NEWSದೇಶ-ವಿದೇಶನಮ್ಮರಾಜ್ಯ

ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಇಂಧನದ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಕಡಿತ ಮಾಡಿದೆ.

ಜಾಗತಿಕವಾಗಿ ತೈಲ ವೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕವಿದ್ದರೂ, ಕೇಂದ್ರ ಸರ್ಕಾರದ ಈ ಸುಂಕ ಕಡಿತದಿಂದಾಗಿ ಭಾರತದಲ್ಲಿ ತೈಲ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿರಲಿವೆ ಅಥವಾ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿವೆ.

ಪೆಟ್ರೋಲ್ ಮೇಲಿನ ಸುಂಕವನ್ನು ಪ್ರತಿ ಲೀಟರ್ಗೆ ₹2ರಿಂದ 3ರಷ್ಟು ಮತ್ತು ಡೀಸೆಲ್ ಮೇಲಿನ ಸುಂಕವನ್ನು ₹150 ರಷ್ಟು ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಯುದ್ಧದ ಹಿನ್ನೆಲೆಯಲ್ಲಿ ಸಾರಿಗೆ ವೆಚ್ಚ ಹೆಚ್ಚಾಗದಂತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಯಲು ಸರ್ಕಾರ ಈ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ತೈಲ ಕಂಪನಿಗಳಿಗೆ ಸೂಚನೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಾಭಾಂಶವನ್ನು ಗ್ರಾಹಕರಿಗೆ ತಲುಪಿಸುವಂತೆ ಮತ್ತು ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಲು ತೈಲ ಕಂಪನಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Megha
the authorMegha

Leave a Reply

error: Content is protected !!
Latest news
ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ BMTC-KSRTC: ನಾಳೆ EPS ಪಿಂಚಣಿದಾರರ ಕನಿಷ್ಠ ಪಿಂಚಣಿ ₹7,500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ... KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ