NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರು: ಅಗ್ರಿಮೆಂಟ್ ಬೇಕು ಎನ್ನುವವರೇ ಒಮ್ಮೆ ನೋಡಿ ಇನ್ನಾದರೂ ಸರಿ ಸಮಾನ ವೇತನ ಕೇಳಲು ಮುಂದಾಗಿ..!

ಹೀಗೆ ಕಳೆದ 4 ದಶಕಗಳಿಗೂ ಹೆಚ್ಚು ಕಾಲದಿಂದಲೂ ಈ ಅಗ್ರಿಮೆಂಟ್‌ ಎಂಬ ಭೂತದ ಬೆನ್ನುಹತ್ತಿದ ಪರಿಣಾಮ ಇಂದು ಸಾರಿಗೆ ನೌಕರರು ಹೆಚ್ಚು ದುಡಿಮೆ ಕಡಿಮೆ ವೇತನಕ್ಕೆ ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿ ಇನ್ನಾದರೂ ಬದಲಾಗಲಿ ಎಂಬುವುದು ಸಮಸ್ತ ನೌಕರರ ಆಶಯವಾಗಿದೆ. ಇದಕ್ಕೆ ಹೆಗಲಾಗಿ ಸಂಘಟನೆಗಳು ತಮ್ಮ ಪ್ರತಿಷ್ಟೆಯನ್ನು ಬದಿಗೊತ್ತಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.  ಇಲ್ಲದಿದ್ದರೆ ನಮ್ಮ ಕಾಲ ಮೇಲೆ ನಾವೆ ಕಲ್ಲು ಎತ್ತಿಹಾಕಿಕೊಂಡಂತೆ ಆಗುತ್ತದೆ.

ಹೌದು!  ನಮ್ಮಲ್ಲಿಯ ಅಗ್ರಿಮೆಂಟ್ ಹೇಗೆಂದರೆ ಪ್ರತಿ ವರ್ಷ ನಡೆಯುವ ಊರಿನ ಜಾತ್ರೆಯ ತೇರು/ರಥೋತ್ಸವ ಇದ್ದ ಹಾಗೆ. ಈ ತೇರು ತನ್ನಷ್ಟಕ್ಕೆ ಹೊಗುವುದಿಲ್ಲ. ಅದಕ್ಕೆ ಎಲ್ಲರೂ ಸೇರಿ ಹಗ್ಗಕಟ್ಟಿ ಎಳೆದರೆ ಮಾತ್ರ ಚಲಿಸುವುದು. ನಮ್ಮ ಅಗ್ರಿಮೆಂಟ್ ಕೂಡಾ ಜಾತ್ರೆಯ ತೇರು ಇದ್ದ ಹಾಗೇನೆ. ಯಾಕೆಂದರೆ ಈ ಹಿಂದಿನ ಪ್ರತಿ ಅಗ್ರಿಮೆಂಟ್‌ಅನ್ನು ಒಮ್ಮೆ ಹಿಂತಿರುಗಿ ನೋಡಿ.

ಪ್ರತಿ ಅಗ್ರಿಮೆಂಟ್ ತೆಗೆದುಕೊಳ್ಳುವಾಗಲೂ ಸಣ್ಣ ಪ್ರಮಾಣದ ಮುಷ್ಕರ (ಸಿಬ್ಬಂದಿಗಳ ವರ್ಗಾವಣೆ, ಡಿಸ್ಮಿಸ್, ಅಮಾನತು) ಮಾಡಲೇಬೇಕು. ನ್ಯಾಯಬದ್ದವಾಗಿ ಒಮ್ಮೆಯಾದರೂ ಸರಿಯಾಗಿ ನಾಲ್ಕು ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳ ಒಂದನೇ ತಾರಿಖಿನಂದು ಕೊಟ್ಟಿದ್ದಾರಾ? ಅದನ್ನು ಕೂಡ ಹೋರಾಟ ಮಾಡಿಯೇ ತೆಗೆದುಕೊಳ್ಳಬೇಕು ಮತ್ತು ಸಿಬ್ಬಂದಿಗಳು ವರ್ಗಾವಣೆ, ಸಸ್ಪೆಂಡ್, ವಜಾ ಪ್ರಕರಣಗಳನ್ನು ಅನುಭವಿಸಲೇಬೇಕು.

ಹೋರಾಟ ಮಾಡುವುದೇ ನಿಜ ಅಂದಮೇಲೆ ಯಾಕಾಗಿ ಸಣ್ಣ ಮತ್ತು ಉಪಯೋಗವಿಲ್ಲದ ಹೋರಾಟ ಮಾಡಬೇಕು? ಅದು ಅಲ್ಲದೇ ಅಷ್ಟು ಶಿಸ್ತು ಪ್ರಕರಣ ಅನುಭವಿಸಿಯೂ ನಮ್ಮಗಳ ಅಗ್ರಿಮೆಂಟ್ ಯಾವ ತರಹ ಗೊತ್ತಾ? ಒಂದು ಸತ್ತ ಎಮ್ಮೆಯನ್ನು ತಿನ್ನಲು ಹೇಗೆ ಕಿತ್ತಾಡಿ ಜಗಳ ಮಾಡಿಕೊಂಡು ಹಂಚಿಕೊಂಡು ತಿನ್ನುತ್ತಾರೋ ಹಾಗೆ ನಮ್ಮ ಪ್ರತಿ ನಾಲ್ಕು ವರ್ಷದ ಅಗ್ರಿಮೆಂಟ್. ಇಷ್ಟಾದರೂ ಇದರ ಬಗ್ಗೆ ಯಾಕಾಗಿ ಧ್ವನಿ ಎತ್ತುವುದಿಲ್ಲಾ ಗೋಸುಂಬೆಗಳಾ?

ಸತ್ತವರು ಸತ್ತರು, ನಮಗೆ ಸಿಗಬೇಕಾಗಿದ್ದು ಸಿಕ್ಕಿತು ಎಂಬ ಮನೋಧೋರಣೆಯಾ ಹೆತ್ಲಾಂಡಿಗಳಾ? ಮೂಲವ್ಯಾಧಿ ಆಗಿ ಇಷ್ಟು ನೋವು ಅನುಭವಿಸುತ್ತಿದ್ದರೂ ಯಾಕಾಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುತ್ತಿಲ್ಲಾ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸದೇ, ಸಮಾಜದಲ್ಲಿ ಒಳ್ಳೆಯ ಸಂತೃಪ್ತಿ ಬದುಕನ್ನು ಸಾಗಿಸದೇ, ನಾಚಿಕೆಗೆಟ್ಟು ಕಂಡ ಕಂಡವರ ಹತ್ತಿರ ಸಾಲ ಮಾಡಿಕೊಂಡು ಬಂಡ ಬಾಳಲ್ಲಿ ಬದುಕುತ್ತಿರಿ.

ಇನ್ನಾದರೂ ಒಳ್ಳೆಯ ಯೋಚನೆ ಸಂಘಟನೆ, ಒಳ್ಳೆಯ ಪರಿಹಾರದತ್ತ ಮುಖ ಮಾಡು ಎಂಜಿಲು ಕಾಸಿನ ಮೂಢ ಮಾನವಾ! ಹೊಗಲಿ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕ, ತಂಗಿ, ಹೆಂಡತಿ, ತಾಯಿ ಮಕ್ಕಳು, ಪರಿಚಯಸ್ಥರು ಪ್ರಸ್ತುತ ಇಷ್ಟು ಪ್ರಮಾಣದಲ್ಲಿ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಕೇಳುವುದಿಲ್ಲವಾ ನಿಮ್ಮನ್ನಾ? ನಿಮ್ಮ ಆತ್ಮಸಾಕ್ಷಿ ಸತ್ತುಹೊಗಿದೇಯಾ? “ಸಾರಿಗೆ ನೌಕರರಿಗೆ ಒಳ್ಳೆಯದು ಆಗಲಿ” ನೋವಿನೊಂದಿಗೆ ಶೇ.90ಕ್ಕೂ ಹೆಚ್ಚು ಸಾರಿಗೆ ನೌಕರರು.

ಹೀಗೆ ಕಳೆದ 4 ದಶಕಗಳಿಗೂ ಹೆಚ್ಚು ಕಾಲದಿಂದಲೂ ಈ ಅಗ್ರಿಮೆಂಟ್‌ ಎಂಬ ಭೂತದ ಬೆನ್ನುಹತ್ತಿದ ಪರಿಣಾಮ ಇಂದು ಸಾರಿಗೆ ನೌಕರರು ಹೆಚ್ಚು ದುಡಿಮೆ ಕಡಿಮೆ ವೇತನಕ್ಕೆ ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿ ಇನ್ನಾದರೂ ಬದಲಾಗಲಿ ಎಂಬುವುದು ಸಮಸ್ತ ನೌಕರರ ಆಶಯವಾಗಿದೆ. ಇದಕ್ಕೆ ಹೆಗಲಾಗಿ ಸಂಘಟನೆಗಳು ತಮ್ಮ ಪ್ರತಿಷ್ಟೆಯನ್ನು ಬದಿಗೊತ್ತಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ