ಚಿಕ್ಕೋಡಿ: ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಜೈನ ಮುನಿಗಳನ್ನು ಕೊಲೆ ಮಾಡಿ ಮಣ್ಣಿ ಹೂತುಹಾಕಿದ್ದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತುಂತು ತುಂಡಾಗಿದ್ದ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಇದೇ ಜುಲೈ 6ರಂದು ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಹಂತಕರು ಅಪಹರಿಸಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ಮಣ್ಣಲ್ಲಿ ಹೂತಿಟ್ಟಿದ್ದರು.
ಈ ಹಿನ್ನಲೆ ಪೊಲೀಸರಿಗೆ ನಿನ್ನೆ (ಶನಿವಾರ) ಕಾಮಕುಮಾರ ನಂದಿ ಮಹರಾಜರ ಮೃತದೇಹ ಕಟಕಬಾವಿ ಗ್ರಾಮದಲ್ಲಿ ಸಿಕ್ಕಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತು. ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ನಂದಿ ಮಹರಾಜರ ಮೃತದೇವ ಪತ್ತೆಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದಲ್ಲಿ ಜೈನ ವಿಧಿ ವಿಧಾನ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ನಾಂದಣಿ ಮಠದ ಶಿವಸೇನಾ ಭಟ್ಟಾರಕ, ವರುಣಾ ಮಠದ ಧರ್ಮಸೇನ ಭಟ್ಟಾರಕ ಈ ಇಬ್ಬರು ಜೈನ ಮಠಾಧೀಶರ ನೇತೃತ್ವದಲ್ಲಿ ನಂದಿ ಮಹರಾಜರ ಅಂತ್ಯಕ್ರಿಯೆ ನಡೆಯಿತು.
ಅಪಾರ ಪ್ರಮಾಣದ ಭಕ್ತರ ಆಗಮನ: ಕಾಮಕುಮಾರ ನಂದಿ ಮಹರಾಜರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮಠ ಇರೋದರಿಂದ ಅಪಾರ ಪ್ರಮಾಣದಲ್ಲಿ ಮಹಾರಾಷ್ಟ್ರದ ಭಕ್ತರು ಆಗಮಿಸುತ್ತಿದ್ದರು.
ನಂದಿ ಮಹರಾಜರ ಹತ್ಯೆ ಮಾಡಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.