NEWSನಮ್ಮಜಿಲ್ಲೆ

ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ- ನಿಲ್ದಾಣಕ್ಕೂ ಮೊದಲೆ ಇಳಿದ ಮಹಿಳೆ ಪರ ನಿಂತು ನಾನು ಪೊಲೀಸ್‌ ಎಂದಳು!!

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ಸನ್ನು ವಿಜಯಪುರದಲ್ಲಿ ಹತ್ತಿದ ಮಹಿಳೆಯೊಬ್ಬರು ತನ್ನ ನಿಲ್ದಾಣ ಬರುವ ಮೊದಲೇ ಅರ್ಧದಲ್ಲೇ ಬಸ್‌ ಇಳಿಯಲು ಮುಂದಾಗಿದ್ದಾರೆ ಈ ವೇಳೆ ನಿರ್ವಾಹಕರು ನಮಗೆ ತೊಂದರೆ ಆಗುತ್ತದೆ ನೀವು ಎಲ್ಲಿಗೆ ಟಿಕೆಟ್‌ ಪಡೆದುಕೊಂಡಿದ್ದೀರೋ ಅಲ್ಲೇ ಇಳಿಯ ಬೇಕು ಎಂದು ಹೇಳಿದ್ದಾರೆ.

ಅಷ್ಟಕ್ಕೆ ಆ ಮಹಿಳೆ ಮನೆಯಲ್ಲಿದ್ದ ತಮ್ಮವರನ್ನು ಕರೆಸಿಕೊಂಡು ಅವಾಜ್‌ ಹಾಕಿದ್ದಾರೆ. ಅಲ್ಲದೆ ಈ ವೇಳೆ ಅರ್ಧದಲ್ಲೇ ಬಸ್‌ ಇಳಿದ ಮಹಿಳೆ ಪರ ನಿಂತ ಮತ್ತೊಬ್ಬ ಮಹಿಳೆ ನಾಉ ಪೊಲೀಸ್‌ ಇದ್ದೀನಿ ಏನು ಮಾಡುವುದು ಕೆಲವೊಮ್ಮೆ ಅರ್ಧದಲ್ಲೇ ಇಳಿಯಬೇಕಾಗುತ್ತದೆ ಎಂದು ಆಕೆ ಪರ ಬ್ಯಾಟ್‌ ಬೀಸಿದ್ದಾರೆ.

ಅದಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ನಿಮ್ಮ ಡಿಪಾರ್ಟ್‌ಮೆಂಟ್‌ನಲ್ಲಿ ಇದ್ದೋರು ಹೀಗೆ ಮಾತನಾಡುವುದಕ್ಕೆ ಹೇಳುತ್ತಾರೆ ಎಂದು ನಾಣು ಪೊಲೀಸ್‌ ಎಂದ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆಕೆ ವಿಡಿಯೋ ಮಾಡುತ್ತಿದ್ದೀಯ ಎಂದು ಬಂದು ಫೋನ್‌ ಕಸಿಕೊಂಡಿದ್ದಾರೆ.

ಇದು ನಡೆದಿರುವುದು ಚಡಚಣ ಇಲಕಲ್ಲ ಮಾರ್ಗಮಧ್ಯೆ ಸಂಗಮ ಕ್ರಾಸ್ ಬಳಿ. ಮಹಿಳಾ ಪ್ರಯಾಣಿಕರು ವಿಜಯಪುರದಿಂದ ಇಲಕಲ್‌ಗೆ ಟಿಕೆಟ್ ಪಡೆದು ಮಾರ್ಗಮಧ್ಯೆ ಅಂದರೆ ಸಂಗಮ ಕ್ರಾಸ್ ಬಳಿ ಇಳಿಯಲು ಪ್ರಯತ್ನಿಸಿದರು.

ಆಗ ನಿರ್ವಾಹಕರು ನಡುವೆ ಇಳಿಬೇಡಿ ಅಂದಾಗ ಮನೆಯಲ್ಲಿದ್ದ ಪುರುಷರನ್ನು ಕರೆಸಿ ಚಾಲಕ ನಿರ್ವಾಹಕರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಪುರುಷರೊಂದಿಗೆ ಬಂದಿದ್ದ ಪೊಲೀಸ್‌ ಎಂದು ಹೇಳಿಕೊಂಡ ಮಹಿಳೆಯೂ ಚಾಲನಾ ಸಿಬ್ಬಂದಿಗೆ ಏನು ಮಾಡೋಕಾಗುತ್ತೆ ಇಳಿಯಲೇ ಬೇಕು ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿದ್ದೂ ಚಾಲನಾ ಸಿಬ್ಬಂದಿಗಳು ಭಯದ ವಾತಾವರಣದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ. ಆದಕಾರಣ ಆಡಳಿತ ಮತ್ತು ಅಧಿಕಾರಿ ವರ್ಗದವರು ಚಾಲಕ, ನಿರ್ವಾಹಕರಿಗೆ ಸಣ್ಣ ಸಣ್ಣ ತಪ್ಪಿಗೂ ಶಿಕ್ಷೆ ವಿಧಿಸುವಂತೆ ತಪ್ಪು ಮಾಡಿದ ಪ್ರಯಾಣಿಕರಿಗೂ ಗಂಭೀರ ಪ್ರಕರಣ ದಾಖಲಿಸಬೇಕು ಎಂದು ಪ್ರಯಾಣಿಕರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈಗಿನ ಪರಿಸ್ಥಿತಿ ನೋಡಿದ್ರೆ ಭಾರಿ ಆತಂಕವಾಗುತ್ತಿದೆ ಎಂದು ಚಾಲನಾ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಸಚಿವರು ಗಮನಹರಿಸಿ ಇಂಥ ಪ್ರಕರಣಗಳಿಂದ ಮುಕ್ತ ನೀಡಬೇಕಿದೆ.

Megha
the authorMegha

Leave a Reply

error: Content is protected !!