
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉತ್ತಮ ಸಾಧನೆ ತೋರಿರುವ ಘಟಕ, ವಿಭಾಗಗಳಿಗೆ ನಗದು ಪುರಸ್ಕಾರ ನೀಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಉಪ ಮುಖ್ಯ ಸಂಖ್ಯಾಧಿಕಾರಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿ ಮಾಹೆಯಲ್ಲಿ ಉತ್ತಮ ಸಾಧನೆ ಮಾಡಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹಾಗೂ ವಿಭಾಗಗಳ ಉಸ್ತುವಾರಿ ಅಧಿಕಾರಿಗಳಿಗೆ ಮತ್ತು ಉತ್ತಮ ಸಾಧನೆ ಮಾಡಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ಘಟಕಗಳ ಘಟಕ ವ್ಯವಸ್ಥಾಪಕರಿಗೆ ತಲಾ 1,000 ರೂಪಾಯಿ ನಗದು ಪುರಸ್ಕಾರ ನೀಡಲು ಸೂಕ್ತಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ.
ಹೀಗಾಗಿ ನವೆಂಬರ್-2024ರಲ್ಲಿ ಉತ್ತಮ ಸಾಧನೆ ಮಾಡಿರುವ ವಿಭಾಗ/ ಘಟಕಗಳ ಅಧಿಕಾರಿಗಳಿಗೆ ತಲಾ 1 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡುತ್ತಿದ್ದು ಈ ಪುರಸ್ಕಾರಕ್ಕೆ ಮೊದಲ ಮೂರು ಸ್ಥಾನ ಪಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗ ಉಸ್ತುವಾರಿ ಅಧಿಕಾರಿಗಳು ಹಾಗೂ ಘಟಕಗಳ ಘಟಕ ವ್ಯವಸ್ಥಾಪಕರು ಭಾಜನರಾಗಿದ್ದಾರೆ.
1) ಚಾಮರಾಜನಗರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಉಸ್ತುವಾರಿ ಅಧಿಕಾರಿ ಜಿ.ಎನ್.ಲಿಂಗರಾಜು, ಮೈಸೂರು ಗ್ರಾಮಾಂತರ ವಿಭಾಗದ ಪಿರಿಯಾಪಟ್ಟಣ ಘಟಕದ ಘಟಕ ವ್ಯವಸ್ಥಾಪಕ ಜಿ. ರಾಮಚಂದ ದರ್ಶನ್.
2) ಹಾಸನ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ, ಉಸ್ತುವಾರಿ ಅಧಿಕಾರಿ ಶಿವಾನಂದ, ಎಂ.ಕವಳಿಕಾಯಿ, ಗುಂಡ್ಲುಪೇಟೆ ಘಟಕ ಘಟಕ ವ್ಯವಸ್ಥಾಪಕ ಪಿ.ತ್ಯಾಗರಾಜ.
3) ಹಿರಿಯ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ.ಶ್ರೀನಿವಾಸ ಮೂರ್ತಿ, ಮುಖ್ಯ ಕಾಮಗಾರಿ ಅಭಿಯಂತರರು, ಉಸ್ತುವಾರಿ ಅಧಿಕಾರಿ ಚಿತ್ರದುರ್ಗ ವಿಭಾಗ, (ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ) ಎ.ಎನ್. ಶಿವಕುಮಾರ್, ಪಾವಗಡ ಘಟಕ ಘಟಕ ವ್ಯವಸ್ಥಾಪಕ ಇ.ಹನುಮಂತರಾಯ.
ಡಿಸೆಂಬರ್-2024ರ ಮಾಹೆಯ ಉತ್ತಮ ಸಾಧನೆ ಮಾಡಿರುವ ವಿಭಾಗ/ಘಟಕಗಳ ಅಧಿಕಾರಿಗಳ ವಿವರ: 1) ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾರ್, ಮುಖ್ಯ ಕಾನೂನು ಅಧಿಕಾರಿ, ಉಸ್ತುವಾರಿ ವಿಭಾಗ ಅಧಿಕಾರಿ ವೆಂಕಟೇಶ್, ಶಿವಮೊಗ್ಗ ವಿಭಾಗದ ಶಿಕಾರಿಪುರ ಘಟಕದ ಘಟಕ ವ್ಯವಸ್ಥಾಪಕಿ ಸೌಮ್ಯ.
2) ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಸ್ತುವಾರಿ ಅಧಿಕಾರಿ ಮಂಜುಳಾ ನಾಯ್ಕ್ ಹಾಗೂ ಚಿತ್ರದುರ್ಗ ವಿಭಾಗದ ಚಳ್ಳಕೆರೆ ಘಟಕದ ಘಟಕ ವ್ಯವಸ್ಥಾಪಕ ಎಸ್.ಪ್ರಭು.
3) ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ , ಉಪ ಮುಖ್ಯ ಗಣಕ ವ್ಯವಸ್ಥಾಪಕರು, ಉಸ್ತುವಾರಿ ಅಧಿಕಾರಿ ಆರ್.ಸುಧಾರಾಣಿ, ಬೆಂಗಳೂರು ಕೇಂದ್ರೀಯ ವಿಭಾಗ ಘಟಕದ ಹಿರಿಯ ಘಟಕ ವ್ಯವಸ್ಥಾಪಕ ಶಿವಲಿಂಗಯ್ಯ,
ಜನವರಿ-2025ರ ಮಾಹೆಯ ಉತ್ತಮ ಸಾಧನೆ ಮಾಡಿರುವ ವಿಭಾಗ/ಘಟಕಗಳ ಅಧಿಕಾರಿಗಳ ವಿವರ: 1) ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಸ್ತುವಾರಿ ಅಧಿಕಾರಿ ಮಂಜುಳಾ ನಾಯ್ಕ್, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಉಸ್ತುವಾರಿ ಅಧಿಕಾರಿ ಎಚ್.ಡಿ.ಗೌರಾಂಬ, ಚಿತ್ರದುರ್ಗ ವಿಭಾಗದ ಹೊಸದುರ್ಗ ಘಟಕದ ಘಟಕ ವ್ಯವಸ್ಥಾಪಕ ಸೋಮಶೇಖರಪ್ಪ.
2) ಕೋಲಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಶ್ರೀನಾಥ್, ಟಿ.ಎಲ್.ನಟರಾಜ ಘಟಕ ವ್ಯವಸ್ಥಾಪಕರು, ದೊಡ್ಡಬಳ್ಳಾಪುರ ಘಟಕ, ಚಿಕ್ಕಬಳ್ಳಾಪುರ ವಿಭಾಗ, (ಪ್ರಸ್ತುತ ನಿವೃತ್ತಿ).
3) ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಪಿ. ಹೊಸಪೂಜಾರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಉಸ್ತುವಾರಿ ಅಧಿಕಾರಿ ಕೆ.ಎಂ.ಅಶ್ರಫ್ ಹಾಗೂ ಚಿಕ್ಕಮಗಳೂರು ವಿಭಾಗ ಬೇಲೂರು ಘಟಕದ ಘಟಕ ವ್ಯವಸ್ಥಾಪಕಿ ಶಾಜಿಯಾ ಬಾನು ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.