NEWSನಮ್ಮಜಿಲ್ಲೆನಮ್ಮರಾಜ್ಯ

ವಜಾಗೊಂಡ ನೌಕರರ ಪರ ಮಾಜಿ ಐಪಿಎಸ್‌ ಅಧಿಕಾರಿ, ನುರಿತ ವಕೀಲರ ತಂಡ ಸಜ್ಜು: ಕಾನೂನು ಗಾಳಿಗೆ ತೂರಿರುವ ಬಿಎಂಟಿಸಿ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್‌ಗೆ ಸಿದ್ಧತೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಅದರಲ್ಲೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಳೆದ 2020ರ ಏಪ್ರಿಲ್‌ 7ರಿಂದ 14ದಿನಗಳು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವೇ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿ ನಡೆಸಿದ ಮುಷ್ಕರದ ವೇಳೆ ವಜಾಗೊಳಿಸಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂಬ ಸಂಬಂಧ ಇದು ಮಹತ್ವ ಚರ್ಚೆ ನಡೆಯಿತು.

ಕರ್ನಾಟಕ ರಾಜ್ಯ ರಸ್ತೆ ನೌಕರರ ಸಂಘ ಇಂದು (ನ.2) ನಗರದಲ್ಲಿ ಆಯೋಜಿಸಿದ್ದ ಕಾನೂನು ಹೋರಾಟದ ಮೂಲಕ ನೌಕರರ ಮರು ನೇಮಕ ಮಾಡಿಕೊಳ್ಳುವುದಕ್ಕೆ ಹೈ ಕೋರ್ಟ್‌ ವಕೀಲರ ಸಲಹೆ ಮತ್ತು ಪರಿಹಾರ ಕುರಿತ ಚರ್ಚೆಯ ಸಭೆಯಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮಾತನಾಡಿದರು.

2020ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಕಾನೂನ ಬಾಹಿರವಾಗಿ ನೌಕರರನ್ನು ವಜಾ ಮಾಡುವುದಕ್ಕೆ ಕಾರಣರಾಗಿದ್ದರೋ ಅಂತಹ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ನಾವು ಕೂಡ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುವ ಅವಕಾಶ ಇದೆ. ಹೀಗಾಗಿ ನೌಕರರು ಮಾಡದ ತಪ್ಪಿಗೆ ಏನು ವಜಾದಂತಹ ಶಿಕ್ಷೆ ಅನುಭವಿಸುತ್ತಿದ್ದಾರೋ ಆ ಶಿಕ್ಷೆಯನ್ನು ಅಧಿಕಾರಿಗಳು ಅನುಭವಿಸಬೇಕು ಎಂದು ಹೇಳಿದರು.

ಇನ್ನು ನೌಕರರ ವಿರುದ್ಧ ಆರೋಪ ಮಾಡಿರುವ ಅಧಿಕಾರಿಗಳು ಮತ್ತು ವಜಾ ಮಾಡಿರುವ ಅಧಿಕಾರಿಗಳ ವಿರುದ್ಧ ಇಂದಿನಿಂದಲೇ ಕಾನೂನು ಹೋರಾಟ ಮಾಡೋಣ ಇದಕ್ಕೆ ಎಲ್ಲ ನೌಕರರು ಒಪ್ಪಿಗೆ ಸೂಚಿಸುತ್ತೀರಾ ಎಂದು ಸಭೆಯಲ್ಲಿ ನೆರೆದಿದ್ದ ನೌಕರರನ್ನು ಕೇಳಿದರು ಅದಕ್ಕೆ ಎಲ್ಲ ನೌಕರರು ಸಹಮತ ವ್ಯಕ್ತಪಡಿಸಿದರು.

ಇದಿಷ್ಟೇ ಅಲ್ಲದೆ ಈಗಾಗಲೇ ಏನು ಕಾರ್ಮಿಕ ನ್ಯಾಯಾಲಯದಲ್ಲಿ ವಜಾಗೊಳಿಸಿರುವುದರ ವಿರುದ್ಧ ದಾವೆ ಹೂಡಿದ್ದೇವು ಅದು ಕೂಡ ನಡೆಯುತ್ತಿದೆ. ಹೀಗಾಗಿ ಇದರಲ್ಲೂ ನಾವು ಭಯಪಡುವ ಅಗತ್ಯವಿಲ್ಲ ಎಂದು ವಕೀಲರಾದ ಕಾಂತರಾಜು ಅವರು ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ನೌಕರರ ಗಮನಕ್ಕೆ ಸಭೆಯಲ್ಲೇ ತಂದರು.

ಇನ್ನು ಮುಂದಿನ ದಿನಗಳಲ್ಲಿ ನೌಕರರ ವಿರುದ್ಧ ಈಗಾಗಲೇ ಏನು ಎಫ್‌ಐಆರ್‌ ಮತ್ತು ಚಾರ್ಜ್‌ಶೀಟ್‌ ದಾಖಲಿಸಿದ್ದಾರೋ ಆ ಬಗ್ಗೆ ಹೈ ಕೋರ್ಟ್‌ ವಕೀಲ ಪುಟ್ಟರಾಜು ಮಾತನಾಡಿ, ನಾವು ಈ ಬಗ್ಗೆ ಈಗಾಗಲೇ ಗಮನ ನೀಡಿದ್ದು, ನೌಕರರು ಮತ್ತು ಅವರ ಕುಟುಂಬದವರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಂದೇ ಬಾರಿಗೆ ರದ್ದು (Quash) ಮಾಡಿಸುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಹೀಗಾಗಿ ಯಾವ ನೌಕರರು ಧೃತಿಗೆಡಬೇಡಿ ಎಂದು ಹೇಳಿದರು.

ಇದೇ ನವೆಂಬರ್‌ 4ರಂದು ಕೋರ್ಟ್‌ನಲ್ಲಿ ಈಗಾಗಲೇ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಯಲಿದ್ದು, ಆ ಬಳಿಕ ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಯಲ್ಲಿ ಹೈ ಕೋರ್ಟ್‌ ಹಿರಿಯ ವಕೀಲ ಚಂದ್ರಮೌಳಿ ಅವರು ಭಾಗವಹಿಸಲಿದ್ದು ಅವರು ಕೂಡ ಅಧಿಕಾರಿಗಳ ಕಾನೂನುಬಾಹಿರ ಕ್ರಮದಿಂದ ವಜಾಗೊಂಡಿರುವ ನೌಕರರ ಪರ ವಕಾಲತು ವಹಿಸಲಿದ್ದಾರೆ ಎಂದು ತಿಳಿಸಿದರು.

ಇನ್ನು ಜಂಟಿ ಮೆಮೋ ಬಗ್ಗೆಯೂ ಕೋರ್ಟ್‌ ಮೊರೆಹೋಗುವ ಮೂಲಕ ನೊಂದ ನೌಕರರಿಗೆ ನ್ಯಾಯಕೊಡಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ವಜಾಗೊಂಡಿರುವ ಎಲ್ಲ ನೌಕರರಿಗೂ ವೇತನ ನೀಡುವ ಮೂಲಕ ಮರು ನೇಮಕ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಸೇರಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಮಾದರಿ ಅನುಸರಿಸಬೇಕು ಎಂಬ ಬಗ್ಗೆ ಕಾನೂನು ಹೋರಾಟ ಮಾಡುವ ಕುರಿತು ಚರ್ಚೆ ನಡೆಸಲಾಯಿತು.

ಈ ವೇಳೆ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ ಎಂದು ಎಲ್ಲ ನೌಕರರು ಒಕ್ಕೊರಲಿನಿಂದ ತಿಳಿಸಿದರು. ಈ ಮೂಲಕ ಮುಂದಿನ ದಿನಗಳಲ್ಲಿ ನೌಕರರ ವಿರುದ್ಧ ಸುಖಸುಮ್ಮನೆ ಆರೋಪ ಮಾಡಿ ವಜಾಗೊಳಿಸಲು ಕಾರಣರಾಗಿರುವ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಲು ನೌಕರರ ಸಂಘ ಅಣಿಯಾಗಿದೆ.

ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಡಿ.ರಾಮು, ಖಜಂಜಿ ಯೋಗೇಶ್, ಉಪಾಧ್ಯಕ್ಷ ಸುಧಾಕರೆಡ್ಡಿ, ಪ್ರಚಾರ ಸಮಿತಿ ವಕ್ತಾರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಸಮಾಚಾರ ವಿನಯ್, ಲಕ್ಷ್ಮಣ್, ಶ್ರೀನಿವಾಸ್ ಸೇರಿದಂತೆ ಹಲವು ನೌಕರರು ಇದ್ದರು.

Leave a Reply

error: Content is protected !!
LATEST
KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ”