Vijayapatha – ವಿಜಯಪಥ
Friday, November 1, 2024
NEWSಕೃಷಿನಮ್ಮರಾಜ್ಯ

5ನೇ ದಿನಕ್ಕೆ ರೈತರ ಧರಣಿ : ಕಬ್ಬಿನ ಬೆಲೆ ನಿಗದಿಗಾಗಿ ಆದಿವಾಸಿಗಳ ವೇಷ ಧರಿಸಿ ಪ್ರತಿಭಟನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರ ರೈತರು ನಾವು ಕಾಡು ಮನುಷ್ಯರಲ್ಲ ನ್ಯಾಯ ಕೊಡಿ ಎಂದು ವಿಭಿನ್ನವಾಗಿ ಶುಕ್ರವಾರ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ರೈತರ ಧರಣಿ ಐದನೇ ದಿನಕ್ಕೆ ಕಾಲಿಟ್ಟುದ್ದು, ಈ ವೇಳೆ ಕಬ್ಬಿನ ಎಫ್ ಆರ್ ಪಿ ಪುನರ್ ಪರಿಶೀಲನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರ ರೈತರು ಕಾಡು ಜನರ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆಗಟ್ಟಿದರು ಈ ವೇಳೆ ಮಾತಿನ ಚಕಮಕಿ ನಡೆಯಿತು.

ನಾವು ಜಿಲ್ಲಾಧಿಕಾರಿಯ ಕಚೇರಿ ಒಳಗೆ ಹೋಗುತ್ತಿರುವುದು ನೀವು ನಮ್ಮನ್ನು ಏಕೆ ತಡೆಯುತ್ತಿದ್ದೀರಿ ಕಾಡು ಜನರಂತೆ ವರ್ತಿಸುತ್ತಿರುವವರನ್ನು ನಮ್ಮ ಸಮಸ್ಯೆಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಲು ಹೋಗುತ್ತಿರುವುದಾಗಿ ತಿಳಿಸಿದಾಗ ಪೊಲೀಸರು ಜಿಲ್ಲಾಧಿಕಾರಿಯವರು ಕಚೇರಿಯಲ್ಲಿ ಇಲ್ಲ ಬೇರೊಂದು ಸಭೆಯಲ್ಲಿ ಹೋಗಿರುತ್ತಾರೆ ಬಂದ ತಕ್ಷಣ ನಿಮ್ಮ ಧರಣಿ ನಿರತ ಸ್ಥಳಕ್ಕೆ ಕರೆ ತರುವುದಾಗಿ ಮನವೊಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಐದು ದಿನಗಳಿಂದ ವಿಭಿನ್ನ ರೀತಿಯ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳ ಮಾಹಿತಿಗೆ ಸೊಪ್ಪು ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ರೈತರ ಸ್ವಾಭಿಮಾನವನ್ನು ಕೆರಳುಸುತ್ತಿದ್ದಾರೆ.

ರಾಜ್ಯದಲ್ಲಿ ಟನ್ ಕಬ್ಬಿಗೆ ಎಫ್ ಆರ್ ಪಿ ದರ 3050 ರೂ.ಗೆ ನಿಗದಿಗೊಳಿಸಲಾಗಿದೆ. ಆದರೆ ಇತರೆ ರಾಜ್ಯಗಳು 3500 ರಿಂದ 3800 ರೂ.ಗೂ ಹೆಚ್ಚು ದರ ನೀಡುತ್ತಿರುವಾಗ ರಾಜ್ಯ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ ಎಂದು ಪ್ರತಿಭಟನಾ ನಿರತ ರೈತರು ಕಿಡಿಕಾರಿದರು.

ಕಡಿಮೆ ದರ ನಿಗದಿಯಿಂದ ರಾಜ್ಯದ 30 ಲಕ್ಷಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಅತಂತ್ರರಾಗಿದ್ದಾರೆ 40,000 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಕಬ್ಬು ಬೆಳೆಗಾರರಿಗಿಂತ ಸಕ್ಕರೆ ಕಾರ್ಖಾನೆಗಳ ಹಿತವೇ ಬಿಜೆಪಿ ಸರ್ಕಾರಕ್ಕೆ ಮುಖ್ಯವಾಗಿದೆ.

ಸಕ್ಕರೆ ಕಾರ್ಖಾನೆಗಳು ತೂಕ ಇಳುವರಿಯಲ್ಲಿ ಮೋಸ ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಮೋಸ ಇದೆಲ್ಲಾ ವಂಚನೆಗಳನ್ನು ತಪ್ಪಿಸಲು ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶಗಳನ್ನು ಕಾರ್ಖಾನೆಗಳು ಉಲ್ಲಂಘನೆ ಮಾಡುತ್ತಿದ್ದರೂ ಜಿಲ್ಲಾಧಿಕಾರಿ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಅಧಿಕಾರವಿದ್ದರೂ ಏಕೆ ಕ್ರಮವಹಿಸಿಲ್ಲ. ಜಿಲ್ಲಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದ ಯಾರದನ್ನು ಮೆಚ್ಚಿಸಲು ಎಂದು ಪ್ರತಿಭಟನಾಕಾರರು ಆಕೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಸಂಚಾಲಕ ಕೆಆರ್ಎಸ್ ರಾಮೇಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಕಾಟೂರು ಮಹದೇವಸ್ವಾಮಿ, ಚುಂಚುರಾಯನಹುಂಡಿ ಮಂಜು.

ನಂಜುಂಡಸ್ವಾಮಿ, ಸಿದ್ದರಾಮ, ಬಸವರಾಜಪ್ಪ, ವರಕೂಡು ನಾಗೇಶ್, ತೆರಣಿಮುಂಟಿ ಸುರೇಶ್ ಶೆಟ್ಟಿ, ಸಾತಗಳ್ಳಿ ಬಸವರಾಜ್, ಪಿ ರಾಜು, ವಾಜಮಂಗಲ ಮಹದೇವು, ಸಾಕಮ್ಮ ಮಹಾ ಲಿಂಗನಾಯಕ ಸ್ವಾಮಿ,ರಾಜು, ಮಹಾದೇವಪ್ಪ ಹೊಸವಳಲು ರಮೇಶ್, ಬೈರೇಗೌಡ, ಷಡಕ್ಷರಿ, ಹೆಗ್ಗೂರು ರಂಗರಾಜು, ಶಿವರಾಮು, ಸಿ ಜವರಪ್ಪ, ನಾಗರಾಜು ಮುಂತಾದವರು ಇದ್ದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ