ಏ.15ರಂದು ಸಾರಿಗೆ ನೌಕರರ ವೇತನ ಸಂಬಂಧ ನಡೆಯುವ ಸಿಎಂ ಸಭೆಗೆ ನಮ್ಮ ಕರೆದಿಲ್ಲ: ವಿಚಾರ ವೇದಿಕೆ ಅಸಮಾಧಾನ

ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಇದೇ ಏ.15ರಂದು ಆಯೋಜಿಸಿರುವ ಸರ್ವ ಸಂಘಗಳ ಜತೆ ಸಿಎಂ ಸಭೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ ಎಂದು ವೇದಿಕೆ ಅಧ್ಯಕ್ಷ ವೈ.ಎಂ. ಶಿವರೆಡ್ಡಿ ಆಕ್ಷೇಪಿಸಿದ್ದಾರೆ.
ಅಲ್ಲದೆ ಈ ಸಂಬಂಧ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ದಿನಾಂಕ 15-04-2025 ರಂದು ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಆ ಸಭೆಗೆ ಕೇವಲ ಕಾರ್ಮಿಕ ಸಂಘಟನೆಗಳನ್ನು ಮಾತ್ರ ಕರೆಯಲಾಗಿದೆ. ಈ ಕೆಲವು ಸಂಘಟನೆಗಳನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ನಮ್ಮ ವಿಚಾರ ವೇದಿಕೆ ಸಂಘವನ್ನು ಆಹ್ವಾನಿಸಿಲ್ಲ. ಈ ಕ್ರಮ ಅಸಂವಿಧಾನಾತ್ಮಕ ನಡೆ ಎಂದು ವೇದಿಕೆ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಕಾರ್ಮಿಕ ಸಂಘಟನೆಯಲ್ಲಿ ಕೇವಲ ಕಾರ್ಮಿಕ ಎಂದು ಗುರುತಿಸಿಕೊಳ್ಳುವ ವರ್ಗದವರು ಮಾತ್ರ ಸದಸ್ಯರಿದ್ದರೆ, ಕರಾರಸಾ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯಲ್ಲಿ ಶುಚಿಗಾರ ಹುದ್ದೆಯಿಂದ ಇಲಾಖಾ ಮುಖ್ಯಸ್ಥರ ಹುದ್ದೆವರೆಗಿನ ಎಲ್ಲ ವರ್ಗದ ನೌಕರರು ಒಳಗೊಂಡಿದ್ದಾರೆ.
ಮುಖ್ಯವಾಗಿ ಯಾರೊಬ್ಬ ಹೊರಗಿನ ಖಾಸಗೀ ವ್ಯಕ್ತಿಗಳಿಲ್ಲ. ಹಾಲಿ ನೌಕರರು ಮಾತ್ರ ಈ ಸಂಘಟನೆಯಲ್ಲಿದ್ದಾರೆ ಎನ್ನುವುದು ವಿಶಿಷ್ಟತೆಯಾಗಿದೆ. ಸಹಕಾರಿ ಸಂಘಗಳ ತತ್ವದಡಿ ಸಂಘ ಸ್ಥಾಪಿತಗೊಂಡಿದ್ದು ಅತೀ ಹೆಚ್ಚು ಸಂಖ್ಯಾಬಲದಲ್ಲಿ ನೌಕರ ಸದಸ್ಯರನ್ನು ಹೊಂದಿದೆ. ನೌಕರರ ಹಿತಚಿಂತನೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಯುವ ಸಂದರ್ಭದಲ್ಲಿ ನಮ್ಮ ಸಂಘಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿ ಹಲವು ಬಾರಿ ಮನವಿಪತ್ರ ಸಲ್ಲಿಸಲಾಗಿದೆ.
ನಾಡಿನ ಜಟಿಲ ಸಮಸ್ಯೆ ಬಗೆಹರಿಸುವ ಸಂದರ್ಭದಲ್ಲಿ ಸರಕಾರ ನಾಡಿನ ಎಲ್ಲ ಸಂಘ ಸಂಸ್ಥೆಗಳು, ಹಿರಿಯ ಸಾಹಿತಿಗಳು, ಬುದ್ಧಿಜೀವಿಗಳು ವಿಪಕ್ಷ ಸಹಿತ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಕರೆದು ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಸಾರಿಗೆ ಸಂಸ್ಥೆಯಲ್ಲಿ ಅತ್ಯಂತ ಜಟಿಲ ಹಾಗೂ ಜ್ವಲಂತ ಸಮಸ್ಯೆಯಾಗಿರುವ ವೇತನ ಹಾಗೂ ಪಿಂಚಣಿ ವಿಷಯದಲ್ಲಿ ಕೇವಲ ಎರಡು ತಂಡಗಳನ್ನು ಕರೆದು ಸಭೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ಕಾಟಾಚಾರದ ಸಭೆಯಿಂದ ಸಾರಿಗೆ ನೌಕರರಿಗೆ ನಿಜವಾಗಿಯೂ ನ್ಯಾಯ ಸಿಗುವುದಿಲ್ಲ. ಈ ಸಭೆಯೂ ಸಹ ಪರಿಪೂರ್ಣತೆ ಪಡೆದುಕೊಳ್ಳುವುದಿಲ್ಲ. ಆದ್ದರಿಂದ ಕಾರ್ಮಿಕ ಸಂಘಗಳ ಜತೆಗೆ ಸರಕಾರದ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿತಗೊಂಡಿರುವ ಸಂಘಗಳನ್ನು ಸಹ ಮಾತುಕತೆಗೆ ಕರೆಯಬೇಕು ಎಂದು ಎಂಡಿ ಅವರಲ್ಲಿ ಮತ್ತೊಮ್ಮೆ ಉಪಾಧ್ಯಕ್ಷ ರಫೀಕ ಅಹ್ಮದ್ ನಾಗನೂರ, ಖಜಾಂಚಿ ರಮೇಶ ಮೋರೆ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ ಮನವಿ ಮಾಡಿದ್ದಾರೆ.
Related

You Might Also Like
ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ...
KSRTC ನೌಕರರ ವೇತನ ಹೆಚ್ಚಳ ಸಂಬಂಧ ಉಪವಾಸ ಸತ್ಯಾಗ್ರಹ ಮಾಡುವ ಕುರಿತು ಜು.18ರಂದು ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.29ರಿಂದ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ...
ಜು.29ರೊಳಗೆ KSRTC ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಂಡಿಗೆ ಒಕ್ಕೂಟ ಮನವಿ
ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಜುಲೈ...
ಬೀಡನಹಳ್ಳಿ: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ – ಭಕ್ತರಿಗೆ ಅನ್ನಸಂತರ್ಪಣೆ
ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಇಂದು (ಜು.17) ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಪೂಜಾ ಕೈಂಕರ್ಯಗಳು...
ಕೊಪ್ಪಳ: ಭಾರೀ ಮಳೆಗೆ ಕುಸಿದ ಮನೆ ಒಂದೂವರೆ ವರ್ಷದ ಮಗು ಸಾವು, 6 ಮಂದಿಗೆ ಗಾಯ
ಕೊಪ್ಪಳ: ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗುವೊಂದು ಮೃಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮನೆ...
ದ.ಕ.ದಲ್ಲಿ ವರುಣನ ಅಬ್ಬರ- ಮಣ್ಣಗುಂಡಿ ಬಳಿ ಗುಡ್ಡಕುಸಿತ: BM ಹೆದ್ದಾರಿ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆ ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಆದರೂ ಧರ್ಮಸ್ಥಳ,...
ಅತ್ತಹಳ್ಳಿಯ ಎ.ಸಿ.ಲಿಂಗೇಗೌಡರ ಪುತ್ರ ರಾಘವ ಲಿಂಗೇಗೌಡ ನಿಧನ
ಮೈಸೂರು: ನಗರದ ತಿ.ನರಸೀಪುರ ರಸ್ತೆಯ ಜಿ.ಎಲ್.ಗಾರ್ಡನ್ ನಿವಾಸಿ ಲಂಡನ್ನಲ್ಲಿ ಕೆಲಸದಲ್ಲಿದ್ದ ರಾಘವ ಲಿಂಗೇಗೌಡ (49) ಬುಧವಾರ ಸಂಜೆ ನಿಧನರಾದರು. ಮೂಲತಃ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಅತ್ತಹಳ್ಳಿ...
BMTC ಚಾಲನಾ ಸಿಬ್ಬಂದಿಗಳ ಡ್ಯೂಟಿ ರೋಟಾ ಕೌನ್ಸೆಲಿಂಗ್ಗೆ ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ವಾಯುವ್ಯ ಹಾಗೂ ಕೇಂದ್ರೀಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ಹೊಸದಾಗಿ ಕೌನ್ಸೆಲಿಂಗ್...
KSRTC: ಆಗಸ್ಟ್ 5ರಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪಕ್ಕ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ...