
ಬೆಂಗಳೂರು: ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಶೈಕ್ಷಣಕ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂದು ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು.
ಜಿಲ್ಲೆಯ ನಾಲ್ಕು ತಾಲೂಕಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್. ಅನುರಾಧ ಮತ್ತು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಉಚಿತ ಲ್ಯಾಪ್ ಟಾಪ್ ವಿತರಿಸಿದರು.
ಜಿಲ್ಲಾ ಹಂತದಲ್ಲಿ ಅತೀ ಹೆಚ್ಚು ಅಂಗಳಿಸಿದ ವಿದ್ಯಾರ್ಥಿಗಳು: ನೆಲಮಂಗಲ ತಾಲೂಕಿನ ಎಂ.ಚಿನ್ಮಯಿ 625/616. ದೊಡ್ಡಬಳ್ಳಾಪುರ ತಾಲೂಕಿನ ಜಿ.ಆರ್.ದೀಕ್ಷಾ 625/606 ಹಾಗೂ ಎಸ್.ರಾಧಾ 625/605.
ತಾಲೂಕು ಹಂತದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು: ದೇವನಹಳ್ಳಿ ತಾಲೂಕಿನ ಎಂ.ನಿಧಿ 625/604, ಬಿ.ಮಿತುನ್ 625/592, ಆರ್.ಕಾರ್ತಿಕ್ 625/598. ದೊಡ್ಡಬಳ್ಳಾಪುರ ತಾಲೂಕಿನ ತೇಜಸ್ವಿನಿ ಕೆ.ಎಸ್ 625/592, ಜೀವನ್ ಎ. 625/591, ಶಶಿಕಿರಣ್ 625/595.
ಹೊಸಕೋಟೆ ತಾಲೂಕಿನ ತೇಜಶ್ರೀ ಆರ್.ಎಸ್. 625/574, ಕೀರ್ತಿಶ್ರೀ ಆರ್.625/573, ಮೀನಾಕ್ಷಿ ಪ್ರದೀಪ್ ಲೋಹರ್ 625/568. ನೆಲಮಂಗಲ ತಾಲೂಕಿನ ಸಂಜನಾ ಕೆ. 625/584, ಹಂಸವೇಣಿ ಜಿ. ಆರ್. 625/577, ಹೇಮಾ ವಿ.625ಕ್ಕೆ577 ಅಂಕಗಳಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.