NEWSದೇಶ-ವಿದೇಶನಮ್ಮರಾಜ್ಯ

ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಶೇ.41 ರಷ್ಟು ಹೆಚ್ಚಳ: ಫೋರ್ಬ್ಸ್‌

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಹೊದ ವರ್ಷಕ್ಕೆ ಹೋಲಿಸಿದರೆ ಭಾರತೀಯ ಬಿಲಿಯನೇರ್‌ಗಳ ಸಂಪತ್ತು ಈ ಬಾರಿ ಶೇ.41 ರಷ್ಟು ಹೆಚ್ಚಳವಾಗಿದೆ.

ಫೋರ್ಬ್ಸ್ ತನ್ನ ಇತ್ತೀಚಿನ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 200 ಭಾರತೀಯರು ಈ ಪಟ್ಟಿಯಲ್ಲಿದ್ದಾರೆ. ಇನ್ನು 954 ಶತಕೋಟಿ ಡಾಲರ್‌ ಸಾಮೂಹಿಕ ಸಂಪತ್ತನ್ನು ಹೊಂದಿದ್ದಾರೆ. ಕಳೆದ ವರ್ಷ 169 ಭಾರತೀಯರು ಈ ಪಟ್ಟಿಯಲ್ಲಿದ್ದರು 675 ಶತಕೋಟಿ ಡಾಲರ್ ಮೌಲ್ಯ ಹೊಂದಿದ್ದರು.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) 116 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಜಾಗತಿಕ ಮಟ್ಟದಲ್ಲಿ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದರ ಜತೆಗೆ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯೂ ಆಗಿದ್ದಾರೆ. ಅಂಬಾನಿಯವರ ನಿವ್ವಳ ಮೌಲ್ಯವು 39.76% ಹೆಚ್ಚಾಗಿದೆ, 100 ಬಿಲಿಯನ್ ಡಾಲರ್‌ ಕ್ಲಬ್‌ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾಗಿದ್ದಾರೆ.

ಇನ್ನು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರು 84 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಸಾವಿತ್ರಿ ಜಿಂದಾಲ್ 33.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಅವರು ಆರನೇ ಸ್ಥಾನದಲ್ಲಿದ್ದರು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.

ಫೋರ್ಬ್ಸ್ 2024 ಪಟ್ಟಿಯು ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಅವರಂತಹ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ 25 ಹೊಸ ಭಾರತೀಯ ಬಿಲಿಯನೇರ್‌ಗಳನ್ನು ಪರಿಚಯಿಸಿದೆ. ಬೈಜು ರವೀಂದ್ರನ್ ಮತ್ತು ರೋಹಿಕಾ ಮಿಸ್ತ್ರಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದೆ.

ಜಾಗತಿಕ ಮಟ್ಟದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬದವರು 233 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ನಂತರದಲ್ಲಿ ಎಲೋನ್ ಮಸ್ಕ್ (195 ಶತಕೋಟಿ ಡಾಲರ್), ಜೆಫ್ ಬೆಜೋಸ್ (194 ಶತಕೋಟಿ ಡಾಲರ್‌), ಮಾರ್ಕ್ ಜುಕರ್‌ಬರ್ಗ್ (177 ಶತಕೋಟಿ ಡಾಲರ್‌), ಮತ್ತು ಲ್ಯಾರಿ ಎಲಿಸನ್ (114 ಶತಕೋಟಿ ಡಾಲರ್‌) ಆಸ್ತಿ ಹೊಂದಿದ್ದಾರೆ.

ಫೋರ್ಬ್ಸ್ 2024 ಪಟ್ಟಿಯಲ್ಲಿರುವ ಟಾಪ್ 10 ಭಾರತೀಯರು: 1)ಮುಖೇಶ್ ಅಂಬಾನಿ ನಿವ್ವಳ ಮೌಲ್ಯ 116 ಬಿಲಿಯನ್ ಡಾಲರ್ 2) ಗೌತಮ್ ಅದಾನಿ- 84 ಬಿಲಿಯನ್ ಡಾಲರ್ ಮೌಲ್ಯ 3) ಶಿವ ನಡಾರ್ ನಿವ್ವಳ ಮೌಲ್ಯ $36.9 ಬಿಲಿಯನ್ 4) ಸಾವಿತ್ರಿ ಜಿಂದಾಲ್ ನಿವ್ವಳ ಮೌಲ್ಯ $33.5 ಬಿಲಿಯನ್ 5) ದಿಲೀಪ್ ಶಾಂಘ್ವಿ ನಿವ್ವಳ ಮೌಲ್ಯ $26.7 ಬಿಲಿಯನ್.

6) ಸೈರಸ್ ಪೂನಾವಲ್ಲಾ- ನಿವ್ವಳ ಮೌಲ್ಯ $21.3 ಬಿಲಿಯನ್ 7) ಕುಶಾಲ್ ಪಾಲ್ ಸಿಂಗ್- ನಿವ್ವಳ ಮೌಲ್ಯ $20.9 ಬಿಲಿಯನ್ 8) ಕುಮಾರ್ ಬಿರ್ಲಾ – ನಿವ್ವಳ ಮೌಲ್ಯ $19.7 ಬಿಲಿಯನ್ 9) ರಾಧಾಕಿಶನ್ ದಮಾನಿ- ನಿವ್ವಳ ಮೌಲ್ಯ $17.6 ಬಿಲಿಯನ್ 10) ಲಕ್ಷ್ಮಿ ಮಿತ್ತಲ್ ನಿವ್ವಳ ಮೌಲ್ಯ $16.4 ಬಿಲಿಯನ್

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ