NEWSVideosನಮ್ಮಜಿಲ್ಲೆನಮ್ಮರಾಜ್ಯ

ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ:  ಇಂದು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ 18 ಕಿಲೋ ಮೀಟರ್‌ ಕ್ರಮಿಸುವ ಮೂಲಕ ಮೊದಲ ದಿನ ಭಾರಿ ಯಶಸ್ವಿಗೊಂಡಿದೆ.

ಸದ್ಯ ಈ ರಾತ್ರಿ ಬುರುಜನರೊಪ್ಪ ಗ್ರಾಮದ ಶ್ರೀ ರಕ್ಷಾ ಗಣಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದು ನಾಳೆ ಬೆಳಗ್ಗೆ 6 ಗಂಟೆಗೆ ಎರಡನೇ ದಿನದ ಜಾಥಾ ಆರಂಭವಾಗಲಿದೆ.

ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಜಟಾಪಟಿ ಗೋಜು ಗೊಂದಲಗಳಿಗೆ ಮುಕ್ತಿಯಾಡಬೇಕು. ಅಲ್ಲದೆ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ.

ಇಂದು ಜಾಥಾ ಯಶಸ್ವಿಯಾಗಿದ್ದು, ಭಾರಿ ನೌಕರರು ಸೇರಿಲ್ಲ ಎಂಬುವುದು ಬಿಟ್ಟರೆ ಯಾವುದೇ ಗೊಂದಲವಿಲ್ಲದೆ ಇಂದಿನ ಪಾದಯಾತ್ರೆ ಪೂರ್ಣಗೊಂಡಿದೆ. ಇನ್ನು ನಾಳೆ ಬೆಳಗ್ಗೆ 6ಗಂಟೆಗೆ  ಎರಡನೆ ದಿನದ ಪಾದಯಾತ್ರೆ ಮುಂದುವರಿಯಲಿದ್ದು, ಎಲ್ಲ ನೌಕರರು ಸಾಥ್‌ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 

Megha
the authorMegha

Leave a Reply

error: Content is protected !!
Latest news
ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ ಚಿತ್ರದುರ್ಗ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾರಿಗೆ ನೌಕರರ ಪಾದಯಾತ್ರೆ ಆರಂಭ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ ನಾಪತ್ತೆ KSRTC ನೌಕರರ ವಿರುದ್ಧ ನಿಯಮ 23 ರಡಿಯಲ್ಲಿ ದಾಖಲಾದ ಪ್ರಕರಣಗಳ ನಿಯಮ-22ಕ್ಕೆ ಮಾರ್ಪಡಿಸಿ: ಎಂಡಿ ಆದೇಶ ಟನ್‌ ಕಬ್ಬಿಗೆ ಹೆಚ್ಚುವರಿ ₹100 ಪಾವತಿಸದ ಬಣ್ಣಾರಿ ಕಾರ್ಖಾನೆ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ: ಡಿಸಿಗೆ ಒ... KSRTC ನೌಕರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿ: ಕಾರ್ಮಿಕ ಆಯುಕ್ತರಿಗೆ ಒಕ್ಕೂಟ ಮನವಿ ಇಂದು ಹೊರಬೀಳಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮುಂದೂಡಿಕೆ