NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ ಇಪಿಎಸ್-95, ಬಿಎಂಟಿಸಿ ‍& ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಶತದಿನೋತ್ಸವ

100ನೇ ಮಾಸಿಕ ಸಭೆ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸದಸ್ಯರೆಲ್ಲರಿಗೂ ಸಿಹಿ ವಿತರಿಸುವ ಮೂಲಕ, ಸಿಹಿ ಸುದ್ದಿ ಮಾತನಾಡೋಣ. ಈ ಸಭೆಗೆ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, 2020 ರ ನಂತರ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ನೌಕರರ ಬಾಕಿ ವೇತನ ಹಾಗೂ ಸಂಸ್ಥೆಯ ಸೇವೆಯಿಂದ ಇತ್ತೀಚಿಗೆ ನಿವೃತ್ತರಾದ ನೌಕರರಿಗೆ ಕೈಗಾರಿಕಾ ಒಪ್ಪಂದ 01/01/2024 ರ ಪ್ರಕಾರ ಫಿಕ್ಸ್ಯೇಷನ್ ಆಗಬೇಕಾಗಿದ್ದು, ನೌಕರರ ಈ ಎಲ್ಲ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ 100ನೇ ಮಾಸಿಕ ಸಭೆ ಮೇ 3ರ ಭಾನುವಾರ ಲಾಲ್ ಬಾಗ್ ಆವರಣದಲ್ಲಿ ಜರುಗಲಿದೆ ಎಂದು ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಜನವರಿ 01, 2018 ರಂದು ಲಾಲ್‌ಬಾಗ್ ಆವರಣದಲ್ಲಿ ವಿದ್ಯುಕ್ತವಾಗಿ 4 ಜನರಿಂದ ಸಂಘ ಪ್ರಾರಂಭವಾಯಿತು. ಸೈದ್ಯಾಂತಿಕ ತತ್ವ ಸಿದ್ದಾಂತಗಳ ಹಿನ್ನೆಲೆಯಲ್ಲಿ, ದಿನ ಕಳೆದಂತೆ, ಸಂಘಟನೆ ಬೆಳೆಯಲು ಪ್ರಾರಂಭವಾಯಿತು. ಕೊರೊನ ಕಾಲಘಟ್ಟದಲ್ಲಿ ಒಂದು ಮಾಸಿಕ ಸಭೆ ಹೊರತುಪಡಿಸಿ, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಮಾಸಿಕ ಸಭೆ ನಡೆಯುತ್ತಿದ್ದು, ಲಾಲ್‌ಬಾಗ್ ನಡಿಗೆದಾರರು ಒಳಗೂಂಡಂತೆ, ಸಮಸ್ತ ಪಿಂಚಿಣಿದಾರರಲ್ಲಿ ನಮ್ಮ ಹೋರಾಟ ಮನೆ ಮಾತಾಗಿದೆ.

ಈ ನಾಡಿನಲ್ಲಿ ಚಕ್ರಗಳು ಉರುಳಲು ಕಾರಣಕರ್ತರಾಗಿ, ತಮ್ಮ ಬೆವರಿನ ಹನಿಯನ್ನು ದಾರೆಯೆರದ, ಸ್ವಾಭಿಮಾನಿ ಸಂಸ್ಥೆಯ ನೌಕರರಿಗೆ ಧ್ವನಿಯಾಗಿ, ಅವರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಸಂಘವು ನಿರಂತರವಾಗಿ ನಿರ್ವಹಿಸಿದೆ. ಇಪಿಎಫ್ಒ ಅಧಿಕಾರಿಗಳು ಸಾಮಾಜಿಕ ನ್ಯಾಯದ ಇಪಿಎಸ್ ಕಾಯಿದೆಯನ್ನು ನಮ್ಮ ಅರಿವಿಗೆ ತರದೆ, ತಮಗೆ ಬೇಕಾದಂತೆ, ಮಾರ್ಪಾಡು ಮಾಡಿಕೊಂಡು, ನಂತರ ನ್ಯಾಯಾಲಯದ ತೀರ್ಪುಗಳನ್ನು ತೀರುಚಿ ಹೇಗೆ? ಮುಗ್ಧ ಇಪಿಎಸ್ ನಿವೃತ್ತರನ್ನು ವಂಚಿಸಿರುತ್ತಾರೆ ಎಂಬುದನ್ನು ಸಂಘವು ನಿರ್ಭೀತಿಯಿಂದ ಸಾರ್ವಜನಿಕ ವಲಯದಲ್ಲಿ ಬಹಿರಂಗಪಡಿಸಿದೆ.

ಆಧುನಿಕ ಜಗತ್ತಿನಲ್ಲಿ ಕೆಲವು ವಿಸ್ಮಯಗಳು ನಡೆಯುತ್ತವೆ ಎಂಬುದನ್ನೂ ಎಲ್ಲರೂ ಕಣ್ಣೆದುರೇ ಕಾಣಬಹುದು. ಯಾವುದೇ ದುಡಿಮೆಯನ್ನು ಮಾಡದ, ದೇಣಿಗೆಯನ್ನು ನೀಡದ, ಜನಪ್ರತಿನಿಧಿಗಳು ತಮ್ಮ ಭವ್ಯ ಭವಿಷ್ಯವನ್ನು ತಾವೇ ರೂಪಿಸಿಕೊಂಡು, ಸಾರ್ವಜನಿಕ ಸಂಪತ್ತಿನಿಂದ ವೈಭೋಗದ ಜೀವನ ನಡೆಸುತ್ತಿದ್ದು, ಕಾರ್ಮಿಕ ದಿನಾಚರಣೆಯ ದಿನದಂದು ಕಾರ್ಮಿಕರಿಗೆ ನೀತಿ ಪಾಠ ಮಾಡುವುದನ್ನು ಕಾಣಬಹುದು. ಕಲಿಯುಗದಲ್ಲಿ, ಬಾಬು ಬಲವಿದ್ದಲ್ಲಿ, ಏನು ಬೇಕಾದರೂ ಮಾಡಿ, ಜಯಿಸಬಹುದು.

ನೌಕರ ತನ್ನ ನಿವೃತ್ತಿಯ ನಂತರ ಸುಂದರ, ನೆಮ್ಮದಿಯ ಬದುಕಿನ ಕನಸು ಕಂಡಿದ್ದ, ನಂತರ ಗೊತ್ತಾಗಿದ್ದು, ಅದು ವಾಸ್ತವವಲ್ಲ, ಕೇವಲ ಭ್ರಮೆ ಎಂದು. ಸಂಘರ್ಷ ನಮ್ಮ ಜೀವನದ ಭಾಗವಾಗಿದೆ. ಅದರ ವಿರುದ್ಧ ಹೋರಾಟ ನಡೆಸಿ, ನಮ್ಮ ಹಕ್ಕನ್ನು ಪ್ರತಿಪಾದಿಸುವುದು ಅನಿವಾರ್ಯವಾಗಿದೆ.

ಏ.27ರಂದು ನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಿದ ಇಪಿಎಸ್ ಪಿಂಚಣಿದಾರರ ಸಭೆಗೆ ನೂರಾರು ಪ್ರತಿಭಟನಾಕಾರರು ವಿವಿಧ ಭಾಗಗಳಿಂದ ಆಗಮಿಸಿದ್ದು, ಕಚೇರಿ ಆವರಣದಲ್ಲಿ ಪಥ ಸಂಚಲನ ಮಾಡುವ ಮೂಲಕ ಕೂಗಿದ ಧಿಕ್ಕಾರದ ಘೋಷಣೆ ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿದ್ದು, ನಮ್ಮ ಮನವಿ ಪತ್ರಗಳು, ಇದನ್ನು ಅರ್ಥ ಮಾಡಿಕೊಂಡು ಕೂಡಲೇ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ.

100ನೇ ಮಾಸಿಕ ಸಭೆ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸದಸ್ಯರೆಲ್ಲರಿಗೂ ಸಿಹಿ ವಿತರಿಸುವ ಮೂಲಕ, ಸಿಹಿ ಸುದ್ದಿ ಮಾತನಾಡೋಣ. ಈ ಸಭೆಗೆ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, 2020 ರ ನಂತರ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ನೌಕರರ ಬಾಕಿ ವೇತನ ಹಾಗೂ ಸಂಸ್ಥೆಯ ಸೇವೆಯಿಂದ ಇತ್ತೀಚಿಗೆ ನಿವೃತ್ತರಾದ ನೌಕರರಿಗೆ ಕೈಗಾರಿಕಾ ಒಪ್ಪಂದ 01/01/2024 ರ ಪ್ರಕಾರ ಫಿಕ್ಸ್ಯೇಷನ್ ಆಗಬೇಕಾಗಿದ್ದು, ನೌಕರರ ಈ ಎಲ್ಲ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ.

ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಮೇ3ರ ಭಾನುವಾರ ಬೆಳಗ್ಗೆ 8ಗಂಟೆಗೆ ಆಗಮಿಸಬೇಕು ಎಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿ ಕೊಳ್ಳಲಾಗಿದೆ ಎಂದು ತಿಳಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರು: ಅಗ್ರಿಮೆಂಟ್ ಬೇಕು ಎನ್ನುವವರೇ ಒಮ್ಮೆ ನೋಡಿ ಇನ್ನಾದರೂ ಸರಿ ಸಮಾನ ವೇತನ ಕೇಳಲು ಮುಂದಾಗಿ..! ನಾಳೆ ಇಪಿಎಸ್-95, ಬಿಎಂಟಿಸಿ ‍& ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಶತದಿನೋತ್ಸವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 993 ರೂ. ಹೆಚ್ಚಳ- ಭಾರೀ ಏರಿಕೆ ಮೇ 1ರಿಂದಲೇ ಜಾರಿ KSRTC: ಮೇ 4ರಂದು ಸರ್ಕಾರದ ವಿಳಂಬ ನೀತಿ ಖಂಡಿಸಿ ಸಾರಿಗೆ ನೌಕರರ ಒಕ್ಕೂಟದಿಂದ ಧರಣಿ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರಿಂದ ಕರಾಳ ಕಾರ್ಮಿಕ ದಿನಾಚರಣೆ- ಡ್ಯೂಟಿ ಮೇಲೆ ಮೌನ ಪ್ರತಿಭಟನೆ GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ !