ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ಸಿಗಬೇಕಾದ ವೇತನ ಸೇರಿದಂತೆ ಇತರೆ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬುವುದು ನಮಗೆ ಗೊತ್ತಿದೆ. ಹೀಗಾಗಿ ಬಜೆಟ್ನಲ್ಲಿ ಒಂದೊಳ್ಳೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳ ಸಂಘಕ್ಕೆ ತಿಳಿಸಿದ್ದಾರೆ.
ಇಂದು ಕೆಎಸ್ಆರ್ಟಿಸಿ ಆಫೀಸರ್ಸ್ ವೆಲ್ಫೇರ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ನೇತೃತ್ವದಲ್ಲಿ ತಮ್ಮನ್ನು ಭೇಟಿ ಮಾಡಿದ ಅಧಿಕಾರಿಗಳ ಕುರಿತು ಮಾತನಾಡಿದ ಅವರು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ನಲ್ಲಿ ನಿಮಗೆ ಸಿಹಿ ಸುದ್ದಿಕೊಡಲಾಗುವುದು ಎಂದು ಹೇಳಿದರು.
![](https://vijayapatha.in/wp-content/uploads/2025/02/8-Feb-2025-Ashokapatila-1-300x157.jpg)
ಇನ್ನು ಅಧಿಕಾರಿಗಳು/ನೌಕರರಿಗೆ ಸುಮಾರು ಶೇ.40ರಷ್ಟು ವೇತನ ಕಡಿಮೆ ಇದೆ. ಇದನ್ನು ಸರಿ ಹೊಂದಿಸಬೇಕಾದರೆ ನಮಗೆ 7ನೇ ವೇತನ ಆಯೋಗ ಅನ್ವಯ ಮಾಡಬೇಕು ಎಂದು ಅಧಿಕಾರಿಗಳು ಒಕ್ಕೋರಿನಲಿ ಮನವಿ ಮಾಡಿದರು. ಅಧಿಕಾರಿಗಳ ಮನವಿಗೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು ನಮ್ಮ ಬೇಡಿಕೆ ಈಡೇರಲಿದೆ ಎಂದು ನಾಡಗೌಡ ತಿಳಿಸಿದರು.
ಕೆಎಸ್ಆರ್ಟಿಸಿ ಆಫೀಸರ್ಸ್ ವೆಲ್ಫೇರ್ ಅಸೋಸಿಯೇಷನ್ನಿಂದ ಮನವಿ ಸಲ್ಲಿಕೆ: 2025-2026 ನೇ ಸಾಲಿನ ಬಜೆಟ್ನಲ್ಲಿ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಾಗೂ ನೌಕರರಿಗೆ 7ನೇ ವೇತನ ಆಯೋಗವನ್ನು ಘೋಷಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕದ ಜನರ ಜೀವನಾಡಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಲ್ಲಿ ಪ್ರಸ್ತುತ 1.30 ಲಕ್ಷ ನೌಕರರನ್ನು ಹೊಂದಿದ್ದು, ಅದರಲ್ಲಿ ಅಧಿಕಾರಿಗಳ ಸಂಖ್ಯೆಯು 799 ಇದೆ. ಅಧಿಕಾರಿಗಳ ಸಂಖ್ಯೆಯು ಸಿಬ್ಬಂದಿಗಳಿಗೆ ಹೊಲಿಸಿದಲ್ಲಿ 1.45 ಇದ್ದು, ಇದು ಅತೀ ಕಡಿಮೆ ಪ್ರಮಾಣದಲ್ಲಿದೆ.
ಇನ್ನು ಅಕ್ಕ ಪಕ್ಕದ ರಾಜ್ಯದ ಅಧಿಕಾರಿಗಳ ಅನುಪಾತಕ್ಕೆ ಹೊಲಿಸಿದಾಗ ಇದು ಕಡಿಮೆ ಅನುಪಾತವಾಗಿದೆ. ಕಾರಣ ಕೊರತೆ ಇರುವ ಅಧಿಕಾರಿಗಳ ನೇಮಕಾತಿಯಾಗುವುದು ಅವಶ್ಯಕವಾಗಿದೆ. ರಾಜ್ಯದ ಜನತೆಗೆ ಉತ್ತಮವಾದ ಸೇವೆಯನ್ನು ನೀಡುವ ದೃಷ್ಟಿಯಿಂದ ಅಸ್ತಿತ್ವಗೊಂಡಿರುವ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಇದು ಒಂದು ವಾಣಿಜ್ಯ ಸಂಸ್ಥೆಯಾಗಿರದೇ, ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ.
ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡುವುದು ಮೊದಲ ಆದ್ಯತೆಯಾಗಿದೆ. ಭಾರತ ದೇಶದಲ್ಲಿ ಯಾವುದೇ ಸಾರಿಗೆ ಸಂಸ್ಥೆ ಲಾಭದಾಯಕವಾಗಿಲ್ಲ. ಸಂಸ್ಥೆಯ ಆಡಳಿತದಲ್ಲಿ ನಿಯಂತ್ರಣ ಸಾಧಿಸಲು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗನರ ಸಾರಿಗೆ ಸಂಸ್ಥೆ ಈ ನಾಲ್ಕು ಸಂಸ್ಥೆಗಳು ಸ್ವತಂತ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ನಡುವೆ ಇತ್ತೀಚಿನ ದಿನಗಳಲ್ಲಿ ಸರಕಾರದ ಶಕ್ತಿಯೋಜನೆಯಿಂದ ಸಂಸ್ಥೆಗೆ ಸ್ವಲ್ಪ ಶಕ್ತಿ ಬಂದಂತಾಗಿ ಚೇತರಿಸಿಕೊಳ್ಳುತ್ತಿದೆ. ಇದರ ಜತೆಗೆ ಅಧಿಕಾರಿಗಳು/ನೌಕರರಿಗೂ 7ನೇ ವೇಥನ ಆಯೋಗದಂತೆ ವೇತನ ಜಾರಿ ಮಾಡಿದರೆ ಆರ್ಥಿಕವಾಗಿ ನಾವು ಸಬಲರಾಗುತ್ತೇವೆ ಎಂದು ಮನವಿ ಮಾಡಿದರು.
ಸಂಸ್ಥೆಗಳನ್ನು ಇನ್ನೂ ಉತ್ತಮ, ಆರ್ಥಿಕ, ಸ್ವಾವಲಂಬಿಯಾಗಿ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹಾಗೂ ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅನುಭವಿ ಹಾಗೂ ಹಿರಿಯ ಅಧಿಕಾರಿಗಳಿಂದ ಸಮಾಲೋಚನೆ ಮಾಡಿ ಸಂಸ್ಥೆಯ ಪುನರ್ಜೀವನಕ್ಕೆ ಹಾಗೂ ಅವರ ಪ್ರಸ್ತುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ಸಲ್ಲಿಸುತ್ತಿದ್ದೇವೆ.
ಅಧಿಕಾರಿಗಳಿಗೂ ಇಂದಿನ ದಿನಕ್ಕೆ ತಕ್ಕಂತೆ ವೇತನ ಪರಿಷ್ಕರಿಸುವುದು ಅಗತ್ಯವಿದೆ. ಈಗಾಗಲೇ ಸರಕಾರ ಸರಕಾರಿ ರಾಜ್ಯ ನೌಕರರಿಗೆ 7ನೇ ವೇತನ ಅನುಷ್ಠಾನಗೊಳಿಸಿದೆ. ಕ.ರಾ.ರ.ಸಾ.ಸಂಸ್ಥೆಯ ಅಧಿಕಾರಿಗಳು Trade Union ವ್ಯಾಪ್ತಿಗೆ ಬರುವುದಿಲ್ಲ ಹೀಗಾಗಿ ನಮಗೂ ಅದೇ ವೇತನ ಆಯೋಗ ಅನುಷ್ಠನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾರಿಗೆಯ ಎಲ್ಲ ಸಂಘಟನೆಗಳು ಒಗ್ಗೂಡಬೇಕು: ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ವೇತನ ಪರಿಷ್ಕರಣೆಯಿಂದ ಅಧಿಕಾರಿಗಳು/ನೌಕರರು ಪ್ರಸ್ತುತ ಶೇ.40 ವೇತನ ಪಡೆಯುವಂತಾಗಿದೆ. ಹಿನ್ನೆಲೆಯಲ್ಲಿ ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಸೇರಿದಂತೆ ಇತರೆ ಸೌಲಭ್ಯಗಳು ಸಿಗಬೇಕಾದರೆ ಸಾರಿಗೆಯ ಎಲ್ಲ ಸಂಘಟನೆಗಳು ಒಗ್ಗೂಡಬೇಕು ಆಗ ಮಾತ್ರ ಸರ್ಕಾರ ಮತ್ತು ಆಡಳಿತ ಮಂಡಳಿ ನಮ್ಮ ಬೇಡಿಕೆಗೆ ಸ್ಪಂದಿಸುತ್ತದೆ. ಹೀಗಾಗಿ ತಮ್ಮ ತಮ್ಮ ಏನೇ ವೈಯಕ್ತಿಕ ಹಿತಾಸಕ್ತಿ ಹಾಗೂ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ ನೌಕರರಿಗಾಗಿ ಒಗ್ಗಟ್ಟಿನಿಂದ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅಧಿಕಾರಿಗಳ ಸಂಘದ ಅಧ್ಯಕ್ಷ ಅಶೋಕ ರು. ಪಾಟೀಲ್ ಮನವಿ ಮಾಡಿದ್ದಾರೆ.
ಸಂಘದ ಉಪಾಧ್ಯಕ್ಷ ಬಿ.ಎನ್. ಸತೀಶ, ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ವೈ.ಎಂ.ಶಿವರಡ್ಡಿ, ಉಪಾಧ್ಯಕ್ಷ ರಫೀಕ ಅಹಮದ್ ನಾಗನೂರ, ನಿರ್ದೇಶಕರು. ಸುಬಾನಿ ಮುಲ್ಲಾ, ಕೆ.ಎಸ್.ಆರ್.ಟಿ.ಸಿ.ಸಿಬ್ಬಂದಿ ಲೆಕ್ಕಪತ್ರ ಮೇಲ್ವಿಚಾರಕ ಅಧೀಕ್ಷಕ ಕ್ಷೇಮಾಭಿವೃದ್ಧಿ ಸಂಘದ ಕಾನೂನು ಸಲಹೆಗಾರ ತಿಪ್ಪೇಶ್ವರ ಅಣಜಿ ಮತ್ತಿತರರು ಇದ್ದರು.