಯೋಗಿಯ ಜತೆ ನಿಲ್ಲದ ನೀವು, ಕೇವಲ ಸಮವಸ್ತ್ರ ಧರಿಸಿದ ‘ಜೀವಂತ ಶವಗಳು’.

ಕೆಲವೇ ಕೆಲವು ವೀರ ನೌಕರರು ವ್ಯವಸ್ಥೆಯ ಅನ್ಯಾಯದ ವಿರುದ್ಧ ಎದೆಯೊಡ್ಡಿ ನಿಂತಾಗ, ಅವರಿಗೆ ಹೆಗಲು ಕೊಡಬೇಕಾದ ಸಾವಿರಾರು ನೌಕರರು ಬೆನ್ನು ತೋರಿಸಿ ಓಡುತ್ತಿರುವುದು ಈ ಕಾಲದ ದೊಡ್ಡ ದುರಂತ.

ನೆನಪಿಡಿ-​”ಹೋರಾಟಗಾರ ಸೋತರೆ ಕೇವಲ ಒಬ್ಬ ವ್ಯಕ್ತಿ ಸೋಲಲ್ಲ, ಇಡೀ ಸಾರಿಗೆ ನೌಕರರ ಸಂಕುಲದ ಭವಿಷ್ಯವೇ ಸಮಾಧಿಯಾಗುತ್ತದೆ.”

ಹೋರಾಟಗಾರರು ಬೀದಿಗೆ ಇಳಿದಿರುವುದು ಅವರ ವೈಯಕ್ತಿಕ ಲಾಭಕ್ಕಲ್ಲ, ನಿಮ್ಮ ಮನೆಯ ಮಕ್ಕಳ ಜ್ಞಾನದ, ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮತ್ತು ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ.

ನಾವು ಸಂಸ್ಥೆಯ ಸರ್ವಾಧಿಕಾರಿಗಳು ಎಂಬಂತೆ ಕೆಲ ಅಧಿಕಾರಿಗಳು ನಮಗೂ ವೇತನ ತಾರತಮ್ಯವುದೆ ಅದನ್ನು ಸರಿಪರಿಸುವುದಕ್ಕೆ ನಾವು ಮುಂದಾಗಬೇಕು ಎಂಬ ಅರಿವಿಲ್ಲದೆ ಅಜ್ಞಾನಿಗಳಂತೆ ತೋರಿಸುವ ದಬ್ಬಾಳಿಕೆ ಮತ್ತು ಅಹಂಕಾರದ ಮುಂದೆ ತಲೆಬಾಗಿ ನಡೆಯುವುದು ಬದುಕಲ್ಲ, ಅದು ಬಣ್ಣ ಹಚ್ಚಿದ ಗುಲಾಮಗಿರಿ.

ಇಂದು ಒಬ್ಬ ಹೋರಾಟಗಾರನನ್ನು ಏಕಾಂಗಿಯನ್ನಾಗಿ ಮಾಡಿದರೆ, ನಾಳೆ ನಿಮ್ಮ ಮೇಲೆ ಅನ್ಯಾಯದ ತೂಗುಗತ್ತಿ ಬಂದಾಗ ನಿಮಗಾಗಿ ಧ್ವನಿ ಎತ್ತಲು ಯಾರೂ ಇರುವುದಿಲ್ಲ. ಹೀಗಾಗಿ….!

ಸಾರಿಗೆ ಬಂಧುಗಳೇ… ಎದ್ದೇಳಿ!:
​ಕೈಕಟ್ಟಿ ನಿಂತು ನೋಡುವ ‘ಹೇಡಿ’ಗಳಾಗಬೇಡಿ. ಅಧಿಕಾರದ ಮದವೇರಿದ ವ್ಯವಸ್ಥೆಗೆ ನಿಮ್ಮ ಸಂಘಟಿತ ಶಕ್ತಿಯ ದರ್ಶನ ತೋರಿಸಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಮ್ಮ ಸಹೋದರನಿಗೆ ಸಾವಿರ ಕೈಗಳ ಬಲ ತುಂಬಿ. ಪಲಾಯನ ಮಾಡುವುದು ಹೇಡಿಗಳ ಲಕ್ಷಣ, ಎದುರಿಸಿ ನಿಲ್ಲುವುದು ಸ್ವಾಭಿಮಾನಿ ನೌಕರನ ಲಕ್ಷಣ!
​ಹೋರಾಟಕ್ಕೆ ಸಾಥ್ ನೀಡದ ನೌಕರನನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.
​ಎದ್ದೇಳಿ! ಗುಡುಗಿ! ಒಂದಾಗಿ! ನಮ್ಮ ಹಕ್ಕು – ನಮ್ಮ ಹೋರಾಟ! ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ ! KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ... KSRTC: ಬ್ರೇಕ್ ಫೇಲಾಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್‌- ತಪ್ಪಿದ ಭಾರಿ ಅನಾಹುತ ನಾಗಮಲೆ ಬಳಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ₹20 ಲಕ್ಷ ಪರಿಹಾರ KKRTC ದ್ವಂದ್ವ ನಿಲುವಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ- 25 ಸಾವಿರ ರೂ. ದಂಡ, ಅಧಿಕಾರಿಗಳಿಂದಲೇ ವಸೂಲಿಗೆ ಆದೇಶ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ ನಾಯಕ ದಳಪತಿ ವಿಜಯ್ ಅತೀ ಶೀಘ್ರದಲ್ಲೇ KSRTC ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ! ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ನಿಧನ NWKRTC: ಮೇ 11ರಂದು ಹಾಲಿ ನೌಕರರಿಗೆ, ಮೇ 15ರಂದು ನಿವೃತ್ತರಿಗೆ ಮೇ18ರಂದು ವರ್ಗಾವಣೆಗೊಂಡ ನೌಕರರಿಗೆ 11 ತಿಂಗಳುಗಳ ವೇ...