NEWSದೇಶ-ವಿದೇಶನಮ್ಮರಾಜ್ಯ

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್‌ ನ್ಯೂಸ್‌: ಬೆಲೆಯಲ್ಲಿ ಭಾರಿ ಇಳಿಕೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ.

19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಈ ಮೂಲಕ ವಾಣಿಜ್ಯ ವಲಯದವರಿಗೆ ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್‌ ನೀಡಿದೆ ಸರ್ಕಾರ.

ತೈಲ ಮಾರುಕಟ್ಟೆಗಳಿಂದ ಬೆಲೆ ಪರಿಷ್ಕರಣೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 58.50 ರೂ.ಗಳಷ್ಟು ಕಡಿಮೆಯಾಗಿದ್ದು, ಇಂದಿನಿಂದಲೇ (ಜು.1) ಜಾರಿಗೆ ಬರಲಿದೆ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಹೊಸ ಚಿಲ್ಲರೆ ಬೆಲೆ ಈಗ 1,665 ರೂ. ಗಳಾಗಿದ್ದು, ಈಗಾಗಲೇ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳೊಂದಿಗೆ ಹೋರಾಡುತ್ತಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಅಡುಗೆ ತಯಾರಿಕರು ನಿಟ್ಟುಸಿರು ಬಿಡುವಂತಾಗಿದೆ.

14.2 ಕಿಲೋ ಸಿಲಿಂಡರ್‌ನ ಗೃಹ ಬಳಕೆ ಅಡಿಗೆ ಅನಿಲದ ಬೆಲೆಯನ್ನು ಕಳೆದ ಏಪ್ರಿಲ್‌ 7ರಂದು 805.50ರಿಂದ 855.50 ರೂ.ಗೆ ಹೆಚ್ಚಳ ಮಾಡಿದ್ದು, ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದು ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ, ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ.

ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಲ್​​ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ತಿಳಿಸಿದ್ದು, ಇಂದಿನಿಂದಲೇ ದರ ಅನ್ವಯವಾಗಲಿದೆ ಎಂದು ವಿವರಿಸಿದ್ದಾರೆ.

ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಏಪ್ರಿಲ್‌ನಲ್ಲಿ 41 ರೂ.ಗಳಷ್ಟು ಕಡಿಮೆ ಮಾಡಲಾಯಿತು. ನಂತರ ಮೇ ತಿಂಗಳಲ್ಲಿ 14.50 ರೂ. ಮತ್ತು ಜೂನ್‌ನಲ್ಲಿ 24 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು. ಇಂದು ಮತ್ತೆ 58.50 ರೂ.ಗಳಷ್ಟು ಕಡಿಮೆಯಾಗಿದ್ದು ಕಮರ್ಷಿಯಲ್ ಮಂದಿಗೆ ಖುಷಿ ನೀಡಿದೆ ಸರ್ಕಾರ.

Megha
the authorMegha

Leave a Reply

error: Content is protected !!