ಮಂಗಳೂರು: ಮೈಸೂರು ಮೂಲದ ಒಂದೆ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೆ.ಎಸ್.ರಾವ್ ರೋಡ್ ಬಳಿಯ ಲಾಡ್ಜ್ನಲ್ಲಿ ಈ ಘಟನೆ ನಡೆದಿದ್ದು, ದೇವೇಂದ್ರ(48), ನಿರ್ಮಲಾ(48), ಚೈತ್ರಾ(09) ಹಾಗೂ ಚೈತನ್ಯ (09) ಮೃತರು ಎಂದು ಗುರುತಿಸಲಾಗಿದೆ.
ದೇವೇಂದ್ರಪ್ಪ ಮೈಸೂರಿನ ವಾಣಿವಿಲಾಸ ಬಡಾವಣೆಯ ನಿವಾಸಿಯಾಗಿದ್ದು ಪತ್ನಿ ಮಕ್ಕಳ ಜೊತೆ ಮಂಗಳೂರಿಗೆ ಮಾ. 27ರಂದು ಬಂದು ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದರು. ಬಳಿಕ ಅದನ್ನು ಎರಡು ದಿನಕ್ಕೆ ವಿಸ್ತರಣೆ ಮಾಡಿದ್ದರು.
ಗುರುವಾರ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಶುಕ್ರವಾರ ತಪಾಸಣೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಲಬಾಧೆ, ಸಾಲ ತೀರಿಸಲಾಗದೇ ಸಾಲಗಾರರ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.